ನ್ಯಾ.ಎಸ್.ಆರ್‌.ನಾಯಕ್ ವಿರುದ್ಧ ಲೋಕಾಯುಕ್ತಕ್ಕೆ ದೂರು

Posted By:
Subscribe to Oneindia Kannada

ಬೆಂಗಳೂರು, ಜನವರಿ 14 : ಕರ್ನಾಟಕ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರ ಹೆಸರು ಕೇಳಿಬರುತ್ತಿದೆ. ಇದರ ನಡುವೆಯೇ ಲೋಕಾಯುಕ್ತದಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ.

ಜನಾಧಿಕಾರ ಸಂಘರ್ಷ ಪರಿಷತ್ ಲೋಕಾಯುಕ್ತ ಎಡಿಜಿಪಿ ಡಾ.ಎಸ್‌.ಪರಶಿವಮೂರ್ತಿ ಅವರಿಗೆ ಬುಧವಾರ ದೂರು ನೀಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ, ಆಸ್ತಿ ನೋಂದಣಿ ಕಾಯ್ದೆ ಉಲ್ಲಂಘನೆ, ಕ್ರಯ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪರಿಷತ್ ದೂರಿನಲ್ಲಿ ಆರೋಪಿಸಿದೆ. [ಲೋಕಾಯುಕ್ತ ಹುದ್ದೆಗೆ ಎಸ್.ಆರ್.ನಾಯಕ್ ಹೆಸರು?]

sr nayak

ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರು 2002ರಲ್ಲಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ. ಆದರೆ, ಅದಕ್ಕೂ ಮೊದಲು ಅವರ ಕುಟುಂಬದವರು 3 ನಿವೇಶನ ಹೊಂದಿದ್ದರು. ಇದರಿಂದ ಗೃಹ ನಿರ್ಮಾಣ ಸಂಘಗಳ ಉಪ ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]

ದೂರಿನ ವಿವರ : ನ್ಯಾಯಾಂಗ ಇಲಾಖೆ ನೌಕರರ ಗೃಹ ನಿರ್ಮಾಣ ಸಂಘ ಯಲಹಂಕದಲ್ಲಿ ನಿವೇಶನವನ್ನು ಎಸ್‌.ಆರ್.ನಾಯಕ್ ಅವರಿಗೆ ಮಂಜುರು ಮಾಡಿದೆ. ಆದರೆ, ಸಹಕಾರ ಸಂಘದ ಉಪ ನಿಯಮದ ಪ್ರಕಾರ ನಿವೇಶನ ಪಡೆಯುವ ವ್ಯಕ್ತಿ ಅಥವಾ ಅವರ ಕುಟುಂಬದ ಸದಸ್ಯರು ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಬಿಡಿಎ ವ್ಯಾಪ್ತಿಯಲ್ಲಿ ನಿವೇಶನ, ಮನೆ, ಅಪಾರ್ಟ್ ಮೆಂಟ್‌ ಹೊಂದಿರುವಂತಿಲ್ಲ.

ಆದರೆ, ಕುಟುಂಬದವರು ಆಸ್ತಿ ಹೊಂದಿದ್ದರೂ ನಿವೇಶನ ಪಡೆದಿದ್ದಾರೆ. ನ್ಯಾಯಾಂಗ ಬಡಾವಣೆಯಲ್ಲಿ ಸಿಕ್ಕಿರುವ ನಿವೇಶನ ನ್ಯಾ.ನಾಯಕ್ ಅವರಿ ಹೆಸರಿನಲ್ಲಿಯೇ ಮಂಜೂರಾಗಿದೆ ಎಂಬುದು ದೂರಿನಲ್ಲಿ ತಿಳಿಸಲಾಗಿದೆ. ಇತರ ಮೂರು ಆಸ್ತಿಗಳು ನಾಯಕ್‌ ಅವರ ಪತ್ನಿ ಶಾಲಿನಿ ಎಸ್‌.ನಾಯಕ್‌ ಅವರ ಹೆಸರಿನಲ್ಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Janaadhikara Sangharsha Parishath (JSP) filed disproportionate assets complaint in lokayukta against Justice S.R.Nayak, who is likely to be recommended by the government for the post of Karnataka Lokayukta.
Please Wait while comments are loading...