ಶಿಡ್ಲಘಟ್ಟದ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭೀಕರವಾಗಿ ಹತ್ಯೆ

Posted By:
Subscribe to Oneindia Kannada

ಚಿಕ್ಕಬಳ್ಳಾಪುರ, ನವೆಂಬರ್ 16: ಮಾಜಿ ಪುರಸಭಾ ಸದಸ್ಯ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾಗಿದ್ದ ವೆಂಕಟರಮಣಪ್ಪ (48) ಅವರನ್ನು ಬುಧವಾರ ಮುಂಜಾನೆ ಭೀಕರವಾಗಿ ಹತ್ಯೆ ಮಾಡಲಾಗಿದೆ.

ನಗರದ ವೆಂಕಟೇಶ್ವರ ಟಾಕಿಸ್ ಬಳಿ ಬೆಳಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬಂದಿದ್ದ ವೆಂಕಟರಮಣಪ್ಪ ಅವರ ಮೇಲೆ ಲಾಂಗು ಮಚ್ಚುಗಳಿಂದ ಹಲ್ಲೆ ಮಾಡಿ, ಕೊಚ್ಚಿ ಕೊಂದು ಹಾಕಲಾಗಿದೆ. ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Karave Sidlaghatta president Venkataramanappa hacked to death

ಮಾಜಿ ಪುರಸಭಾ ಸದಸ್ಯರಾಗಿರುವ ವೆಂಕಟರಮಣಪ್ಪ ಅವರು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಲ್ಲಿ ಗುರುತಿಸಿಕೊಂಡಿದ್ದರು. ಕರವೇ ಜಿಲ್ಲಾಧ್ಯಕ್ಷರಾಗಿ ಜನಪ್ರಿಯತೆ ಗಳಿಸಿದ್ದರು. ಆದರೆ, ಇವರ ಮೇಲೆ ಹಳೆ ದ್ವೇಷ ಇಟ್ಟುಕೊಂಡವರು ಹಲ್ಲೆ ನಡೆಸಿ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Rakshana Vedike(TA Narayana Gowda's) Sidlaghatta district unit president Ventakaramanappa hacked to death today by miscreants.
Please Wait while comments are loading...