ಪ್ರಜ್ವಲ್ ರೇವಣ್ಣ ಸ್ಪರ್ಧೆ: ಅಡ್ಡಗೋಡೆ ಮೇಲೆ ದೀಪಯಿಟ್ಟ ದೇವೇಗೌಡ್ರು

Posted By:
Subscribe to Oneindia Kannada

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬದಿಂದ ಇಬ್ಬರು ಮಾತ್ರ (ರೇವಣ್ಣ, ಕುಮಾರಸ್ವಾಮಿ) ಸ್ಪರ್ಧಿಸಲಿದ್ದಾರೆಂದು ಹೇಳುತ್ತಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು, ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯುತ್ತಿದ್ದಾರೆಯೇ?

ತನ್ನನ್ನು ಭೇಟಿಯಾಗಲು ಬಂದ ಪ್ರಜ್ವಲ್ ರೇವಣ್ಣಗೆ ರಾಜಕೀಯ ಪಾಠ ಮಾಡಿದ ದೇವೇಗೌಡ್ರು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದೀಯಾ. ಟಿಕೆಟ್ ಬಗ್ಗೆ ಈಗ ಚಿಂತೆ ಮಾಡಬೇಡ, ಮುಂದೆ ನೋಡೋಣ ಎಂದು ಹೇಳಿದ್ದಾರೆಂದು ವರದಿಯಾಗಿದೆ. (ದೇವೇಗೌಡರ ವಂಶದಕುಡಿ ಹುಣಸೂರಿಂದ ಕಣಕ್ಕೆ)

ನೀವು ಮತ್ತು ಚಿಕ್ಕಪ್ಪ (ಕುಮಾರಸ್ವಾಮಿ) ಕುಟುಂಬದಿಂದ ಇಬ್ಬರಿಗೆ ಮಾತ್ರ ಟಿಕೆಟ್ ಎಂದು ಈಗಾಗಲೇ ಸ್ಪಷ್ಟ ಪಡಿಸಿದ್ದೀರಾ, ಆದರೆ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿದ್ದೇನೆಂದು ಪ್ರಜ್ವಲ್ ಹೇಳಿದ್ದಾರೆ.

ಹಾಸನ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ನಿರತರಾಗಿರುವ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರ ಒತ್ತಾಯ ಮಾಡುತ್ತಲೇ ಬಂದಿದ್ದರು, ಪ್ರಜ್ವಲ್ ಕೂಡಾ, ತಾತನ ಬಳಿ ಮನವಿ ಮಾಡಿದ್ದರೂ ಕೂಡಾ. ಆದರೆ, ಗೌಡ್ರು ಮತ್ತು ಕುಮಾರಸ್ವಾಮಿ ಕುಟುಂಬದಿಂದ ಇಬ್ಬರಿಗೆ ಮಾತ್ರ ಟಿಕೆಟ್ ಎನ್ನುವ ನಿಲುವು ತಾಳಿದ್ದರು.

ಆದರೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೇ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೇವೇಗೌಡರು, ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಮುಂದೆ ಓದಿ..

ನಿನ್ನ ಸ್ಪರ್ಧೆಯಿಂದ ಕುಟುಂಬದಲ್ಲಿ ಯಾರಿಗೂ ನೋವಾಗಬಾರದು

ನಿನ್ನ ಸ್ಪರ್ಧೆಯಿಂದ ಕುಟುಂಬದಲ್ಲಿ ಯಾರಿಗೂ ನೋವಾಗಬಾರದು

ಜೆಡಿಎಸ್ ಕಾರ್ಯಕರ್ತರು ನನ್ನಲ್ಲೂ ಬಹಳಷ್ಟು ಬಾರಿ ನಿನಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ. ನಿನ್ನ ಸ್ಪರ್ಧೆಯಿಂದ ಕುಟುಂಬದಲ್ಲಿ ಯಾರಿಗೂ ನೋವಾಗಬಾರದು. ಪಕ್ಷ ಸಂಘಟನೆಯಲ್ಲಿ ತೊಡಗಿದ್ದೀಯಾ, ನಿನಗಿನ್ನೂ ವಯಸ್ಸಿದೆ - ಮೊಮ್ಮಗನಿಗೆ ದೇವೇಗೌಡ.

ರಾಜಕೀಯ ಎಷ್ಟು ಮುಖ್ಯನೋ, ಕುಟುಂಬ ಕೂಡಾ ಅಷ್ಟೇ ಮುಖ್ಯ

ರಾಜಕೀಯ ಎಷ್ಟು ಮುಖ್ಯನೋ, ಕುಟುಂಬ ಕೂಡಾ ಅಷ್ಟೇ ಮುಖ್ಯ

ನನಗೆ ರಾಜಕೀಯ ಎಷ್ಟು ಮುಖ್ಯನೋ, ಕುಟುಂಬ ಕೂಡಾ ಅಷ್ಟೇ ಮುಖ್ಯ. ಕುಟುಂಬದಲ್ಲಿ ನೆಮ್ಮದಿ, ಶಾಂತಿ ನೆಲೆಸಿದ್ದರೆ ರಾಜಕೀಯ ಮಾಡಲು ಶಕ್ತಿ ಬರುತ್ತದೆ. ನಿನ್ನ ಸ್ಪರ್ಧೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ, ಆತುರ ಪಡಬೇಡ - ಪ್ರಜ್ವಲ್ ಗೆ ದೇವೇಗೌಡ್ರು.

ಪ್ರತೀ ಕ್ಷೇತ್ರದಲ್ಲಿ ಸರ್ವೇ

ಪ್ರತೀ ಕ್ಷೇತ್ರದಲ್ಲಿ ಸರ್ವೇ

ಪ್ರತೀ ಕ್ಷೇತ್ರದಲ್ಲಿ ಸರ್ವೇ ನಡೆಸುತ್ತಿರುವ ವಿಚಾರ ನಿನಗೂ ತಿಳಿದಿದೆ. ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದೇವೆ. ಜನಾಭಿಪ್ರಾಯ ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ. ನೀನು ಈಗ ಏನು ಕೆಲಸ ಮಾಡುತ್ತಿದ್ದೀಯಾ ಅಂದನ್ನು ಮುಂದುವರಿಸು - ಮೊಮ್ಮಗನಿಗೆ ತಾತನ ಕಿವಿಮಾತು.

ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ

ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ

ಸದ್ಯ ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ನೀನು ಸ್ಪರ್ಧಿಸುತ್ತಿದ್ದೀಯಾ ಎಂದಾದರೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಪ್ರಭಲ ಪ್ರತಿಸ್ಪರ್ಧಿಯನ್ನು ನಿಲ್ಲಿಸುತ್ತಾರೆ. ಅದಕ್ಕೆ ನಾವು ರೆಡಿಯಾಗಿರಬೇಕು. ಚುನಾವಣೆಯಲ್ಲಿ ನೀನು ಸ್ಪರ್ಧಿಸುವ ಕ್ಷೇತ್ರಕ್ಕೆ ಸ್ಪೆಷಲ್ ಅಟೆಂನ್ಸನ್ ಸಿಗುತ್ತದೆ ಎಂದು ಗೌಡ್ರ ಮತ್ತು ರೇವಣ್ಣ ನಡುವೆ ನಡೆದ ಸಂಭಾಷಣೆಯ ಸಾರಾಂಶವನ್ನು ಟಿವಿ9 ಪ್ರಸಾರ ಮಾಡಿದೆ.

ಮೊಮ್ಮಗನಿಗೆ ತಾತನ ರಾಜಕೀಯ ಪಾಠ

ಮೊಮ್ಮಗನಿಗೆ ತಾತನ ರಾಜಕೀಯ ಪಾಠ

ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಗೌಡ್ರು ಮೊಮ್ಮಗನ ಅಭಿಪ್ರಾಯ ಕೇಳಿದಾಗ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯಬೇಕು ಎಂದು ಪ್ರಜ್ವಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀನು ಸ್ಪರ್ಧಿಸಿದರೆ ಗೆಲ್ಲಲೇ ಬೇಕು, ಸೋಲಬಾರದು ಎನ್ನುವ ಮಾತನ್ನು ದೇವೇಗೌಡ್ರು, ಮೊಮ್ಮಗ ಪ್ರಜ್ವಲ್ ಗೆ ಹೇಳಿದ್ದಾರೆಂದು ಟಿವಿ9 ವರದಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS supremo HD Deve Gowda uncertain on Prajwal Revanna contesting upcoming Karnataka Assembly election.
Please Wait while comments are loading...