ಜೆಡಿಎಸ್ ಪ್ರಣಾಳಿಕೆ 2023: ರೈತ ವರನ ಮದುವೆಯಾಗುವ ಯುವತಿಗೆ 2 ಲಕ್ಷ; ಆಟೋ ಚಾಲಕರಿಗೆ 2 ಸಾವಿರ ಮಾಸಾಶನ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು, ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ಮತದಾರರನ್ನು ಓಲೈಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಈ ನಡುವೆ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜನತಾ ದಳ (ಜಾತ್ಯಾತೀತ) ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಯಿಂ ಸೇರಿದಂತೆ ಹಲವು ಮುಖಂಡರು ಜನತಾ ಪ್ರಣಾಳಿಕೆಯ ಹೆಸರಿನ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ರೂಪಿಸಿರುವ ಅಭಿವೃದ್ಧಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
"ಜನತಾ ಮಿತ್ರ' ಎನ್ನುವ ಕಾರ್ಯಕ್ರಮದ ಮೂಲಕ ಈಗಾಗಲೇ ರಾಜ್ಯದಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ್ದು, 80 ಸಾವಿರ ಜನ ಮುಂದಿನ ಸರ್ಕಾರ ಯಾವ ವಿಚಾರಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, "ಕರುನಾಡ ಜನಾಭಿಪ್ರಾಯ ಆಧಾರಿತ ಜನತಾ ಸರ್ಕಾರ' ಮಾಡುವುದೇ ನಮ್ಮ ಗುರಿ ಎಂದು ಜೆಡಿಎಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
2023ರ ಚುನಾವಣೆಗಾಗಿ ಜೆಡಿಎಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ, ರೈತರಿಗೆ, ವಿದ್ಯಾರ್ಥಿನಿಯರಿಗೆ, ಆಟೋ ಚಾಲಕರಿಗೆ ಭರ್ಜರಿ ಯೋಜನೆಯ ಭರವಸೆ ನೀಡಿದ್ದಾರೆ.
* ಜೆಡಿಎಸ್ ಅಧಿಕಾರಕ್ಕೆ ಬಂದರೆ, ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದೆ.
* ರಾಜ್ಯದಲ್ಲಿರುವ ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2000 ರೂ.ಗಳ ಮಾಸಾಶನ ನೀಡಲಾಗುವುದು.
* ನೋಂದಾಯಿತ ಖಾಸಗಿ ಸೆಕ್ಯುರಿಟಿ ಗಾರ್ಡ್‌ಗಳಿಗೆ ಪ್ರತಿ ತಿಂಗಳು 2000 ರೂ.ಗಳ ಸಹಾಯಧನ ನೀಡಲಾಗುವುದು.
* ರಾಜ್ಯದಲ್ಲಿರುವ 57,91,032 ಹಿರಿಯ ನಾಗರಿಕರಲ್ಲಿ ಬಡತನ ರೇಖೆಗಿಂತ ಕೆಳಗಿರುವ 42,35,609 ಹಿರಿಯ ನಾಗರಿಕರ ಮಾಸಾಶನವನ್ನು 1200 ರೂ.ನಿಂದ 5000 ರೂ.ಗಳಿಗೆ ಹೆಚ್ಚಳ ಮಾಡುವುದು.
* ಮಾತೃಶ್ರೀ ಮತ್ತು ಗರ್ಭಿಣಿಯರಿಗೆ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6 ಸಾವಿರ ರೂ. ಭತ್ಯೆ.
* ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ
* ರಾಜ್ಯದಲ್ಲಿಒಟ್ಟು66,361 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ 64,729 ಕಾರ್ಯಕರ್ತೆಯರು ಮತ್ತು 59,627 ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
* ಅಂಗನವಾಡಿ ಕಾರ್ಯಕರ್ತೆಯರಿಗೆ 11,000 ರೂ., ಸಹಾಯಕಿಯರಿಗೆ 6,500 ರೂ., ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7,500 ರೂ.ಗಳ ಗೌರವಧನ ಪಾವತಿಸಲಾಗುತ್ತಿದೆ.
* ಈ ಕಾರ್ಯಕರ್ತರ ಸೇವೆಯನ್ನುಖಾಯಂಗೊಳಿಸಿ, ವೇತನ ನಿಗದಿಗೊಳಿಸಿ ಪ್ರತಿ ಕಾರ್ಯಕರ್ತೆಯರಿಗೆ ಮಾಸಿಕ ಹೆಚ್ಚುವರಿಯಾಗಿ 5000 ರೂ. ವೇತನ ಪಾವತಿಸಲಾಗುವುದು.
* ಈ ಕಾರ್ಯಕರ್ತರ ಸೇವೆಯನ್ನುಖಾಯಂಗೊಳಿಸಿ, ವೇತನ ನಿಗದಿಗೊಳಿಸಿ ಪ್ರತಿ ಕಾರ್ಯಕರ್ತೆಯರಿಗೆ ಮಾಸಿಕ ಹೆಚ್ಚುವರಿಯಾಗಿ 5000 ರೂ. ವೇತನ ಪಾವತಿಸಲಾಗುವುದು.












Click it and Unblock the Notifications