ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಂದಾಲ್ ಕಿಕ್ ಬ್ಯಾಕ್: ಕುಮಾರಸ್ವಾಮಿ ವಿರುದ್ದ ಬಿಎಸ್ವೈ ಸ್ಪೋಟಕ ಆರೋಪ

|
Google Oneindia Kannada News

ಯಾದಗಿರಿ, ಜೂನ್ 9: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಜಿಂದಾಲ್ ಕಂಪೆನಿಗೆ ಭೂಮಿ ಪರಬಾರೆ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸರಕಾರದ ವಿರುದ್ದ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟದ ಹಲವು ಸದಸ್ಯರಿಗೆ ಕಿಕ್ ಬ್ಯಾಕ್ ಹೋಗಿದ್ದು, ಇದರ ವಿರುದ್ದ ತೀವ್ರ ಹೋರಾಟ ನಡೆಸುತ್ತೇವೆ ಎಂದು ಯಡಿಯೂರಪ್ಪ ಗುಡುಗಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರುಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರು

ಜಿಂದಾಲ್ ಕಂಪೆನಿಗೆ ಎಕರೆಯೊಂದಕ್ಕೆ ಕೇವಲ 1.25 ಲಕ್ಷ ರೂಪಾಯಿ ನಿಗದಿ ಮಾಡಲಾಗಿದ್ದು, ಜಿಂದಾಲ್ ಕಂಪೆನಿಯಿಂದ ಕಿಕ್ ಬ್ಯಾಕ್ ಹೋಗಿರುವದಕ್ಕೆ ಸ್ಪಷ್ಟ ಮಾಹಿತಿಯಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Jindal company has given kick back to Kumaraswamy and cabinet ministers

ಸರಕಾರದ ಈ ನಡೆಯ ವಿರುದ್ದ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದು, ಅತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಕೂಡಾ ಜಿಂದಾಲ್ ವಿಚಾರದಲ್ಲಿ ಸರಕಾರದ ವಿರುದ್ದ ಗುಡುಗಿದ್ದಾರೆ.

ನಾವು ಈ ವಿಚಾರದಲ್ಲಿ ಯಾವುದೇ ಹೇಳಿಕೆಯನ್ನು ನೀಡುವುದಿಲ್ಲ. ಈ ವಿಚಾರ ದಿನದಿಂದ ದಿನಕ್ಕೆ ರಾಜಕೀಯ ಬಣ್ಣ ಪಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಕ್ಕಿದೆ ಎಂದು ಜಿಂದಾಲ್ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಹೇಳಿದ್ದಾರೆ.

ಅಧಿಕಾರ ನಡೆಸಲು ಆಗದಿದ್ದರೆ ನಮಗೆ ಬಿಟ್ಟುಕೊಡಿ: ಯಡಿಯೂರಪ್ಪಅಧಿಕಾರ ನಡೆಸಲು ಆಗದಿದ್ದರೆ ನಮಗೆ ಬಿಟ್ಟುಕೊಡಿ: ಯಡಿಯೂರಪ್ಪ

ಶನಿವಾರ (ಜೂ 8) ಹೊಸಪೇಟೆಯಲ್ಲಿ ನಡೆದ ವಾಣಿಜ್ಯ ಮತ್ತು ಕೈಗಾರಿಕೆಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಯಡಿಯೂರಪ್ಪ ಮತ್ತು ಸಜ್ಜನ್ ಜಿಂದಾಲ್ ಒಂದೇ ವೇದಿಕೆ ಹಂಚಿಕೊಂಡಿದ್ದು ವಿಶೇಷ.

English summary
Jindal company has given kick back to Kumaraswamy and cabinet ministers, BJP State President BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X