Operation Hasta: ಕಾಂಗ್ರೆಸ್ ಆಪರೇಷನ್ ಹಸ್ತದ ಗುಟ್ಟು ಬಿಚ್ಚಿಟ್ಟ ಮತ್ತೊಬ್ಬ ಶಾಸಕ! ಮತ್ಯಾರಿಗೆ ಗಾಳ!
ಬೆಂಗಳೂರು, ಆಗಸ್ಟ್ 24: ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಗಾಳ ಹಾಕಿದ್ದು, ಮತ್ತೊಬ್ಬ ಶಾಸಕ ಕಾಂಗ್ರೆಸ್ ಗಾಳ ಹಾಕಿರುವ ಕುರಿತು ಕಾಂಗ್ರೆಸ್ ಆಪರೇಷನ್ ಬಗ್ಗೆ ಸ್ವತಃ ಜೆಡಿಎಸ್ ಶಾಸಕ ಗುಟ್ಟು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ದಲಿತ ಸಮಾಜದ ಶಾಸಕರನ್ನ ಕಾಂಗ್ರೆಸ್ ಗೆ ಸೆಳೆಯಲು ಪ್ಲಾನ್ ನಡೆಸಿದ್ದು,
ಆಪರೇಷನ್ ಕಾಂಗ್ರೆಸ್ ಮೂಲಕ ಜೆಡಿಎಸ್ ಶಾಸಕರನ್ನ ಸೆಳೆಯುವ ಯತ್ನ ನಡೆದಿದೆ. ದೆಹಲಿಗೆ ಬರುವಂತೆ ಒತ್ತಡ ಹಾಕಿದ್ರು, ನಾನು ಹೋಗಿಲ್ಲ. ಬಂಗಾರಪೇಟೆ ಕೈ ಶಾಸಕ ನಾರಾಯಣಸ್ವಾಮಿ ಮೂಲಕ ಪಕ್ಷ ಸೇರ್ಪಡೆ ಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ನಾನೆಂದೂ ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ, ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದ 19 ಶಾಸಕರು 2-3 ದಿನ ಪ್ರವಾಸಕ್ಕೆ ಹೋಗಲಿದ್ದೇವೆ. ಜೆಡಿಎಸ್ ಬಿಟ್ಟು ಯಾರು ಹೋಗಲ್ಲ, ನಮ್ಮಲ್ಲಿನ ಒಗಟ್ಟು ಪ್ರದರ್ಶನ ಮಾಡಲಿದ್ದೇವೆ. ಕಾಂಗ್ರೆಸ್ ಆಪರೇಷನ್ ವರ್ಕೌಟ್ ಆಗಲ್ಲ, ರಿವರ್ಸ್ ಆಪರೇಷನ್ ನಡೀತಿದೆ, ಅದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಕಾದು ನೋಡಿ, ಎಲ್ಲರಿಗು ಗೊತ್ತಾಗುತ್ತೆ ಈ ಕಾಂಗ್ರೆಸ್ ಸರ್ಕಾರ ಇರೋದು ಡೌಟ್. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಇಲ್ಲ, ವರ್ಗಾವಣೆ ದಂಧೆ ಹಿಂದೆ ಬಿದ್ದಿದೆ ಎಂದು ಹೇಳಿದ್ದಾರೆ.
ನಾನೆಂದು ಜೆಡಿಎಸ್ ಪಕ್ಷ ಬಿಡುವ ಮಾತಿಲ್ಲ, ನಾನು ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದ 19 ಶಾಸಕರು, ಮಾಜಿ ಶಾಸಕರುಗಳು ಒಂದೇ ವೇದಿಕೆಯಲ್ಲಿ ಸೇರಲಿದ್ದೇವೆ. ಜೆಡಿಎಸ್ ಬಿಟ್ಟು ಯಾರು ಹೋಗಲ್ಲ. ಒಗಟ್ಟು ಪ್ರದರ್ಶನ ಮಾಡಲಿದ್ದೇವೆ. ಕಾಂಗ್ರೆಸ್ ಆಪರೇಷನ್ ವರ್ಕೌಟ್ ಆಗಲ್ಲ. ಇನ್ನು ಜೆಡಿಎಸ್ ಶಾಸಕರು ಸೌಜನ್ಯಕ್ಕೂ ಅನುದಾನ ಕೇಳಲು ಸಿಎಂ ಬಳಿ ಹೋಗಿಲ್ಲ. ಎಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅವರನ್ನು ಬೇಟಿ ಮಾಡಿದರೆ ಪಕ್ಷ ಬಿಡುತ್ತಾರೆ ಅಂತ ಕಥೆ ಕಟ್ಟುತ್ತಾರೋ ಎನ್ನುವ ಭಯಕ್ಕೆ ಹೋಗಿಲ್ಲ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಅವರು, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪರ ಇಲ್ಲ, ವರ್ಗಾವಣೆ ದಂಧೆ ಹಿಂದೆ ಬಿದ್ದಿದೆ. ಸದ್ಯದಲ್ಲೇ ಎಲ್ಲಾ ಗೊತ್ತಾಗುತ್ತದೆ. ಯಾರನ್ನು ಕೇಳಿದ್ರು ಈ ಸರ್ಕಾರ ಇರೋದು ಡೌಟ್ ಅಂತಾನೆ ಹೇಳುತ್ತಾರೆ ಎಂದು ಹೇಳಿದರು.











Click it and Unblock the Notifications