ತಮಿಳು ದಲಿತರ ಮತವನ್ನೇ ಪಡೆದು, ಅವರನ್ನೇ ಕೆಟ್ಟ ಕೆಟ್ಟದಾಗಿ ಬೈದ ಶಾಸಕ ಮುನಿರತ್ನ ನಾಯ್ಡು?
ಮುನಿರತ್ನ ನಾಯ್ಡು ಅಲಿಯಾಸ್ ಕುರುಕ್ಷೇತ್ರ ಮುನಿರತ್ನ ಹೆಸರು ಈಗ ದೇಶಾದ್ಯಂತ ಫುಲ್ ವೈರಲ್ ಆಗುತ್ತಿದೆ. ಯಾಕಂದ್ರೆ ದಲಿತರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿ, ಒಕ್ಕಲಿಗರ ಮನೆ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆದ ಆರೋಪ ಈಗ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಕೇಳಿಬಂದಿದೆ. ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಮಾತನಾಡಿದ್ದಾರೆ ಎಂದು ಆರೋಪನ ಮಾಡಿರುವ ಆಡಿಯೋ ವೈರಲ್ ಆಗ್ತಿದ್ದು, ತಮಿಳು ದಲಿತರ ಮತವನ್ನೇ ಪಡೆದು, ಅವರನ್ನೇ ಕೆಟ್ಟ ಕೆಟ್ಟದಾಗಿ ಬೈದ ಶಾಸಕ ಮುನಿರತ್ನ ನಾಯ್ಡು? ಅಂತ ಕನ್ನಡಿಗರು ಈಗ ಸೋಷಿಯಲ್...
ಮುನಿರತ್ನ ನಾಯ್ಡು ರಾಜರಾಜೇಶ್ವರಿ ನಗರದಲ್ಲಿ ಕೋಟೆಯನ್ನೇ ಕಟ್ಟಿಕೊಂಡಿದ್ದು, ಶಾಸಕ ಸ್ಥಾನಕ್ಕೆ ಪದೇ ಪದೇ ಆಯ್ಕೆ ಆಗುತ್ತಿದ್ದಾರೆ ಎಂಬುದು ಅವರ ಬೆಂಬಲಿಗರ ಮಾತು. ಹೀಗೆ, ಮುನಿರತ್ನ ನಾಯ್ಡು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋಟೆ ಕಟ್ಟಿಕೊಳ್ಳಲು ನೆರವು ನೀಡಿದ್ದು ಬೇರೆ ಯಾರೂ ಅಲ್ಲ, ತಮಿಳು ದಲಿತರ ಕುಟುಂಬಗಳು. ಹೀಗೆ ಇಂದಿಗೆ, ಮುನಿರತ್ನ ನಾಯ್ಡು ದೊಡ್ಡ ನಾಯಕನಾಗಿ ಬೆಳೆದು ನಿಲ್ಲಲು ಇದೇ ದಲಿತರು ತಮ್ಮ ರಕ್ತ ಕೂಡ ಹರಿಸಿದ್ದಾರೆ. ಆದರೂ ಶ್ರಮಜೀವಿ ದಲಿತರನ್ನ ಇದೀಗ ಜಾತಿವಾದಿ ಮುನಿರತ್ನ ನಾಯ್ಡು ತನ್ನ ಹೊಲಸು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪವನ್ನ ಕನ್ನಡಿಗರು ಈಗ ಮಾಡುತ್ತಿದ್ದಾರೆ!

ದಲಿತ ವಿರೋಧಿ ಮುನಿರತ್ನ ನಾಯ್ಡು?
ಮುನಿರತ್ನ ನಾಯ್ಡು ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರು ಭಾರಿ ಆಕ್ರೋಶ ಹೊರ ಹಾಕುತ್ತಿದ್ದು, ಕೂಡಲೇ ಜಾತಿ ನಿಂದನೆ ಮಾಡಿದ ಆರ್‌ಆರ್ ನಗರದ ಶಾಸಕ ಮುನಿರತ್ನ ನಾಯ್ಡು ಅರೆಸ್ಟ್ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ ಕನ್ನಡಿಗರು. ಪರಿಸ್ಥಿತಿ ಕೈಮೀರುತ್ತಿದ್ದು ದಲಿತಪರ ಸಂಘಟನೆಗಳು ಇದೀಗ ಮುನಿರತ್ನ ನಾಯ್ಡು ವಿರುದ್ಧ ಹೋರಾಟ ಆರಂಭಿಸೋಕೆ ಸಿದ್ಧವಾಗುತ್ತಿವೆ. ಹೀಗಿದ್ದಾಗ ಶಾಸಕ ಮುನಿರತ್ನ ನಾಯ್ಡು ನಾಪತ್ತೆ ಆಗಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಅಲ್ಲದೆ ಉಂಡ ತಟ್ಟೆಯಲ್ಲಿ ಗಲೀಜು ಮಾಡಿದ್ದು ಯಾರು? ಎನ್ನುತ್ತಾ ಇದೀಗ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ ಮೂಲಕ ಶಾಸಕ ಮುನಿರತ್ನ ನಾಯ್ಡುಗೆ ಪ್ರಶ್ನೆ ಕೇಳುತ್ತಿದ್ದಾರೆ.
ತಾಯಂದಿರನ್ನ ಮಂಚಕ್ಕೆ ಕರೆಯುತ್ತಾರಾ?
ಮುನಿರತ್ನ ನಾಯ್ಡು ವಿರುದ್ಧ ಜಾತಿ ನಿಂದನೆ & ಕೊಲೆ ಬೆದರಿಕೆ ಆರೋಪ ಕೇಳಿಬಂದಿರುವ ಹಿನ್ನೆಲೆ, ಡಿ.ಕೆ. ಸುರೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ಹಲವು ಆರೋಪಗಳನ್ನ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು. ಇದರ ಜೊತೆಯಲ್ಲೇ ಮುನಿರತ್ನ ನಾಯ್ಡು ಆವಾಜ್‌ಗೆ ಅಧಿಕಾರಿಗಳು ಭಯಗೊಂಡಿದ್ದರು. ಕೆಲ ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಂಡು ನೋವು ಹೊರ ಹಾಕಿದ್ದರು. ಹೀಗೆ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಇದೀಗ ಅಧಿಕಾರಿಗಳು ದೂರು ನೀಡಿದರೆ ಸರ್ಕಾರ ಅವರ ರಕ್ಷಣೆಗೆ ಬರುತ್ತದೆ ಎಂದಿದ್ದಾರೆ ಮಾಜಿ ಸಂಸದ ಡಿ.ಕೆ. ಸುರೇಶ್.
ಸರ್ಕಾರದಿಂದ ವಿಶೇಷ ತಂಡ ರಚನೆ?
ಇದೇ ವೇಳೆ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಆರೋಪ ಮಾಡಿರುವ ವಿಚಾರ ಪ್ರಸ್ತಾಪ ಮಾಡಿದ ಡಿ.ಕೆ. ಸುರೇಶ್ ಅವರು, ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಯಾರ ಹತ್ತಿರ ಮಾತನಾಡ್ತಿದ್ದೀನಿ, ಏನು ಮಾತನಾಡ್ತಿದ್ದೀನಿ ಅನ್ನೋದು ಇಲ್ಲ, ತಾಯಂದಿರನ್ನ ಮಂಚಕ್ಕೆ ಕರೆಯುತ್ತಾರೆ ಎಂದು ಶಾಸಕ ಮುನಿರತ್ನ ನಾಯ್ಡು ವಿರುದ್ಧವೇ ಡಿ.ಕೆ. ಸುರೇಶ್ ಅವರು ಆಕ್ರೋಶ ಹೊರ ಹಾಕಿದರು. ಅಲ್ಲದೆ ಈ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸುತ್ತದೆ ಎಂಬ ವಿಚಾರ ಕೂಡ ಪ್ರಸ್ತಾಪ ಮಾಡಿದರು.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications