ಕಾಂಗ್ರೆಸ್, ಬಿಜೆಪಿ ಅನ್ಯಾಯದ ಕೈಪಿಡಿ ನೀಡಿದ ಜೆಡಿಎಸ್

ಬೆಂಗಳೂರು, ಏ. 3 : ಲೋಕಸಭೆ ಚುನಾವಣೆ ಕಾವು ಹೆಚ್ಚಾಗ ತೊಡಗಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ ಸಂದರ್ಭದಲ್ಲಿ ಕರ್ನಾಟಕಕ್ಕೆ ಉಂಟಾದ ಅನ್ಯಾಯದ ಬಗ್ಗೆ ಜೆಡಿಎಸ್‌ ಕೈಪಿಡಿ ಹೊರ ತಂದು ಚುನಾವಣಾ ಪ್ರಚಾರ ಆರಂಭಿಸಿದೆ. ಇದು ಚುನಾವಣೆ ಪ್ರಣಾಳಿಕೆಗಿಂತ ಮಹತ್ವದ್ದು ಎಂದು ಪಕ್ಷ ಹೇಳಿದೆ.

ಬುಧವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, "ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಶೋಷಣೆ ಹೀಗೆಯೇ ಮುಂದುವರಿಯಬೇಕೆ? ನಿಮ್ಮ ತೀರ್ಪಿಗೆ ಇದು ಸಕಾಲ" ಎಂಬ ಕೈಪಿಡಿಯನ್ನು ಬಿಡುಗಡೆ ಮಾಡಿದರು.

HD Deve Gowda

"ಲೋಕಸಭೆಗೆ ರಾಜ್ಯದಿಂದ 15 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿ, ರಾಜ್ಯದ ಹಿತ ಕಾಪಾಡಲು ಹೋರಾಟ ಮಾಡುತ್ತೇನೆ. ಪ್ರಧಾನಿಯಾಗಬೇಕೆಂಬ ಹಂಬಲ ನನಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಕರ್ನಾಟಕಕ್ಕೆ ಮಾಡಿದ ದ್ರೋಹದ ಕೈಪಿಡಿಯನ್ನು ನಿಮಗೆ ನೀಡುತ್ತಿದ್ದೇನೆ" ಎಂದು ದೇವೇಗೌಡರು ಹೇಳಿದರು. [ದೇವೇಗೌಡರು ವಿಷ ಕುಡಿಯುವುದನ್ನು ಕಾಯುತ್ತಿದ್ದೇನೆ]

1967ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು ಯಾಚಿಸಿ ಇಂದಿರಾ ಗಾಂಧಿಯವರಿಗೆ ಚಿನ್ನದ ತುಲಾಭಾರ ಮಾಡಿದರೂ ನೆರವು ದೊರೆಯಲಿಲ್ಲ. ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರಗಳು ರಾಜ್ಯದ ಪಾಲಿನ ನೀರಿನ ಬಳಕೆಗೆ ಯೋಜನೆ ರೂಪಿಸಿ ಹಣ ಒದಗಿಸದಿಸಿಲ್ಲ ಎಂದು ದೇವೇಗೌಡರು ಆರೋಪಿಸಿದರು. [ಮೋದಿ ಮಾತನ್ನು ಕನ್ನಡಲ್ಲಿ ಕೇಳಿ]

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಜಯಲಲಿತಾ ಉಪವಾಸಕ್ಕೆ ಬೆದರಿ ಗೆಜೆಟ್‌ ಪ್ರಕಟಣೆ ಮಾಡಿದ್ದು, ಕರ್ನಾಟಕದಲ್ಲಿದ್ದ ರೈಲ್ವೆ ನೇಮಕಾತಿ ಮಂಡಳಿ ಚೆನ್ನೈಗೆ ವರ್ಗಾಯಿಸಿದ್ದು, ರಾಜ್ಯದ ರೈಲ್ವೆ ಯೋಜನೆಗಳಿಗೆ ಅನುಮತಿ ನೀಡದಿರುವುದು, ಬೆಳಗಾವಿ ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳು ಕೈಪಿಡಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ದೇವೇಗೌಡರು ತಿಳಿಸಿದರು.

ಸಿಎಂಗೆ ತಿರುಗೇಟು : ಬಾಯಿಚಪಲಕ್ಕೆ ತಕ್ಕಂತೆ ಮಾತನಾಡುವುದು ಮುಖ್ಯಮಂತ್ರಿ ಹುದ್ದೆಗೆ ಘನತೆ ತರುವುದಿಲ್ಲ. ಘನತೆಗೆ ತಕ್ಕಂತೆ ಮಾತನಾಡುವುದನ್ನು ಸಿದ್ದರಾಮಯ್ಯ ಅವರು ಕಲಿಯಲಿ ಎಂದು ದೇವೇಗವಡರು ಸಲಹೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರಂತೆ ಅಣಕ ಮಾಡಿ ಮಾತನಾಡಲು ನನಗೂ ಬರುತ್ತದೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದರು.

ಮುಲಾಯಂ ಸಿಂಗ್ ಜೊತೆ ಮಾತುಕತೆ : ಕೊಪ್ಪಳದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವ ಕುರಿತು ಮುಲಾಯಂ ಸಿಂಗ್ ಜತೆ ಮಾತುಕತೆ ನಡೆಸಿದ್ದೇನೆ. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+