ಕಲಘಟಗಿ ಟಿಕೆಟ್ ಸಿದ್ದರಾಮಯ್ಯ ಬಣದ ಪಾಲು: ಬಿಜೆಪಿ ಸೇರ್ಪಡೆಯಾದ ಡಿಕೆಶಿ ಬಣದ ಮುಖಂಡ

ಬೆಂಗಳೂರು, ಏಪ್ರಿಲ್ 09: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ಸರಿಯಾಗಿ ಒಂದು ತಿಂಗಳಷ್ಟೇ ಬಾಕಿ ಇದೆ. ಈ ನಡುವೆ ಪಕ್ಷಾಂತರ ಹೆಚ್ಚಾಗುತ್ತಿದ್ದು, ಕಾಂಗ್ರೆಸ್‌ನಿಂದ ಮತ್ತೊಬ್ಬ ಮುಖಂಡ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಕಲಘಟಗಿಯ ಟಿಕೆಟ್ ಆಕಾಂಕ್ಷಿ ನಾಗರಾಜ ಛಬ್ಬಿ ಅವರು ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಾರ್ಟಿ (BJP)ಯನ್ನು ಸೇರ್ಪಡೆಯಾದರು.

 Kalaghatagi Congress Ticket Aspirants Nagaraj Chabbi BJP Joined On Sunday At New Delhi

ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ ಅವರನ್ನು ಪಕ್ಷದ ಬಾವುಟ ಹಾಗೂ ಹೂಗುಚ್ಚ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪಹ್ಲಾದ್ ಜೋಶಿ ಬರಮಾಡಿಕೊಂಡರು.

ಇತ್ತಿಚೇಗೆ ಕಾಂಗ್ರೆಸ್‌ನಿಂದ ಎರಡು ಹಂತದಲ್ಲಿ ಒಟ್ಟು 42ಮಂದಿಗೆ ಟಿಕೆಟ್ ಹಂಚಿಕೆ ಮಾಡಿದ್ದ ಎರಡನೇ ಪಟ್ಟಿಯನ್ನು ಕೆಪಿಸಿಸಿ ಬಿಡುಗಡೆ ಮಾಡಿತ್ತು. ಅದರಲ್ಲಿ ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಅನ್ನು ಸಂತೋಷ್ ಲಾಡ್ ಅವರಿಗೆ ನೀಡಲಾಯಿತು. ಈ ಸಂತೋಷ್ ಲಾಡ್ ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡವರು.

ನಾಗರಾಜ ಛಬ್ಬಿ ಅವರು ಡಿಕೆ ಶಿವಕುಮಾರ್ ಬಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದರು. ಅವರು ಕಲಘಟಗಿ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು. ಆದರೆ ಅಲ್ಲಿ ಬೇರೆಯವರಿಗೆ ಟಿಕೆಟ್ ನೀಡಿದ ಕಾಂಗ್ರೆಸ್‌ ನಡೆಗೆ ಬೇಸರಗೊಂಡು ಪಕ್ಷ ತೊರೆದಿದ್ದಾರೆ ಎನ್ನಲಾಗಿದೆ.

6 ತಿಂಗಳಿಗೂ ಮೊದಲೇ ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್

ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಅಂದರೆ ಆರು ತಿಂಗಳ ಮೊದಲಿನಿಂದಲೂ ಧಾರವಾಡ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಕಲಘಟಗಿ ತಾಲೂಕಿನ ಕಾಂಗ್ರೆಸ್ ಟಿಕೆಟ್ ಗಾಗಿ ಸಂತೋಷ್ ಲಾಡ್ ಮತ್ತು ನಾಗರಾಜ ಛಬ್ಬಿ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿತ್ತು. ಇಬ್ಬರು ನಾಯಕರ ನಡುವೆ ತ್ಯಾಗ ವಾದ ಪ್ರತಿವಾದ ನಡೆಯುತ್ತಿತ್ತು. ಇದು ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣ ಬಡಿದಾಟ ಎಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತಲೆ ನೋವು ಉಂಟು ಮಾಡಿತ್ತು.

ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ನಾಗರಾಜ್ ಛಿಬ್ಬಿ ಮತದಾರರ ಮನೆ ಮನೆಗಳಿಗೆ ತೆರಳಿ ಕುಕ್ಕರ್ ಹಂಚುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಂತೋಷ ಲಾಡ್ ಸಹ ತಾವು ಮಾಡಿದ ಸಹಾಯವನ್ನು ನೆನಪಿಸಿದ್ದರು. ಮೇಲ್ನೋಟಕ್ಕೆ ಇದು ಛಬ್ಬಿ ಲಾಡ್ ನಡುವಿನ ಸ್ಪರ್ಧೆ ಅಂತಾ ಕಂಡು ಬಂದರೂ ಇಲ್ಲಿ ಡಿಕೆಶಿ ಬಾಣ ಮತ್ತು ಸಿದ್ದು ಬಣಗಳ ಬಡಿದಾಟವೇ ಆಗಿತ್ತು. ಟಿಕೆಟ್ ಕೈ ತಪ್ಪಿದ್ದರಿಂದ ಛಬ್ಬಿ ಅವರು ಪಕ್ಷಕ್ಕೆ ಪೆಟ್ಟು ನೀಡಿದ್ದಾರೆ.

ಕಲಘಟಗಿಯ ಪ್ರಬಲ ಟಿಕೆಟ್ ಆಕಾಂಕ್ಷಿ ನಾನಾಗಿದ್ದೆ ಎಂದು ನಾಗರಾಜ ಛಬ್ಬಿ ಹೇಳಿದರು. 2008ರಲ್ಲಿ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲೋ ಬಳ್ಳಾರಿಯಿಂದ ಬಂದು ಸಂತೋಷ್ ಲಾಡ್ ಅವರು ಎರಡು ತಿಂಗಳಿನಲ್ಲಿ ಪ್ರಚಾರ ಮಾಡಿ ಬಹುಮತ ಪಡೆದರು. ಅವರು ಹೇಗೆ ಗೆದ್ದರು ಎಂಬುದನ್ನು ಮರೆತಿದ್ದಾರೆ ಎಂದು ಛಬ್ಬಿ ನೆನಪಿಸಿದರು.

ಛಬ್ಬಿ ಹೇಳಿಕೆಗೆ ತಿರುಗೇಟು ನೀಡಿರುವ ಸಂತೋಷ್ ಲಾಡ್, ನಾನು ಯಾರ ತ್ಯಾಗದಿಂದ ಕಲಘಟಗಿಯಲ್ಲಿ ಗೆದ್ದಿಲ್ಲ. ಜೆಡಿಎಸ್ ತೊರೆದ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಜಾಗ ಸಿಕ್ಕಿತು. ಬಳಿಕ ಕ್ಷೇತ್ರ ಪುನರ್ವಿಂಗಡನೆಯಾಗಿ ಕಲಘಟಗಿಗೆ ಬಂದೆ. ನಮ್ಮ ಪಕ್ಷದ ನಾಯಕರ ಕಾರ್ಯಕರ್ತರು, ಶ್ರಮ ಮತ್ತು ಜನರ ಆರ್ಶಿವಾದದಿಂದ ನಾನು ಕಲಘಟಗಿಯಲ್ಲಿ ಗೆದ್ದಿದ್ದೇನೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+