ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ಕಚೇರಿಗಾಗಿ ಸುಪ್ರೀಂಗೆ ಜೆಡಿಎಸ್ ಮೇಲ್ಮನವಿ

|
Google Oneindia Kannada News

ಬೆಂಗಳೂರು, ನ.6 : ಡಿಸೆಂಬರ್‌ 31ರೊಳಗೆ ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಆದೇಶ ನೀಡಿದೆ. ಈ ಆದೇಶದ ಬಗ್ಗೆ ಮೇಲ್ಮನವಿ ಸಲ್ಲಿಸಿ ಕಾನೂನು ಹೋರಾಟ ಮುಂದುವರೆಸಲು ಜೆಡಿಎಸ್ ತೀರ್ಮಾನಿಸಿದೆ.

ಜೆಡಿಎಸ್ ಪಕ್ಷದ ಕಚೇರಿ ಉಳಿಸಿಕೊಳ್ಳುವ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದು, ಪೂರ್ಣ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿ ಕಚೇರಿ ತಮಗೆ ಸೇರಿದ್ದು ಎಂದು ವಾದ ಮಂಡಿಸಲು ನಿರ್ಧರಿಸಲಾಗಿದೆ. ಸುಪ್ರೀಂ ಆದೇಶದಂತೆ ಡಿ.31ರೊಳಗೆ ಜೆಡಿಎಸ್ ಕಚೇರಿ ಬಿಟ್ಟುಕೊಡಬೇಕಾಗಿದೆ. [ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]

JDS

ದಾಖಲೆಗಳಲ್ಲಿನ ಕೆಲವು ದೋಷಗಳಿಂದಾಗಿ ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂಬ ಅಭಿಪ್ರಾಯ ಬಂದಿದೆ. ಆದರೆ, ಮೂಲ ದಾಖಲೆಗಳ ಪ್ರಕಾರ ಅದು ಜನತಾದಳಕ್ಕೆ ಸೇರಿದ್ದು ಎಂದು ಪೂರ್ಣಪೀಠದ ಮುಂದೆ ಮೇಲ್ಮನವಿ ಸಲ್ಲಿಸಿ ವಾದ ಮಂಡಿಸಲು ತೀರ್ಮಾನಿಸಲಾಗಿದೆ. [ಎರಡು ವಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ]

ಈ ಸಂಬಂಧ ಕೆಲವು ದಾಖಲೆಗಳನ್ನು ಸಂಗ್ರಹಿಸಿರುವ ಜೆಡಿಎಸ್ ಸಿದ್ಧತೆ ನಡೆಸಿದೆ. ಕಾನೂನು ಸಮರ ಮುಂದುವರಿಸುವ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ದೆಹಲಿಯಲ್ಲಿ ಹಿರಿಯ ನ್ಯಾಯವಾದಿಯೊಬ್ಬರ ಜತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜೆಡಿಎಸ್‌ ತನ್ನ ಕಚೇರಿ ಬಿಟ್ಟು ಕೊಡಬೇಕಾದದ್ದು ಅನಿವಾರ್ಯ ಎಂದು ತೀರ್ಮಾನಿಸಲಾಗಿತ್ತು. ಇದೀಗ ಕಾನೂನು ಸಮರ ಮುಂದುವರಿಸಲು ಜೆಡಿಎಸ್ ನಿರ್ಧರಿಸಿರುವ ಪರಿಣಾಮ ಮತ್ತೆ ರೇಸ್‌ಕೋರ್ಸ್‌ ರಸ್ತೆ ಕಚೇರಿಗಾಗಿ ಹೋರಾಟ ಆರಂಭವಾಗುವ ಸಾಧ್ಯತೆ ಇದೆ.

ಆದೇಶವೇನು : ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಹಾಗೂ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಜ.21ರಂದು ಈ ಕುರಿತ ತೀರ್ಪು ನೀಡಿತ್ತು ಮತ್ತು ಕಚೇರಿಯನ್ನು ಡಿ.31ರೊಳಗೆ ಕಾಂಗ್ರೆಸ್ ಕಚೇರಿಗೆ ಬಿಟ್ಟುಕೊಡುವಂತೆ ಆದೇಶ ನೀಡಿತ್ತು.

English summary
Janata Dal (Secular) planning to file a review petition against the Supreme Court's order on party office on Race Course Road, Bengaluru belongs to the Congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X