Kantara-1: 'ಕಾಂತಾರಾ' ಚಿತ್ರತಂಡಕ್ಕೆ ಶಾಕ್: ಕಲಾವಿದರಿದ್ದ ಮಿನಿ ಬಸ್ ಪಲ್ಟಿ
Kantara Chapter-1: ರಿಶಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿತ್ತಿರುವ ಬಹುತಾರಾಗಣದ 'ಕಾಂತಾರಾ ಚಾಪ್ಟರ್ 1' ಸಿನಿಮಾ ತಂಡಕ್ಕೆ ಆಘಾತವೊಂದು ಎದುರಾಗಿದೆ. ಚಿತ್ರತಂಡದ ಕಲಾವಿದರು ಇದ್ದ ಮಿನಿ ಬಸ್‌ಗೆ ಅಪಘಾತವಾಗಿದೆ. ಕಲಾವಿದರಿದ್ದ ಬಸ್ ಪಲ್ಟಿಯಾಗಿದೆ. ಕೊಲ್ಲೂರು ವ್ಯಾಪ್ತಿಯಲ್ಲಿ ಭಾನುವಾರ ನವೆಂಬರ್ 24ರಂದು ರಾತ್ರಿ ಘಟನೆ ನಡೆದಿದ್ದರ ಬಗ್ಗೆ ವರದಿ ಆಗಿದೆ.
ಕಾಂತಾರಾ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಅನೇಕ ಶೂಟಿಂಗ್ ಲೋಕೇಷನ್ ನೋಡಿಕೊಂಡಿದ್ದ ಬಂದಿದ್ದ ರಿಶಬ್ ಶೆಟ್ಟಿ ಅವರು ಚಿತ್ರೀಕರಣಕ್ಕೆಂದು ಪ್ಲಾನ್ ಮಾಡಿದ್ದರು. ಅದರ ಭಾಗವಾಗಿ ಜ್ಯೂನಿಯರ್ ಆರ್ಟಿಸ್ಟ್ ಅವರು ಭಾನುವಾರ ಮಿನಿ ಬಸ್‌ನಲ್ಲಿ ಸಾಗುತ್ತಿದ್ದರು. ಆ ಬಸ್ ಪಲ್ಟಿಯಾಗಿ ಕಲಾವಿದರಿಗೆ ಗಾಯಗಳಾಗಿವೆ.

ಚಿತ್ರತಂಡವು ಪ್ಲಾನ್ ಪ್ರಕಾರ ಶೂಟಿಂಗ್ ಸ್ಪಾಟ್‌ಗೆ ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಮಿನಿಬಸ್‌ನಲ್ಲಿ ಕರೆದೊಯ್ಯತ್ತಿದ್ದರು ಎನ್ನಲಾಗಿದೆ. ಈ ವೇಳೆ ಕೊಲ್ಲೂರಿನ ಬಳಿ ಇರುವ ಜಡ್ಕಳ್ ಸಮೀಪ ಸುಮಾರು 20ಕ್ಕೂ ಅಧಿಕ ಜನರಿದ್ದ ಈ ಮಿನಿ ಬಸ್ ಪಲ್ಟಿಯಾಗಿದೆ. ಒಟ್ಟು ಕನಿಷ್ಠ 6-7 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಸಿನಿಮಾದ ಬಹುತೇಕ ಚಿತ್ರೀಕರಣ ನಡೆದಿದೆ. ಬಾಕಿ ಇದ್ದ ಶೂಟಿಂಗ್‌ಗೆ ತೆರಳುವಾಗಿ ಈ ಅವಘಡ ಸಂಭವಿಸಿದೆ. ರಿಶಬ್ ಶೆಟ್ಟಿ ಅವರೇ ನಿರ್ದೇಶಿಸಿ ನಟಿಸಿರುವ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಅವರು ಬಂಡವಾಳ ಹೂಡಿದ್ದಾರೆ. ಇಂದೊಂದು ಪ್ಯಾನ್ ಇಂಡಿಯಾಗೂ ಮೀರಿದ ಸಿನಿಮಾ ಆಗಲಿದೆ ಎಂಬ ಭರವಸೆ ಈಗಾಗಲೇ ಚಿತ್ರ ಹುಟ್ಟು ಹಾಕಿದೆ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮುಂದಿನ ವರ್ಷ 2025ರಲ್ಲಿ ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.
ಕಾಂತಾರಾ ಸಿನಿಮಾ ಕನ್ನಡದಲ್ಲಿಯೇ ಬಿಡುಗಡೆಯಾಗಿ ಭಾರತಾದ್ಯಂತ ಭಾರಿ ಸುದ್ದಿ ಮಾಡಿತ್ತು. ನಂತರ ವಿವಿಧ ಭಾಷೆಗಳಿಗೆ ಡಬ್ ಆಗಿ ಕನ್ನಡ ಚಿತ್ರರಂಗಕ್ಕೆ ಹೆಸರು ತಂದುಕೊಟ್ಟಿತ್ತು. ಅದರ ಪ್ರೀಕ್ವೆಲ್ ಕಥೆಯನ್ನು 'ಕಾಂತಾರಾ ಚಾಪ್ಟರ್ 1' ಎಂದು ಶಿರ್ಷಿಕೆ ಇಟ್ಟು ಶೂಟಿಂಗ್ ಆರಂಭಿಸಲಾಗಿದೆ.
ಸಿನಿಮಾ ಕುರಿತು ಟೀಸರ್, ಪೋಸ್ಟರ್ ಬಿಡುಗಡೆ ಬೆನ್ನಲ್ಲೆ ಇತ್ತೀಚೆಗಷ್ಟೇ ನಿರ್ದೇಶಕ ರಿಶಬ್ ಶೆಟ್ಟಿ ಅವರು ಸಿನಿಮಾ ಯಾವಾಗ ರಿಲೀಸ್ ಎಂಬುದರ ಅಪ್ಡೇಟ್ ಕೊಟ್ಟಿದ್ದರು. ಬಾಕಿ ಇರುವ ಶೂಟಿಂಗ್ ತೆರಳಿದ್ದ ವೇಳೆ ಕಲಾವಿದರಿದ್ದ ಬಸ್ ಅಪಘಾತವಾಗಿದೆ. ಸದ್ಯ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಸದ್ಯ ಗಾಯಾಳು ಕಲಾವಿದರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಚಿತ್ರತಂಡದಿಂದ ಅಧಿಕೃತ ಪ್ರತಿಕ್ರಿಯೆ ದೊರೆತರೆ ಅಪಘಾತದ ಸ್ಪಷ್ಟ ಇತರ ಮಾಹಿತಿಗಳು ಗೊತ್ತಾಗಲಿವೆ...












Click it and Unblock the Notifications