ಗಣಪತಿ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ 6 ತಿಂಗಳ ಗಡುವು

Posted By:
Subscribe to Oneindia Kannada

ಬೆಂಗಳೂರು, ಜುಲೈ 17: ಮಂಗಳೂರಿನ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಅಧಿಕೃತವಾಗಿ ಒಪ್ಪಿಸಿ, ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ತನಿಖೆಗೆ ನ್ಯಾ.ಕೆ.ಎನ್.ಕೇಶವನಾರಾಯಣ ಅವರಿರುವ ಏಕಸದಸ್ಯ ಪೀಠವನ್ನು ನೇಮಿಸಲಾಗಿದೆ.

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿರುವ ಸಿಐಡಿ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆದರೆ, ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಹೆಚ್ಚಿನ ತನಿಖೆ ಜವಾಬ್ದಾರಿಯನ್ನು ನ್ಯಾ. ಕೇಶವ ನಾರಾಯಣ ಅವರಿಗೆ ವಹಿಸಿ ಶನಿವಾರದಂದು ಆದೇಶ ಹೊರಡಿಸಿದೆ. ತನಿಖಾ ವರದಿಯನ್ನು 6 ತಿಂಗಳೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

Justice K N Keshavanarayana Commission to probe DySP Ganapati case

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮಾಜಿ ಕುಲಪತಿ ಎಚ್.ಮಹೇಶಪ್ಪ ವಿರುದ್ಧ ವರದಿ ನೀಡಿ ನ್ಯಾ.ಕೇಶವನಾರಾಯಣ ಅವರು ಸುದ್ದಿಯಾಗಿದ್ದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಂದಿಗೆ ಚರ್ಚಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವಿಚಾರಣೆ ಆಯೋಗ-1952ರ ಪ್ರಕಾರ ನ್ಯಾ.ಕೇಶವನಾರಾಯಣ ಕಾರ್ಯನಿರ್ವಹಿಸಲಿದ್ದು, 6 ತಿಂಗಳೊಳಗೆ ವರದಿ ನೀಡಬೇಕಿದೆ.

4 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದ ನ್ಯಾಯಮೂರ್ತಿ, ವಿಟಿಯು ಪ್ರಕರಣದಲ್ಲಿ ಮಹೇಶಪ್ಪ ಅವರು ಅಮಾನತು ಆಗಲು ಪ್ರಮುಖ ಪಾತ್ರವಹಿಸಿದ್ದರು. ಈಗ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಳ್ಳುವರೇ ಎಂಬ ಕುತೂಹಲವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
DYSP Ganapati Suicide case: Siddaramaiah led Congress government has ordered formation of a single-judge commission of inquiry headed by retired high court judge, Justice K N Keshavanarayana.
Please Wait while comments are loading...