ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೇ ಕನ್ನಡ ಬರೆಯೋಕೆ ಬರಲ್ವಾ: ವೈರಲ್ ಆಯ್ತು ವಿಡಿಯೋ!
ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚು ಕನ್ನಡಪರ ಹೋರಾಟಗಳು ನಡೆದಿವೆ. ಕನ್ನಡದ ಅಸ್ಮಿತೆಯ ಬಗ್ಗೆ ಕನ್ನಡ ಉಳಿವಿನ ಬಗ್ಗೆ ಚರ್ಚೆ, ಹೋರಾಟ ಹಾಗೂ ಪ್ರತಿಭಟನೆಗಳು ಜೋರಾಗಿವೆ. ಪರಿಸ್ಥಿತಿ ಈ ರೀತಿ ಇರುವಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕನ್ನಡದ ಸರಳ ಪದವೊಂದನ್ನು ಬರೆಯುವಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ. ಈ ಮೂಲಕ ಕನ್ನಡ ಮತ್ತು ಸಂಸ್ಕೃತಿ ಸಚಿವ ಇಲಾಖೆ ಶಿವರಾಜ್ ತಂಗಡಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೇ ಕನ್ನಡ ಬರಲ್ವಾ ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉಳಿಸಿ - ಬೆಳೆಸಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವ ಚಿಂತನೆಗಳ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೇ ಕನ್ನಡ ಪದವೊಂದರ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಶಿವರಾಜ್ ತಂಗಡಗಿ ಅವರು ಭಾರೀ ಮುಜುಗರಕ್ಕೆ ಒಳಗಾಗಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.

ಶುಭವಾಗಲಿ ಅಂತ ಬರೆಯುವ ವಿಡಿಯೋ
ಕನ್ನಡ ಮತ್ತು ಸಂಸ್ಕೃತಿ ಸಚಿವ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕನ್ನಡದ ಸರಳ ಪದ ಶುಭವಾಗಲಿ ಎಂದು ಬರೆಯುವುದಕ್ಕೆ ತಡವರಿಸಿದ್ದಾರೆ ಎನ್ನಲಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬೋರ್ಡ್‌ನ ಮೇಲೆ ಶಿವರಾಜ್ ತಂಗಡಗಿ ಅವರು, ಶುಭವಾಗಲಿ ಎನ್ನುವ ಪದ ಬರೆಯುವುದಕ್ಕೆ ತುಂಬಾ ಸಮಯ ತೆಗೆದುಕೊಂಡಿದ್ದಾರೆ. ಸರ್ಕಾರಿ ಶಾಲೆಯೊಂದರ ಬೋರ್ಡ್‌ನ ಮೇಲೆ ಶುಭವಾಗಲಿ ಎಂದು ಬರೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಭವಾಗಲಿ ಎಂದು ಬರೆಯುವ ಹಂತದಲ್ಲಿ "ಶಬ" ಎಂದು ಮೊದಲು ಬರೆದಿದ್ದಾರೆ. ಆಗ ಅಲ್ಲಿದ್ದವರು "ಶು" ಎಂದಾಗಬೇಕು ಎಂದಿದ್ದಾರೆ. "ಬ" ಎನ್ನುವುದು "ಭ" ಎಂದಾಗಬೇಕು ಎಂದು ತೋರಿಸಿರುವುದು ಸಹ ವಿಡಿಯೋದಲ್ಲಿ ಇದೆ. ಕೊನೆಯದಾಗಿ "ಭ"ಗೆ ಒತ್ತು ಬಿಟ್ಟು ಹೋಗಿದ್ದು ಅದನ್ನು ಸೇರಿಸಬೇಕು ಎಂದು ಅಲ್ಲಿದ್ದವರು ಹೇಳಿರುವುದು ವಿಡಿಯೋದಲ್ಲಿ ಇದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು "ಶುಭವಾಗಲಿ" ಪದ ಬರಿಯೋಕೆ ಕಷ್ಟಪಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. pic.twitter.com/zPHyu5jAtH
— ಕನ್ನಡಿಗ ದೇವರಾಜ್ (@sgowda79) February 1, 2025
ಸಚಿವರ ಕನ್ನಡದ ಬಗ್ಗೆ ಟೀಕೆ ಮತ್ತು ವ್ಯಂಗ್ಯ: ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಶುಭವಾಗಲಿ ಎಂದು ಬರೆಯುವಾಗ ಆಗಿರುವ ತಿದ್ದುಪಡಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ಇದಕ್ಕೆ ಟೀಕೆ ಹಾಗೂ ವ್ಯಂಗ್ಯದ ಪೋಸ್ಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದಾರೆ.
ಸಚಿವ ಶಿವರಾಜ್ ತಂಗಡಗಿ ಅವರು ಶುಭವಾಗಲಿ ಎಂದು ಬರೆಯಲು ಕಷ್ಟಪಡುವುದು ನೋಡಿದರೆ ಕರುಳು ಚುರುಕ್ ಎನ್ನುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್ ವೈರಲ್ ಆಗಿದೆ.
ದೇವರಾಜ್ ಎನ್ನುವವರು ಸಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು "ಶುಭವಾಗಲಿ" ಪದ ಬರಿಯೋಕೆ ಕಷ್ಟಪಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದು, ವೈರಲ್ ಆಗುತ್ತಿದೆ.
ಬಿಜೆಪಿ ಟ್ರೋಲ್: ಕರ್ನಾಟಕದ ಹಲವು ಸಚಿವರಿಗೆ ಕನ್ನಡ ಬರಲ್ಲ ಅಂತ ರಾಜ್ಯ ಬಿಜೆಪಿ ಟ್ರೋಲ್ ಮಾಡುತ್ತಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.












Click it and Unblock the Notifications