Karnataka 2nd PUC Results 2025: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಅಂಕಗಳೆಷ್ಟು?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (ಕೆಎಸ್‌ಇಎಬಿ) ಏಪ್ರಿಲ್ 8ರಂದು (ಇಂದು) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳೆಲ್ಲ ಫಲಿತಾಂಶ ನೋಡಲು ತುಸು ಆತಂಕದಲ್ಲಿದ್ದಾರೆ. ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ karreults.nic.in ಅಥವಾ kseeb.kar.nic.in ನಲ್ಲಿ ಪಡೆಯಬಹುದು. ವಿದ್ಯಾರ್ಥಿಗಳು 12ನೇ ತರಗತಿಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಚೆಕ್ ಮಾಡಲು ಪ್ರವೇಶ ಪತ್ರದಲ್ಲಿ ನಮೂದಿಸಲಾದ ತಮ್ಮ ರೋಲ್ ನಂಬರ್ ಅನ್ನು ಹೊಂದಿರಬೇಕು. ಇನ್ನು ಈ ಪರೀಕ್ಷೆಗಳಲ್ಲಿ ಕನಿಷ್ಠ ಅಂಕಗಳೆಷ್ಟು, ಗ್ರೇಡಿಂಗ್ ವ್ಯವಸ್ಥೆ ಹೇಗಿದೆ? ಹಾಗೂ ಪರೀಕ್ಷೆಗೆ ಅರ್ಹತೆ ಪಡೆಯಲು ನಿಮಗೆ ಬೇಕಾದ ಕನಿಷ್ಠ ಅಂಕಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಈ ವರ್ಷದ ಕರ್ನಾಟಕ ಪಿಯುಸಿ ದ್ವಿತೀಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಶೇಕಡಾ 33 ಅಂಕಗಳನ್ನು ಪಡೆಯಬೇಕು. ಕನಿಷ್ಠ ಅರ್ಹತೆಯನ್ನು ತಪ್ಪಿಸಿಕೊಂಡವರಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗುವುದು. ಶಿಕ್ಷಕರು ವಿದ್ಯಾರ್ಥಿಗಳಿಗೆ ಶೇಕಡಾ 5ರಷ್ಟು ಗ್ರೇಸ್ ಅಂಕಗಳನ್ನು ಮಾತ್ರ ನೀಡಬಹುದು. ಕಡಿಮೆ ಅಂಕ ಗಳಿಸಿದವರು ಮತ್ತೆ ಕಂಪಾರ್ಟ್‌ಮೆಂಟ್ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಎಲ್ಲಾ ವಿಷಯಗಳಲ್ಲಿ ಫೇಲ್ ಆದವರು ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದೆ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿ ವಿಷಯಕ್ಕೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಕೆಲವು ವಿಷಯಗಳು ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಒಳಗೊಂಡಿವೆ. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಈ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಸ್ವತಂತ್ರವಾಗಿ ಉತ್ತೀರ್ಣರಾಗಿರಬೇಕು ಎಂದು ಹೇಳಲಾಗಿದೆ.
ಪ್ರಾಯೋಗಿಕ ಪರೀಕ್ಷೆಗಳಿಲ್ಲದ ವಿಷಯಗಳಿಗೆ 20 ಅಂಕಗಳನ್ನು ಆಂತರಿಕ ಅಂಕಗಳೆಂದು ಪರಿಗಣಿಸಲಾಗುತ್ತದೆ. ಮೊದಲ ಮತ್ತು ಎರಡನೇ ಯೂನಿಟ್ ಪರೀಕ್ಷೆ ಮತ್ತು ಮಿಡ್ ಟರ್ಮ್ ಪರೀಕ್ಷೆಗಳ ಆಧಾರದ ಮೇಲೆ 10 ಅಂಕಗಳನ್ನು ನೀಡಲಾಗುತ್ತದೆ. ಉಳಿದ 10 ಅಂಕಗಳನ್ನು ಯೋಜನೆಗಳು (ಪ್ರಾಜೆಕ್ಟ್‌ಗಳು) ಮತ್ತು ಕಾರ್ಯಯೋಜನೆಗಳ (ಅಸೈನ್‌ಮೆಂಟ್) ಆಧಾರದ ಮೇಲೆ ನೀಡಲಾಗುತ್ತದೆ. ಭಾಷೆ, ಗಣಿತ ಮತ್ತು ಇತರ ಪ್ರಮುಖ ವಿಷಯಗಳಿಗೆ ಈ ಆಂತರಿಕ ಅಂಕಗಳು ಅನ್ವಯಿಸಲಿವೆ.

ಇನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ, ಅದೇ 70+30 ಅಂಕಗಳ ಯೋಜನೆ ಅನ್ವಯಿಸಲಿದೆ. ಅಂದರೆ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಥಿಯೆರಿ ಪರೀಕ್ಷೆಯಲ್ಲಿ 70 ಅಂಕಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕ 24. ಪ್ರಾಯೋಗಿಕ ಪರೀಕ್ಷೆಗೆ 30ರಲ್ಲಿ ವಿದ್ಯಾರ್ಥಿಗಳು ಕನಿಷ್ಠ 11 ಅಂಕಗಳನ್ನು ಗಳಿಸಲೇಬೇಕು. ಕಲಾ ವಿಭಾಗದವರಿಗೆ, ಸಮಾಜಶಾಸ್ತ್ರ, ಭೂಗೋಳ, ರಾಜ್ಯಶಾಸ್ತ್ರ ಮತ್ತು ಇತಿಹಾಸದಂತಹ ವಿಷಯಗಳ ಥಿಯರಿ ಪರೀಕ್ಷೆಯಲ್ಲಿ 80 ಅಂಕಗಳಲ್ಲಿ ವಿದ್ಯಾರ್ಥಿಗಳು 28 ಅಂಕಗಳನ್ನು ಪಡೆಯಬೇಕು. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳಿಗೆ ಈ ಅಂಕಗಳು ಅನ್ವಯಿಸಲಿವೆ.
ಗ್ರೇಡಿಂಗ್ ವ್ಯವಸ್ಥೆ ಹೇಗೆ?
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶ್ರೇಣಿ ವ್ಯವಸ್ಥೆಯ (ಗ್ರೇಡಿಂಗ್) ಪ್ರಕಾರ, 92-100ರ ನಡುವೆ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಗರಿಷ್ಠ 10ನೇ ಗ್ರೇಡ್ ನೀಡಲಾಗುವುದು. 83ರಿಂದ 91ರ ನಡುವೆ ಅಂಕಗಳನ್ನು ಗಳಿಸುವವರಿಗೆ 9ನೇ ಗ್ರೇಡ್ ನೀಡಲಾಗುತ್ತದೆ. 75ರಿಂದ 82ರವರೆಗೆ ಅಂಕ ಪಡೆಯುವ ವಿದ್ಯಾರ್ಥಿಗಳು 8ನೇ ಗ್ರೇಡ್ ಪಡೆಯುತ್ತಾರೆ. 67ರಿಂದ 74ರ ಅಂಕ ಪಡೆದರೆ 7ನೇ ಗ್ರೇಡ್, 59ರಿಂದ 66 ಅಂಕ ಪಡೆದರೆ 6ನೇ ಗ್ರೇಡ್, 51ರಿಂದ 58 ಅಂಕಕ್ಕೆ 5ನೇ ಗ್ರೇಡ್, 41ರಿಂದ 50 ಅಂಕಕ್ಕೆ 4ನೇ ಗ್ರೇಡ್, 35ರಿಂದ 40 ಅಂಕಕ್ಕೆ 3ನೇ ಗ್ರೇಡ್ ನೀಡಲಾಗುತ್ತದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications