JDS Manifesto 2023: ದೇಶದ ಬೆನ್ನೆಲುಬು ರೈತರಿಗೆ-ರೇಷ್ಮೆ ವಲಯಕ್ಕೆ ಸಿಕ್ಕ ಭರವಸೆಗಳು ಇವು
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಗೆ ಮೊದಲಿನಿಂದಲೂ ಅಗತ್ಯ ಸಿದ್ಧತೆ ಮಾಡಿಕೊಂಡ ಬಂದಿದ್ದ ಜೆಡಿಎಸ್ ಮಿಷನ್ -123 ಬಗ್ಗೆ ಹೇಳುತ್ತಲೇ ಬಂದಿತ್ತು. ಇದೀಗ ತನ್ನ ಗುರಿ ಸಾಧನೆಗೆ ಪೂರಕವಾಗುವಂತೆ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಮುಂದಿನ ತಿಂಗಳು ಮೇ 10ರಂದು ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಜಾತ್ಯಾತೀತ ಜನತಾದಳ (JDS) ಪಕ್ಷವು ಒಟ್ಟು 207 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಹುಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕರು ಗುರುವಾರ ಬೆಂಗಳೂರಿನ ಜೆಪಿ ಭವನದಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಗಣ್ಯರು ಕರ್ನಾಟಕ ವಿಧಾನಸಭಾ ಚುನಾವಣೆ 2023ಯ ಪ್ರಣಾಳಿಕೆ ಬಿಡಗಡೆ ಮಾಡಿದರು. ಅದರಲ್ಲಿ ಕೈಗಾರಿಕೆ, ಯುವಜನ, ಆರೋಗ್ಯ ಸಂಪತ್ತು, ವಸತಿ, 'ರೈತರಿಗೆ ಮತ್ತು ರೇಷ್ಮೆ ವಲಯ' ಸೇರಿದಂತೆ ವಿವಿಧ ವಲಯಗಳ ಸಮಗ್ರ ಅಭಿವೃದ್ಧಿಯನ್ನು ಅಂಶಗಳನ್ನು ಸೇರಿಸಿದೆ.
ಜೆಡಿಎಸ್ ಪ್ರಣಾಳಿಕೆ ಪೈಕಿ 'ರೈತರಿಗೆ ಮತ್ತು ರೇಷ್ಮೆ ವಲಯ'ಕ್ಕೆ ನೀಡಿದ ಭರವಸೆಗಳು ಏನು?. ಆ ಬಗ್ಗೆ ಜೆಡಿಎಸ್ ಚಿಂತನೆ ಹೇಗಿದೆ ಎಂಬೆಲ್ಲ ಅಂಶಗಳು ಈ ಕೆಳಗಿನಂತಿದೆ.
ಜೆಡಿಎಸ್-ರೈತ ಚೈತನ್ಯ ವಲಯ
* ಕೃಷಿ ಪಂಪ್‌ಸೆಟ್‌ಗೆ ವಾರದ ಏಳು ದಿನವು (24/7) ಉಚಿತ ಗುಣಮಟ್ಟದ ವಿದ್ಯುತ್ ಸೌಲಭ್ಯ ಮತ್ತು ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಲಾಗುವುದು.

* ತಂತ್ರಜ್ಞಾನ ಆಧಾರಿತ ವ್ಯವಸಾಯಕ್ಕೆ ಒತ್ತು.
* ಯಾಂತ್ರೀಕೃತ ಹೈನುಗಾರಿಕೆಗೆ ಆದ್ಯತೆ ನೀಡಲಾಗುವುದು.
* ಕೋಳಿ, ಕುರಿ ಸಾಕಾಣಿಕೆಗೆ ಆದ್ಯತೆ ನೀಡಲಾಗುವುದು.
* ಬೆಳೆಗಳ ಆಧಾರದಲ್ಲಿ ಪೂರಕ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುವುದು.
* ಹವಾಮಾನ ವರದಿ ಪರಿಕರಗಳ ಅಳವಡಿಕೆಗೆ ವ್ಯವಸ್ಥೆ.
* ತೋಟಗಾರಿಕೆ ಅಭಿವೃದ್ಧಿಪಡಿಸಲಾಗುವುದು.
* ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಪೂರೈಕೆಗೆ ಕ್ರಮ.
* ಭೂ ಸುಧಾರಣಾ ಕ್ರಮಗಳ ಅನುಷ್ಠಾನಗೊಳಿಸುವುದು.
* ನವೀನ ಪದ್ಧತಿಯ ನೀರಾವರಿ ಯೋಜನೆ ಜಾರಿ.
* ಪಂಚಾಯಿತಿಗೊಂದು ಕೃಷಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಲಾಗುವುದು.
* ಬೆಲೆಗಳ ಸ್ಥಿರತೆ ರಕ್ಷಣೆ ಕಾಪಾಡುವುದು.
* ಪ್ರತಿ ತಾಲ್ಲೂಕಿನಲ್ಲಿ 100 ಟನ್ ಸಾಮರ್ಥ್ಯದ ಶೀತಲೀಕರಣ ಗೋಡೌನ್ ನಿರ್ಮಿಸಲಾಗುವುದು.
* ಈಗಲೇ ರಾಜ್ಯದ 54 ತಾಲ್ಲೂಕುಗಳಲ್ಲಿ ಶೀತಲೀಕರಣ ಗೋಡೌನ್‌ಗಳನ್ನು ನಬಾರ್ಡ್ ಯೋಜನೆಯಡಿ ನಿರ್ಮಿಸಲಾಗಿದೆ. ಇನ್ನುಳಿದ 172 ತಾಲ್ಲೂಕುಗಳ ಪ್ರತಿ ಗ್ರಾಮಪಂಚಾಯಿತಿ ಕೇಂದ್ರದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲಾಗುವುದು.
* ರೈತರು, ಮುಂಗಾರು- ಹಿಂಗಾರುಗಳಲ್ಲಿ ಕೃಷಿಗೆ ಯಂತ್ರೋಪಕರಣಗಳನ್ನು ಭೂ ಹಿಡುವಳಿ ಮತ್ತು ರೈತರು ಆರ್ಥಿಕವಾಗಿ
ಹಿಂದುಳಿಕೆಯ ಆಧಾರದ ಮೇಲೆ ಟ್ರಾಕ್ಟರ್, ಟಿಲ್ಲರ್, ಕಟರ್ ಮುಂತಾದವುಗಳನ್ನು ಕೃಷಿ ಯಂತ್ರಧಾರೆ ಕೇಂದ್ರದಿಂದ ರಿಯಾಯಿತಿಯಲ್ಲಿ ಬಾಡಿಗೆ ದರದಲ್ಲಿ ಪಡೆಯಬಹುದು. ಈ ಕೃಷಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಗ್ರಾಮದಲ್ಲಿರುವ ನಿರುದ್ಯೋಗಿ ಕೃಷಿ ಹಾಗೂ ಇತರೆ ಪದವೀಧರ ಅಥವಾ ರಾಜ್ಯ ಸರ್ಕಾರ ಬೆಂಬಲ ನೀಡುವ ಸೇವಾ ಸಂಸ್ಥೆಗಳು ಮತ್ತು ಸಹಾಯಧನದೊಂದಿಗೆ ನಿರ್ವಹಿಸುತ್ತಾರೆ.
* ರಾಜ್ಯದ ರೈತರು ಸಾಲದ ಸುಳಿಯಲ್ಲಿ ಸಿಕ್ಕು ಆತ್ಮ ಹತ್ಯೆಗೆ ಶರಣಾಗಿದ್ದಾರೆ. ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿದ್ದ ರೈತರ ಸಾಲವನ್ನು ಎರಡು ಬಾರಿ ಮನ್ನಾ ಮಾಡಿದೆ. ಆದರೆ, ಸಾಲ ಮನ್ನಾ ಕೇವಲ ಒಂದು ಪರಿಹಾರ ಮಾತ್ರ. ರೈತರ ಜ್ವಲಂತ ಸಮಸ್ಯೆಗಳಿಗೆ 'ರೈತ ಚೈತನ್ಯ' ಇವೆಲ್ಲ ಪರಿಹಾರಗಳಿವೆ.
ಜೆಡಿಎಸ್- ರೇಷ್ಮೆ ವಲಯ
* ರೇಷ್ಮೆ ವಲಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಮತ್ತು ರಾಜ್ಯದ ಜಿಲ್ಲೆಗಳಲ್ಲಿ ರೇಷ್ಮೆಯನ್ನು ರೈತರು ಜೀವನೋಪಾಯವಾಗಿ ಮಾಡಿಕೊಂಡಿರುತ್ತಾರೆ.
* ಆದರೆ ರೇಷ್ಮೆಬೆಳೆಗಾರರು ಉತ್ತಮ ತಳಿಯ ಮೊಟ್ಟೆಗಳು ಕೊರತೆ, ರೇಷ್ಮೆ ಹುಳುಗಳಿಗೆ ನೀಡಲಾಗುವ ಹಿಪ್ಪು ನೇರಳೆ
ಸೊಪ್ಪಿಗೆ ಕ್ರಿಮಿ ಕೀಟಗಳ ಕಾಟ, ರೇಷ್ಮೆ ಹುಳುಗಳಿಗೆ ತಗಲುವ ಸೋಂಕು, ರೇಷ್ಮೆಗೂಡಿನ ಆಹಾರ ರೇಷ್ಮೆಬೆಳೆಗಾರನಿಗೆ ಆಗುವ ಅನ್ಯಾಯಗಳು ಹೋಗಲಾಡಿಸಿ ರೇಷ್ಮೆ ಬೆಳೆ ಮತ್ತುಅದರ ಪೂರಕ ವ್ಯವಸ್ಥೆಗಳನ್ನು ಉದ್ಯಮವಾಗಿ ಪರಿಗಣಿಸಿ
ಪ್ರೋತ್ಸಾಹಗಳನ್ನು ನೀಡಲಾಗಿದೆ.
* ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
* ರಾಜ್ಯದಲ್ಲಿರುವ ರೇಷ್ಮೆ ಮಾರುಕಟ್ಟೆಗಳನ್ನು ಆಧುನೀಕರಣಗೊಳಿಸಲಾಗುವುದು.
* ರೇಷ್ಮೆ ಕೃಷಿಕರು ಮಾರಕಟ್ಟೆಯಲ್ಲಿ ತಂಗಲು ಸುವ್ಯವಸ್ಥಿತ ಕೊಠಡಿಗಳನ್ನು ನಿರ್ಮಿಸಲಾಗುವುದು.












Click it and Unblock the Notifications