"ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್ ಪಕ್ಷದ ಗುಲಾಮರಿಗೆ ಕೇಸರಿ ಕಂಡರೆ ಯಾಕಿಷ್ಟು ಭಯ ?"

ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿ ಆದ ಸಂದರ್ಭದಿಂದಲೂ ಕಾಂಗ್ರೆಸ್ ಪಕ್ಷ ಹಾಗೂ ಒಂದು ವರ್ಗದಿಂದ ಟೀಕೆ ವ್ಯಕ್ತವಾಗುತ್ತಲ್ಲೇ ಇದೆ. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಸಣ್ಣ ಮಟ್ಟಿನ ಮನಸ್ಥಾಪ ಹಾಗೂ ವೈಮನಸ್ಸು ಮೂಡಿದೆ ಎನ್ನುವ ವಿಚಾರವೂ ಸಹ ಕಳೆದ ಕೆಲವು ತಿಂಗಳುಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದೀಗ ಈ ಹಿಂದೆ ಕೇಂದ್ರ ಸಚಿವ ಎಚ್‌.ಡಿ ಕುಮಾರ ಸ್ವಾಮಿ ಹಾಗೂ ಜೆಡಿಎಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಗ್ಗೆ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಿರುವ ಟ್ವೀಟ್ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ.

JD S Slams Congress Why Are Its Loyalists So Afraid of Saffron

ಆರ್‌ಎಸ್‌ಎಸ್‌ನ ಬಗ್ಗೆ ಹಾಗೂ ಬಿಜೆಪಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತೀಕ್ಷ್ಣ ಪದಗಳನ್ನು ಬಳಸಿ ಟೀಕೆ ಮಾಡುವುದು ಹೊಸದೇನು ಅಲ್ಲ. ಈ ಹಿಂದೆಯೂ ಅವರು ಹಲವು ಭಾರೀ ಟೀಕೆ ಮಾಡಿರುವುದು ಇದೆ. ಇದಕ್ಕೆ ಬಿಜೆಪಿ ನಾಯಕರು ಸಹ ಅದೇ ರೀತಿ ತೀಕ್ಷ್ಣವಾಗಿ ಕೆಲವೊಮ್ಮೆ ಮಿತಿ ಮೀರಿ ಹೇಳಿಕೆಗಳನ್ನೂ ಕೊಟ್ಟಿದ್ದಾರೆ. ಇನ್ನು ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ನಡೆಯನ್ನು ಟೀಕಿಸಿದ್ದಾರೆ.

ಜೆಡಿಎಸ್ ತನ್ನ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ಕೈಬಿಟ್ಟು ರಾಜಕಾರಣ ಮಾಡಲಿ. ಗೋಸುಂಬೆ ಬಣ್ಣವನ್ನು ಮಾತ್ರ ಬದಲಿಸುತ್ತದೆ., ಆದರೆ ಜೆಡಿಎಸ್ ಬಣ್ಣವನ್ನು ಮಾತ್ರವಲ್ಲ ಸಿದ್ಧಾಂತವನ್ನು, ಮಾತುಗಳನ್ನೂ ಬದಲಿಸುವ ಮೂಲಕ ತನ್ನ ನಿಜ ಬಣ್ಣವನ್ನು ಅನಾವರಣಗೊಳಿಸಿದೆ. ಸಂಘವೆಂದರೆ "ಸದಾನಂದ"ದ ಪರಿವಾರ ಎಂದು ಆರೋಪಿಸಿದ್ದವರು, ಇಂದು ಸಂಘದ ಸಹವಾಸದಲ್ಲೇ ಸದಾ ಆನಂದವಿದೆ ಎನ್ನುತ್ತಿದ್ದಾರೆ! JD-S = Janata Dal Saffronized ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ಪ್ರತಿಕ್ರಿಯೆ: ಇದಕ್ಕೆ ಜೆಡಿಎಸ್ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದೆ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈ ಎನ್ನುವವರ ಪರ ನಿಲ್ಲುವುದಕ್ಕಿಂತ.. ಸಂವಿಧಾನ ಬದ್ಧವಾಗಿ ಸ್ಥಾಪನೆಯಾದ ಕಾನೂನಿನ ರಕ್ಷಣೆ ಒದಗಿಸುವ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವವರ ಪರ ನಿಲ್ಲುವುದಕ್ಕಿಂತ.. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ಪ್ರಕಾರ ಮೀಸಲಾತಿಯಿಂದ ಗೆದ್ದ ಶಾಸಕನ ಮನೆಗೆ ಬೆಂಕಿ ಹಚ್ಚುವವರ ಪರ ನಿಲ್ಲುವುದಕ್ಕಿಂತ.. ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜದಲ್ಲಿರುವ ಮೂರು ಬಣ್ಣಗಳಲ್ಲಿ ಒಂದಾಗಿರುವ "ಕೇಸರಿ" ಪರ ನಿಂತರೆ ತಪ್ಪೇನು ಎಂದು ಪ್ರಶ್ನೆ ಮಾಡಿದೆ.

ಕೇಸರಿಯನ್ನು ನಾವು ಗೌರವಿಸುತ್ತೇವೆ. ತ್ರಿವರ್ಣ ಧ್ವಜದ ಭಾಗವಾಗಿರುವ ಕೇಸರಿ ನಮ್ಮ ಹೆಮ್ಮೆ. ಒಡೆದು ಅಳುವ ಕಾಂಗ್ರೆಸ್ ಇಂಥ ಹೆಮ್ಮೆಗಳೇ ಇಲ್ಲ. ಕೇಸರಿ ಎಂದರೆ ಧೈರ್ಯ, ತ್ಯಾಗ ಮತ್ತು ಬಲಿದಾನದ ಸಂಕೇತ. ಜಾತ್ಯತೀತ ಎಂದು ಕರೆಸಿಕೊಳ್ಳಲು ನಮಗೆ ಹೆಮ್ಮೆ ಇರುವಂತೆ ಕೇಸರಿಯೂ ನಮ್ಮ ಹೆಮ್ಮೆ.

ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು, ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್ ಪಕ್ಷದ ಗುಲಾಮರಿಗೆ ಕೇಸರಿ ಕಂಡರೆ ಯಾಕಿಷ್ಟು ಭಯ ? ಇದು ಭಾರತದ ತ್ರಿವರ್ಣ ಧ್ವಜಕ್ಕೆ ಮಾಡುತ್ತಿರುವ ಅವಮಾನ ಅಲ್ಲವೇ? ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರವಿರಲಿ ಎಂದು ಜೆಡಿಎಸ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+