ಪುಟ್ಟಣ್ಣ ಬಿಜೆಪಿ ಸೇರಿದರೆ ಯಶವಂತಪುರದಿಂದ ಸ್ಪರ್ಧೆ?

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 12 : ವಿಧಾನಪರಿಷತ್ ಸದಸ್ಯ, ಜೆಡಿಎಸ್ ನಾಯಕ ಪುಟ್ಟಣ್ಣ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಒಂದು ವೇಳೆ ಪುಟ್ಟಣ್ಣ ಬಿಜೆಪಿ ಸೇರಿದರೆ, ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ಪುಟ್ಟಣ್ಣ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರ ಉಳಿದಿರುವ ಪುಟ್ಟಣ್ಣ, ಪಕ್ಷ ತೊರೆಯುವುದು ಖಚಿತವಾಗಿದೆ. 2020ರ ವರೆಗೆ ಅವರ ಪರಿಷತ್ ಸದಸ್ಯತ್ವದ ಅವಧಿ ಇದೆ. ಅದಕ್ಕೂ ಮೊದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಕರ್ನಾಟಕ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಸದಸ್ಯರ ಪಟ್ಟಿ

ಜೆಡಿಎಸ್ ಪಕ್ಷ ತೊರೆದರೆ ಪುಟ್ಟಣ್ಣ ಅವರು 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಪುಟ್ಟಣ್ಣ ಅವರು ಬಿಜೆಪಿ ಸೇರಿದರೆ ಯಶವಂತಪುರ ಕ್ಷೇತ್ರದಿಂದ ಅವರನ್ನು ಪಕ್ಷ ಕಣಕ್ಕಿಳಿಸುವ ಸಾಧ್ಯತೆ ಇದೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾದ ಎಸ್.ಟಿ.ಸೋಮಶೇಖರ್ ಸೋಲಿಸಲು ಬಿಜೆಪಿ ತಂತ್ರ ರೂಪಿಸಿದೆ.

2018ರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಕಸರತ್ತು ಶುರು

2013ರ ಚುನಾವಣೆಯಲ್ಲಿಯೇ ಯಶವಂತಪುರ ಕ್ಷೇತ್ರ ಕುತೂಹಲದ ಕಣವಾಗಿತ್ತು. ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್ 120,380 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಎನ್.ಜವರಾಯಿ ಗೌಡ ಅವರು 91,280 ಮತಗಳನ್ನು ಪಡೆದಿದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದಿತ್ತು...

ಕಾಂಗ್ರೆಸ್‌ ಪಕ್ಷವೂ?, ಬಿಜೆಪಿಯೋ

ಕಾಂಗ್ರೆಸ್‌ ಪಕ್ಷವೂ?, ಬಿಜೆಪಿಯೋ

ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಯಾವ ಪಕ್ಷಕ್ಕೆ ಸೇರುತ್ತಾರೆ? ಎಂಬುದು ಇನ್ನೂ ಖಚಿತವಾಗಿಲ್ಲ. 'ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಹ್ವಾನ ಬಂದಿದೆ. ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ' ಎಂದು ಪುಟ್ಟಣ್ಣ ಹೇಳಿದ್ದಾರೆ.

ಯಶವಂತಪುರದಿಂದ ಸ್ಪರ್ಧೆ?

ಯಶವಂತಪುರದಿಂದ ಸ್ಪರ್ಧೆ?

ಪುಟ್ಟಣ್ಣ ಅವರು ಬಿಜೆಪಿಗೆ ಬಂದರೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಮೊದಲು ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು ಸಂಸದರಾದ ಬಳಿಕ ಕ್ಷೇತ್ರ ಬಿಜೆಪಿ ಕೈ ತಪ್ಪಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದಿತ್ತು.

ಸಿದ್ದರಾಮಯ್ಯ ಆಪ್ತರನ್ನು ಸೋಲಿಸಲು ಯೋಜನೆ

ಸಿದ್ದರಾಮಯ್ಯ ಆಪ್ತರನ್ನು ಸೋಲಿಸಲು ಯೋಜನೆ

ಯಶವಂತಪುರ ಕ್ಷೇತ್ರದ ಶಾಸಕರು ಎಸ್.ಟಿ.ಸೋಮಶೇಖರ್. ಪುಟ್ಟಣ್ಣ ಅವರು ಬಿಜೆಪಿಗೆ ಬಂದರೆ ಮುಖ್ಯಮಂತ್ರಿಗಳ ಆಪ್ತರಾಗಿರುವ ಎಸ್‌.ಟಿ.ಸೋಮಶೇಖರ್ ಅವರನ್ನು ಸೋಲಿಸಲು ಪುಟ್ಟಣ ಅವರನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಬಿಜೆಪಿ ತಂತ್ರ ರೂಪಿಸಿದೆ.

ಯಶವಂತಪುರ ಕ್ಷೇತ್ರದ ಫಲಿತಾಂಶ

ಯಶವಂತಪುರ ಕ್ಷೇತ್ರದ ಫಲಿತಾಂಶ

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್ (120,380) ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ಟಿ.ಎನ್.ಜವರಾಯಿ ಗೌಡ ಅವರು 91,280 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ಬಿಜೆಪಿಯ ಕೃಷ್ಣಪ್ಪ ಅವರು 12,747 ಮತಗಳನ್ನು ಮಾತ್ರ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS MLC Puttanna may join BJP soon. Puttanna 3 time MLC from Bengaluru teachers constituency. If Puttanna joined BJP he will contest form Yeshwantpur constituency for 2018 assembly election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ