ಲೋಕಸಭೆ ಚುಣಾವಣೆಗೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು, ಏ. 11 : ಲೋಕಸಭೆ ಚುನಾವಣೆಗಾಗಿ ಜಾತ್ಯಾತೀತ ಜನತಾದಳ ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ವಿಶೇಷ ಕಾನೂನು, ನಿರುದ್ಯೋಗಿ ಯುವಕರಿಗೆ ತಿಂಗಳ ಭತ್ಯೆ ನೀಡಲು ಕ್ರಮ ಮುಂತಾದ ಭರವಸೆಗಳನ್ನು ಜೆಡಿಎಸ್ ಪ್ರಣಾಳಿಕೆ ಒಳಗೊಂಡಿದೆ.
ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, 2014ರ ಲೋಕಸಭೆ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಜೆಡಿಎಸ್ ಪ್ರಣಾಳಿಕೆ ಮುಖ್ಯಾಂಶಗಳು
* ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ವಿಶೇಷ ಕಾನೂನು [ಬಿಜೆಪಿ ಪ್ರಣಾಳಿಕೆ ಓದಿ]
* ನಿರುದ್ಯೋಗಿ ಯುವಕರಿಗೆ ತಿಂಗಳ ಭತ್ಯೆ ನೀಡಲು ಕ್ರಮ
* ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ
* ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು
* ಉದ್ಯೋಗದಲ್ಲಿ ಮಹಿಳೆಯರಿಗೆ ವಿಶೇಷ ಮೀಸಲಾತಿ
* ಅಂತರಾಜ್ಯ ನದಿಗಳ ಜೋಡಣೆಗೆ ಹೊಸ ನೀತಿ
* ನದಿಗಳು ದೇಶದ ಆಸ್ತಿ ಎಂದು ಘೋಷಣೆ [ಕಾಂಗ್ರೆಸ್ ಪ್ರಣಾಳಿಕೆಯನ್ನು ನೋಡಿ]
* ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ವಿಶೇಷ ಕಾನೂನು
* ಗ್ರಾಮೀಣ ಭಾರತಕ್ಕಾಗಿ ಹೊಸ ನೀತಿ
* ಟ್ಯಾಕ್ಸಿ, ಆಟೋ ಚಾಲಕರಿಗೆ ಭದ್ರತೆ
* ಕ್ರೀಡಾ ಅಭಿವೃದ್ಧಿಗಾಗಿ ವಿಶೇಷ ಕ್ರೀಡಾ ನೀತಿ ಘೋಷಣೆ












Click it and Unblock the Notifications