JDS ಸ್ಟಾರ್ ಪ್ರಚಾರಕರ ಪಟ್ಟಿ: ದೇವೇಗೌಡರ ಕುಟುಂಬದಲ್ಲಿ 8 ಸ್ಟಾರ್‌ಗಳು
ಬೆಂಗಳೂರು, ಏಪ್ರಿಲ್ 02: ಜೆಡಿಎಸ್ ಪಕ್ಷವು ಲೋಕಸಭಾ ಚುನಾವಣೆಗೆ ಇಂದು ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ದೇವೇಗೌಡ ಅವರ ಕುಟುಂಬದಲ್ಲಿ ಎಂಟು ಜನರನ್ನು ಸ್ಟಾರ್ ಪ್ರಚಾರಕರೆಂದು ಗುರುತಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
40 ಮಂದಿ ಸ್ಟಾರ್ ಪ್ರಚಾರಕರನ್ನು ಜೆಡಿಎಸ್ ಪಟ್ಟಿ ಮಾಡಿದ್ದು, ಅದರಲ್ಲಿ ಎಂಟು ಜನ ದೇವೇಗೌಡ ಅವರ ಕುಟುಂಬಕ್ಕೆ ಸೇರಿದವರೇ ಇದ್ದಾರೆ.
ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ ಅವರು ದೇವೇಗೌಡ ಅವರ ಕುಟುಂಬದ ಸ್ಟಾರ್ ಪ್ರಚಾರಕರು.

ಇವರನ್ನು ಹೊರತುಪಡಿಸಿ, ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ , ಬಂಡೆಪ್ಪ ಕಾಶಂಪೂರ್, ಎಸ್.ಆರ್.ಶ್ರೀನಿವಾಸ್, ಸಿ.ಎಸ್.ಪುಟ್ಟರಾಜು, ವೆಂಕಟರಾವ್‍ನಾಡಗೌಡ, ಸಾ.ರಾ.ಮಹೇಶ್, ಎಂ.ಸಿ.ಮನಗೂಳಿ ಅವರು ಜೆಡಿಎಸ್‍ನ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಇನ್ನುಳಿದಂತೆ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಎಸ್.ಎ.ನೀರಾವರಿ, ಎನ್.ಎಚ್.ಕೋನರೆಡ್ಡಿ, ಬಿ.ಬಿ.ನಿಂಗಯ್ಯ,ಕೆ.ಎಂ.ತಿಮ್ಮರಾಯಪ್ಪ, ರಮೇಶ್‍ಬಾಬು ಅವರು ಕೂಡ ಜೆಡಿಎಸ್‌ನ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.












Click it and Unblock the Notifications