Get Updates
Get notified of breaking news, exclusive insights, and must-see stories!

ಹೊಸ ಮೈಲಿಗಲ್ಲು ದಾಟಿದ ಕನ್ನಡ ಮುಕ್ತ ಶಬ್ದಕೋಶ ವಿಕ್ಷನರಿ

ಕನ್ನಡ ವಿಕ್ಷನರಿಗೆ ನಲ್ಬರವು. ಇದು ಮಿಂಬಲೆಯಲ್ಲಿ ಸಾಮಾನ್ಯ ಕನ್ನಡಿಗರಿಂದಲೇ ಕಟ್ಟಲಾಗುತ್ತಿರುವ ಪದನೆರಕೆ/ಶಬ್ದಕೋಶ. ನೀವೂ ಪದಗಳನ್ನು ಸೇರಿಸಿ ಕನ್ನಡ ವಿಕ್ಷನರಿಯನ್ನು ಮತ್ತಷ್ಟು ಉಪಯುಕ್ತವಾಗಿಸಬಹುದು! ಎಂಬ ಒಕ್ಕಣೆ ಹೊಂದಿರುವ ವಿಕ್ಷನರಿ ಶಬ್ದಕೋಶ ಈಗ ಎರಡು ಲಕ್ಷಪದಗಳ ಸಂಪತ್ತನ್ನು ಹೊಂದಿದೆ.

ಇದೆಲ್ಲವೂ ಸಮಾನ ಮನಸ್ಕರ ಸಂಘಟಿತ ಪ್ರಯತ್ನದ ಕೊಡುಗೆಯಾಗಿದ್ದು, ಕನ್ನಡಿಗರ ನಿತ್ಯ ಬಳಕೆಯ ಯೋಗ್ಯವಾಗಿದೆ. ವಿಕ್ಷನರಿ ತಂಡದ ಬಗ್ಗೆ ಹೊನಲು.ನೆಟ್ ತಂಡದ ಸದಸ್ಯರಲ್ಲಿ ಅನೇಕರು ಈ ವಿಕ್ಷನರಿಗೆ ಪದ ಸೇರಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ವಿಕ್ಷನರಿ ತಂಡಕ್ಕೆ ಶುಭ ಹಾರೈಸುತ್ತಾ.. ಮೈಲಿಗಲ್ಲು ಮುಟ್ಟಿದ ಸಂಭ್ರಮದ ಬಗ್ಗೆ ನಾಲ್ಕು ಮಾತು ಆಡುಭಾಷೆಯಲ್ಲಿದೆ. [ಓದಿ: ವಿಕ್ಷನರಿಯ ಮಹತ್ವ ಏನು?]

ಎರಡು ಲಕ್ಶ ಐವತ್ತು ಸಾವಿರ ಪದಗಳ ಮೈಲಿಗಲ್ಲನ್ನು ಮುಟ್ಟಿದೆ. ಸಾಮಾನ್ಯ ಮಂದಿಯ ದುಡಿಮೆಯಿಂದ ಕಟ್ಟಲಾಗುತ್ತಿರುವ ಈ ಪದನೆರಕೆಯಿಂದ ಕನ್ನಡ ಸಮಾಜಕ್ಕೆ ಹಲವು ಬಗೆಯಲ್ಲಿ ಪ್ರಯೋಜನವಾಗುತ್ತದೆ. ಹಾಗೆ ನೋಡಿದರೆ ಕನ್ನಡ ಸಮಾಜ ಈಗಾಗಲೇ ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದೆ.

ಕನ್ನಡ ಪದಗಳ ಹುರುಳುಗಳನ್ನು ಮತ್ತು ಅವುಗಳ ಬಳಕೆಯ ಬಗೆಗಳನ್ನು ಒದಗಿಸುವುದಲ್ಲದೆ ಇಂಗ್ಲೀಶ್ ಪದಗಳಿಗೆ ಕನ್ನಡ ಪದಗಳನ್ನೂ ಮತ್ತು ಕನ್ನಡ ಪದಗಳಿಗೆ ಇಂಗ್ಲಿಶ್ ಪದಗಳನ್ನೂ ಒದಗಿಸುತ್ತದೆ. [ಕನ್ನಡ ಉಚಿತ ಶಾಲೆಯಲ್ಲಿ ಅಚ್ಚರಿ ಖಚಿತ]

ಜೊತೆಯಲ್ಲಿ ಕನ್ನಡ ಪದಗಳಿಗೆ ಇತರೆ ನುಡಿಗಳಲ್ಲೂ ಅದೇ ಹುರುಳಿನ ಪದಗಳನ್ನು ಇಲ್ಲಿ ಪಡೆಯಬಹುದಾಗಿದೆ. ಈ ಅನುಕೂಲಗಳನ್ನು ಯಾರು ಬೇಕಾದರೂ, ಪ್ರಪಂಚದ ಯಾವ ಮೂಲೆಯಿಂದಾದರೂ ನಡುಬಲೆಯ ಮೂಲಕ ಬಿಟ್ಟಿಯಾಗಿ ಪಡೆಯಬಹುದು ಎಂಬುದು ವಿಕ್ಶನರಿಯ ಹೆಚ್ಚುಗಾರಿಕೆಯನ್ನು ತೋರಿಸುತ್ತದೆ. [ಪುಸ್ತಕ ಓದಲೊಂದು ವೆಬ್ ತಾಣ]

Kannada Wiktionary reaches milestone

ಯಾವುದೇ ನುಡಿಯಲ್ಲಿ ತಿಳಿವಿನ ಬರಹಗಳನ್ನು ಇಲ್ಲವೇ ಇನ್ನಾವುದೇ ಬಗೆಯ ತಿಳಿವಿನ ಸರಕನ್ನು ಕಟ್ಟಲು ಬೇಕಾಗುವ ಅಡಿಪಾಯವೇ ಪದಗಳು. ಕನ್ನಡ ಪದಗಳು ಹೀಗೆ ಸುಲಬವಾಗಿ ದೊರೆಯಬಲ್ಲವಾದರೆ ಮುಂದೆ ಕನ್ನಡದಲ್ಲಿ ತಿಳಿವಿನ / ಅರಿವಿನ ಕಣಜಗಳನ್ನು ಕಟ್ಟುವ ಕೆಲಸದಲ್ಲಿ ವಿಕ್ಶನರಿಯ ಪಾಲು ದೊಡ್ಡದಾಗುತ್ತದೆ.

ವಿಕ್ಶನರಿಯ ಪದಗಳು APIಗಳ ಮೂಲಕವೂ ದೊರಕುತ್ತವೆ. ಹಾಗಾಗಿ ಇದನ್ನು ಕಂಪ್ಯೂಟರ್ ಮತ್ತು ಸ್ಮಾರ‍್ಟ್ ಪೋನ್ ಗಳ ಹಮ್ಮುಗೆಗಳು (programs) ಮತ್ತು ಬಳಕಗಳು (apps) ನೇರವಾಗಿ ಬಳಸಿಕೊಳ್ಳಬಹುದು. ಇಂತಹ ಅನುಕೂಲದಿಂದ ಹಮ್ಮುಗೆಗಳಿಗೆ ಕನ್ನಡ ಪದಗಳು ನೇರವಾಗಿ ಸಿಗಬಹುದಲ್ಲದೆ ಅವು ಇಂಗ್ಲೀಶ್ ಪದಗಳಿಗೆ ಹಾಗೂ ಪದಕಂತೆಗಳಿಗೆ ಕನ್ನಡದ ನುಡಿಮಾರ‍್ಪುಗಳನ್ನು ನೇರವಾಗಿ ಪಡೆಯಬಲ್ಲವು. [ಫೇಸ್ ಬುಕ್ ಈಗ ಕನ್ನಡ ಭಾಷೆಯಲ್ಲಿ]

ಪದಗಳ ಎಣಿಕೆಯಲ್ಲಿ ಪ್ರಪಂಚದ ಎಲ್ಲ ನುಡಿಗಳ ವಿಕ್ಶನರಿಗಳ ಸಾಲಿನಲ್ಲಿ ಕನ್ನಡ ವಿಕ್ಶನರಿ 21ನೇ ಸ್ತಾನದಲ್ಲಿದ್ದರೆ ಬಾರತದ ನುಡಿಗಳ ಪೈಕಿ 2ನೇ ಸ್ತಾನದಲ್ಲಿದೆ. ಹೀಗೆ ಎರಡೂವರೆ ಲಕ್ಶ ಪದಗಳೊಂದಿಗೆ ಗಟ್ಟಿಯಾಗಿ ನಿಂತಿರುವ ಕನ್ನಡ ವಿಕ್ಶನರಿ ಕೆಲವೇ ವರುಶಗಳ ಕೆಳಗೆ ಬರಿಯ 250 ಪದಗಳನ್ನು ಹೊಂದಿತ್ತು! ಆಗ ವಿಕ್ಶನರಿ ಕೆಲಸವನ್ನು ಕೈಗೆತ್ತಿಕೊಂಡು ಇಂದಿರುವ ಮಟ್ಟಕ್ಕೆ ತರಲು 'ಹೊನಲು' ನಡೆಸುಗರಾದ ವಿವೇಕ್ ಶಂಕರ್, ಪ್ರಶಾಂತ ಸೊರಟೂರ, ಸಂದೀಪ್ ಕಂಬಿ ಮತ್ತು ರತೀಶ ರತ್ನಾಕರ ಅವರುಗಳೂ ದುಡಿದಿದ್ದಾರೆ. ಇವರ ಜೊತೆಗೆ ರಾಮನ್ ಸುಬ್ಬರಾವ್ ಎಂಬುವವರು ಹಲವಾರು ಪದಗಳನ್ನು ಸೇರಿಸಿದ್ದಾರೆ. ಇವರೆಲ್ಲರ ದುಡಿಮೆ ನಮಗೆ ಹೆಮ್ಮೆಯನ್ನು ತಂದಿದೆ.

* ವಿಕ್ಷನರಿ ಪದನೆರಕೆಗೆ ನೀವು ಪದ ಸೇರಿಸಬಹುದು ತಪ್ಪದೆ ಈ ಲಿಂಕ್ ಕ್ಲಿಕ್ ಮಾಡಿ

* ಮುಕ್ತಶಬ್ದಕೋಶ ವಿಕ್ಷನರಿ ಅಂಕಿ ಅಂಶಗಳನ್ನು ಇಲ್ಲಿ ನೋಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+