Election: ಇಂದು ಮತ ಚಲಾಯಿಸಿದ ವಿಶೇಷ ಮತದಾರರು ಇವರೇ ನೋಡಿ
ಬೆಂಗಳೂರು, ಮೇ 07: ಕರ್ನಾಟಕ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನವು ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಇಂದು ಮೇ 7ರಂದು ಬೆಳಗ್ಗೆ ಆರಂಭವಾಗಿದೆ. ವಿವಿಧ ಜಿಲ್ಲೆಗಳ ಮತಗಟ್ಟೆ ಸಿಬ್ಬಂಧಿ, ಚುನಾವಣಾಧಿಕಾರಿಗಳು ಯುವ ಮತದಾರರು, ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಮತದಾರರು, ಹುಟ್ಟು ಅನಾರೋಗ್ಯ ಪೀಡಿತರು, ವಯೋವೃದ್ಧರು, ತೃತೀಯ ಲಿಂಗಿಗಳು ಹಾಗೂ ವಿಶೇಷ ಚೇತನರ ಮತದಾನಕ್ಕೆ ಸಾಕ್ಷಿಯಾದರು.
ಹೌದು, ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಇಂದು ತೃತೀಯ ಲಿಂಗಿ ಮತದಾರರು ಹೆಮ್ಮೆಯಿಂದ ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾದರ. ಇವು ತಮ್ಮ ಸಾಂವಿಧಾನಿಕ ಹಕ್ಕು, ಕರ್ತವ್ಯ ನಿಭಾಯಿಸಿದರು. ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ಇದ್ದು, ನಾವು ಮತ ಹಾಕಿದ್ದೇವೆ ನೀವು ಮತ ಹಾಕಿ ನಿಮ್ಮ ಹಕ್ಕು ಚಲಾಯಿಸಿ' ಎಂದು ಅವರು ಮನವಿ ಮಾಡಿದರು.

ಮತ ಹಾಕಿ ಗಮನ ಸೆಳೆದ ವಿಶೇಷ ಚೇತನರು
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಿನ್ನಾರ ಗ್ರಾಮ ಪಂಚಾಯಿತಿಯಲ್ಲಿ 'ವಿಷಯಾಧಾರಿತ ಮತಗಟ್ಟೆ'ಯಲ್ಲಿ ವಿಶೇಷ ಚೇತನ ಮತದಾರ ತಮ್ಮ ಹಕ್ಕು ಚಲಾಯಿಸಿದ್ದು, ಗಮನ ಸೆಳೆಯಿತು. ಕಲಬುರಗಿ ಜಿಲ್ಲೆಯಾದ್ಯಂತ ವಿಶೇಷಚೇನತರು ಮತ್ತು ಹಿರಿಯ ನಾಗರಿಕರು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಸ್ವಯಂ ಸೇವಕರು ಸಹಾಯ ಮಾಡಿದ್ದು ಕಂಡು ಬಂತು.
ಸಾಂಪ್ರದಾಯಿಕ-ಯುವ ಮತದಾರರು
ಕಲಬುರಗಿ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ ಮತಗಟ್ಟೆಯಲ್ಲಿ ಯುವ ಮತದಾರು ಅತ್ಯಂತ ಹುಮ್ಮಸ್ಸಿನಿಂದ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದರು.
ಶಿವಮೊಗ್ಗ ಜಿಲ್ಲೆಯ ಮುದ್ದಿನಕೊಪ್ಪ ಗ್ರಾಮದ ಮತಗಟ್ಟೆಯಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿ ಬಂದು ಮೊದಲ ಬಾರಿಗೆ ತನ್ನ ಮತ ಚಲಾಯಿಸಿದ ಯುವತಿಯ ಸಂಭ್ರಮ ಮುಗಿಲು ಮುಟ್ಟಿತ್ತು.

ಹುಟ್ಟಿನಿಂದಲೇ ಅನಾರೋಗ್ಯ ಪೀಡಿತ ಯುವಕನಿಂದ ಮತದಾನ
ವಿಶೇಷಚೇತನರಾಗಿರುವ ವಿನಾಯಕ ಮಲಕಪ್ಪ ಪಟೀಲ್ ಅವರು ಹುಟ್ಟಿನಿಂದಲೇ ಚರ್ಮ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದರು. ಇವರು ಮನೆಯಿಂದಲೇ ಮತ ಚಲಾಯಿಸಲು ಅವಕಾಶವಿದ್ದರೂ ಮತಗಟ್ಟೆಗೆ ಬಂದು ಮತಚಲಾಯಿದರು. ಈ ಮೂಲಕ ರಜೆ ಸಿಕ್ಕು ಮತ ಚಲಾಯಿಸದ ಅನೇಕ ಮಂದಿಗೆ ಇವರು ಮಾದರಿಯಾದರು.
ವಿಜಯನಗರ ಜಿಲ್ಲೆಯ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್ ಅವರು ಹೊಸಪೇಟೆ ನಗರದ ಸಂಡೂರ ರಸ್ತೆಯಲ್ಲಿನ ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿ ಆವರಣಕ್ಕೆ ಮತ ಚಲಾಯಿಸಲು ಆಗಮಿಸಿದರು. ಈ ವೇಳೆ ಮತಗಟ್ಟೆಗೆ ವಯೋವೃದ್ಧೆಯನ್ನು ಕೈ ಹಿಡಿದು ಮತಗಟ್ಟೆಗೆ ಕರೆ ತಂದರು. ಸೌಜನ್ಯ ಮತ್ತು ಆತ್ಮೀಯವಾಗಿ ಮಾತನಾಡಿ ಮತಗಟ್ಟೆಗೆ ಕಳುಹಿಸಿದರು.
ಆರೋಗ್ಯ ಸಚಿವಾಲಯದ ಸಲಹೆ
ಇನ್ನೂ ಇಂದಿನ ಮತದಾನ ಕುರಿತು ಪ್ರತಿಕ್ರಿಯಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಅಗತ್ಯ ಸಲಹೆಗಳೊಂದಿಗೆ ಎಲ್ಲ ತಪ್ಪದೇ ಮತದಾನ ಮಾಡಿ. ಬೇಸಿಗೆಯಲ್ಲಿ ತಂಪಾಗಿ ಮತ್ತು ಸುರಕ್ಷಿತವಾಗಿರಿ. ನಿಮ್ಮ ಮನೆಯನ್ನು ತಂಪಾಗಿಡುವುದರಿಂದ ಹಿಡಿದು ನಿಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳುವುದರವರೆಗೆ, ಈ ಬೇಸಿಗೆಯಲ್ಲಿ ನಾವು ಪರಸ್ಪರ ಕಾಳಜಿ ವಹಿಸೋಣ ಎಂಬ ಸಂದೇಶ ಸಾರಿದೆ.
ಸಾಂಪ್ರದಾಯಿಕ ಮತಗಟ್ಟೆ
ಕೆಲವೆಡೆ ಸಾಂಪ್ರದಾಯಿಕ ಮತಗಟ್ಟೆಗಳನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ಮತದಾನಕ್ಕೆ ಬಂದ ಮಹಿಳೆಯರು, ಲಂಬಾಣಿ ಇನ್ನಿತರ ಹಳ್ಳಿಯ ಸಾಂಪ್ರದಾಯಿಕ ಉಡುಪು ಧರಿಸಿ ಬಂಧಿದ್ದ ಮಹಿಳೆಯರು ಮತದಾನ ಹಕ್ಕು ಚಲಾಯಿಸಿದರು.












Click it and Unblock the Notifications