ಪಿಯು ಫಲಿತಾಂಶ: 91 ಕಾಲೇಜುಗಳಲ್ಲಿ ಶೂನ್ಯ ಸಂಪಾದನೆ

Written By:
Subscribe to Oneindia Kannada

ಬೆಂಗಳೂರು, ಮೇ 25 : ಈ ಬಾರಿಯ ಪಿಯು ಫಲಿತಾಂಶದಲ್ಲಿ ಒಟ್ಟು 91 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಸರ್ಕಾರಿ ಕಾಲೇಜು 1, ಅನುದಾನಿತ ಕಾಲೇಜು 1, ಅನುದಾನರಹಿತ ಕಾಲೇಜು 88, ವಿಭಜಿತ ಕಾಲೇಜು 1 ಶೂನ್ಯ ಫಲಿತಾಂಶ ನೀಡಿವೆ. ಕಳೆದ ಮೂರು ವರ್ಷಗಳಲ್ಲಿ ಇದೆ ಕಳಪೆ ಫಲಿತಾಂಶವಾಗಿದೆ.

ಶೇ 90.48ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಶೇ 90.35ರಷ್ಟು ಫಲಿತಾಂಶ ಪಡೆದಿರುವ ಉಡುಪಿ ದ್ವಿತೀಯ ಸ್ಥಾನ, ಶೇ 79.35 ರಷ್ಟು ಫಲಿತಾಂಶ ಪಡೆದಿರುವ ಕೊಡಗು ಮೂರನೇ ಸ್ಥಾನದಲ್ಲಿದೆ.[ಪಿಯು ಫಲಿತಾಂಶ : ದಕ್ಷಿಣ ಕನ್ನಡ ಫಸ್ಟ್, ಯಾದಗಿರಿ ಲಾಸ್ಟ್]

2nd puc

ಕಳೆದ ಸಾಲಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ.3ರಷ್ಟು ಇಳಿಕೆಯಾಗಿದೆ. 2014-15ನೇ ಸಾಲಿನಲ್ಲಿ ಫಲಿತಾಂಶ ಶೇ.60.54 ಆಗಿತ್ತು. ಆದರೆ 2015-16ರಲ್ಲಿ ಇದು ಶೇ.57.20 ಆಗಿದೆ. ಒಟ್ಟು 6,36,368 ಮಂದಿ ಪರೀಕ್ಷೆ ಬರೆದಿದ್ದರು. ಇವರಲ್ಲಿ ಹಾಜರಾದ ಹೊಸ ವಿದ್ಯಾರ್ಥಿಗಳು ಶೇ.68.65ರಷ್ಟು, ಖಾಸಗಿ ಅಭ್ಯರ್ಥಿಗಳು ಶೇ.25.62 ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಶೇ.25.07ರಷ್ಟು ಫಲಿತಾಂಶ ದಾಖಲಿಸಿದ್ದಾರೆ.[2ನೇ ಪಿಯುಸಿ ಫಲಿತಾಂಶ: ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ?]

ವಿದ್ಯಾರ್ಥಿನಿಯರೇ ಮುಂದೆ
ಉತ್ತೀರ್ಣರಾದವರಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟು ಶೇ. 64.78ರಷ್ಟು ಬಾಲಕೀಯರು ಉತ್ತೀರ್ಣರಾಗಿದ್ದು, ಶೇ.50.02ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. 2015ರಲ್ಲಿ ಇವರು ತಲಾ ಶೇ.68.24 ಹಾಗೂ ಶೇ.53.09ರಷ್ಟು ಫಲಿತಾಂಶ ಗಳಿಸಿದ್ದರು. ಒಟ್ಟು 1032 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಸಲಾಗಿತ್ತು.

ನಗರ ವಿದ್ಯಾರ್ಥಿಗಳ ಮೇಲುಗೈ
ಪರೀಕ್ಷೆ ಬರೆದವರಲ್ಲಿ ನಗರ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಶೇ.57.36ರಷ್ಟು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ.56.66 ಅಂಕ ಗಳಿಸಿದ್ದಾರೆ. ವಿಭಾಗವಾರು ಗಮನಿಸಿದರೆ ಕಲಾ ವಿಭಾಗದಲ್ಲಿ ಶೇ.42.12, ವಾಣಿಜ್ಯ ವಿಭಾಗದಲ್ಲಿ ಶೇ.64.16 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.66.25 ಅಂಕ ಪಡೆದಿದ್ದಾರೆ.[ಬಾಳೆ ಹಣ್ಣು ವ್ಯಾಪಾರಿ ಮಗಳು ರಾಜ್ಯಕ್ಕೆ ಪ್ರಥಮ]

ಜಾತಿವಾರು ಫಲಿತಾಂಶ
ಜಾತಿವಾರು ಗಮನಿಸಿದಾಗ ಪರಿಶಿಷ್ಟ ಜಾತಿ ಶೇ.44.79, ಪರಿಶಿಷ್ಟ ಪಂಗಡ ಶೇ.46.88, ಪ್ರವರ್ಗ-1 ಶೇ.54.85, 2-ಎ ಶೇ.61.92, 2-ಬಿ ಶೇ.53.79, 3-ಎ ಶೇ.63.53, 3-ಬಿ ಶೇ.61.73 ಹಾಗೂ ಸಾಮಾನ್ಯ ವರ್ಗ ಶೇ.64.32 ಫಲಿತಾಂಶ ದಾಖಲಾಗಿದೆ.

ಮಾಧ್ಯಮವಾರು ಫಲಿತಾಂಶ
ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.46.89 ಹಾಗೂ ಆಂಗ್ಲ ಭಾಷೆಯಲ್ಲಿ ಬರೆದ ಶೇ.65.71 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.

ಶ್ರೇಣಿವಾರು ಫಲಿತಾಂಶ
ಒಟ್ಟಾರೆ ಫಲಿತಾಂಶದಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದವರು 41,373, ಶೇ.60ಕ್ಕಿಂತ ಹೆಚ್ಚು ಶೇ.85ಕ್ಕಿಂತ ಕಡಿಮೆ ಅಂಕಗಳಿಸಿದವರು 1,89,791, ಶೇ.50ರಿಂದ 60ರ ನಡುವೆ ಫಲಿತಾಂಸ ದಾಖಲಿಸಿದವರು 78,301, ಶೇ.50ಕ್ಕಿಂತ ಕಡಿಮೆ ಅಂಕ ಪಡೆದವರು 54,548 ಮಂದಿ ಇದ್ದಾರೆ.

ಪರಿಶಿಷ್ಟ ಜಾತಿ ವಿಭಾಗ
ಅತಿ ಹೆಚ್ಚು ಅಂಕ ಗಳಿಸಿದವರ ವಿವರ ಪರಿಶಿಷ್ಟ ಜಾತಿಯಲ್ಲಿ ಕಲಾ ವಿಭಾಗ 580, ವಾಣಿಜ್ಯ 585, ವಿಜ್ಞಾನ 593, ಪರಿಶಿಷ್ಟ ಪಂಗಡ ಕಲಾ ವಿಭಾಗ 565, ವಾಣಿಜ್ಯ 580, ವಿಜ್ಞಾನ 596 ಬಂದಿದ್ದಾರೆ. ವಿಕಲಚೇತನರಲ್ಲಿ ದೃಷ್ಟಿ ಮಾಂದ್ಯರು ಹಾಜರಾದವರು 387 ಮಂದಿ ಪಾಸಾದವರು 21 ಮಂದಿ ಫಲಿತಾಂಶ ಶೇ. 55.56 ಉಳಿದಂತೆ ಶ್ರವಣದೋಶ ಹಾಗೂ ವಾಕ್‍ ದೋಶ ಉಳ್ಳವರು ಶೇ.35.48, ಆರ್ಥೊ ಶೇ.47.83 ಹಾಗೂ ಡಿಸ್‍ಲೆಕ್ಸಿಯಾ ಶೇ.55.02 ಫಲಿತಾಂಶ ಸಾಧಿಸಿದ್ದಾರೆ.

ಮರು ಮೌಲ್ಯಮಾಪನ-ಪೂರಕ ಪರೀಕ್ಷೆ
ಮರು ಮೌಲ್ಯಮಾಪನಕ್ಕೆ ಜೂನ್ 7 ಕಡೆಯದಿನ, ಇದರ ಶುಲ್ಕ 1260 ರೂ. ಅಂಕ ಮರು ಎಣಿಕೆಗೆ ಕೂಡ ಜೂನ್ 7 ಕಡೆಯ ದಿನವಾಗಿದೆ. ಇದಕ್ಕೆ ಶುಲ್ಕ ಇರುವುದಿಲ್ಲ. ಜುಲೈ 1ರಿಂದ ಪೂರಕ ಪರೀಕ್ಷೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka 2nd PU results 2015 announced by Department of Pre-University Education (UAE) on 25th May 2016. Overall passing percentage of Pre-University students across the state has seen 3.34% slide as against last year. In 2015 March PU test, the state secured 60.54 percent, while this year state only managed to score 57.20percent. This is worst in three years. In 2013, the state scored 59.36percent and in 2014 it was 60.47percent.
Please Wait while comments are loading...