ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಟಾಪರ್‌ಗಳ ಪಟ್ಟಿ
ಬೆಂಗಳೂರು, ಜುಲೈ 14: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ವಾಣಿಜ್ಯ ವಿಜ್ಞಾನ, ಕಲಾ ವಿಭಾಗದಲ್ಲಿ ಯಾರು ಹೆಚ್ಚು ಅಂಕವನ್ನು ಗಳಿಸಿದ್ದಾರೆ ಎನ್ನುವುದನ್ನು ನೋಡೋಣ.
ಈ ವರ್ಷ ಒಟ್ಟು 6.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ಶೇಕಡಾ 69.20ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 5.56 ಲಕ್ಷ ಮೊದಲ ಸಲ ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 3.84,947 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 91,025 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಇವರಲ್ಲಿ 25,602 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ವಿಜ್ಞಾನ ವಿಭಾಗ: ಅಭಿಜ್ಞಾ ರಾವ್(ಪ್ರಥಮ) ವಿದ್ಯೋದಯ ಪಿಯು ಕಾಲೇಜು ಉಡುಪಿ
ಪ್ರೇರಣಾ ಎಂ.ಎನ್( ದ್ವಿತೀಯ) ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು ಮಲ್ಲೇಶ್ವರ
ಆಕಾಂಕ್ಷ ಪೈ( ತೃತೀಯ) ಆರ್‌ವಿ ಪಿಯು ಕಾಲೇಜು ಜಯನಗರ

ವಾಣಿಜ್ಯ: ಟಿಸಿಎಸ್ ಅರವಿಂದ್ ಶ್ರೀವಾತ್ಸವ್(ಪ್ರಥಮ), ವಿದ್ಯಾಮಂದಿರ ಇಂಡಿಪೆಂಡೆಂಟ್ ಪಿಯು ಕಾಲೇಜು ಮಲ್ಲೇಶ್ವರ
ಬೃಂದಾ ಜೆಎನ್(ದ್ವಿತೀಯ) ಎಜಿಎಸ್ ಗರ್ಲ್ಸ್ ಪಿಯು ಕಾಲೇಜು ಮೈಸೂರು
ಸಿಂಧು ಜಿಎಂ(ತೃತೀಯ) ಗವರ್ನಮೆಂಟ್ ಪಿಯು ಕಾಲೇಜು ಸಾಗರ
ಕಲಾ ವಿಭಾಗ: ಕಾಮೇಗೌಡ ದಾಸನಗೌಡ(ಪ್ರಥಮ), ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ
ಸ್ವಾಮಿ ಆರ್‌ಎಂ(ದ್ವಿತೀಯ) ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ
ಮೊಹಮ್ಮದ್ ರಫೀಕ್ ಎಚ್(ತೃತೀಯ)ಇಂದು ಇಂಡಿಪೆಂಡೆಂಟ್ ಪಿಯು ಕಾಲೇಜು, ಬಳ್ಳಾರಿ
ಶೇಕಡಾ 90.71 ರಷ್ಟು ಫಲಿತಾಂಶ ಪಡೆದಿರುವ ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. 81.53ರಷ್ಟು ಫಲಿತಾಂಶ ಹೊಂದಿರುವ ಕೊಡಗು ಎರಡನೇ ಸ್ಥಾನ ಪಡೆದುಕೊಂಡಿದೆ. 80.97 ರಷ್ಟು ಫಲಿತಾಂಶ ಪಡೆದಿರುವ ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. 54.22ರಷ್ಟು ಫಲಿತಾಂಶ ಹೊಂದಿರುವ ವಿಜಯಪುರ ಕೊನೆ ಸ್ಥಾನದಲ್ಲಿದೆ. ಕಲಾ ವಿಭಾಗದಲ್ಲಿ ಶೇಕಡಾ 41.27ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, ವಿಜ್ಞಾನ ವಿಭಾಗದಲ್ಲಿ ಶೇಕಡಾ 76.02ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 65.53ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.












Click it and Unblock the Notifications