"ಮೈತ್ರಿ ಸರ್ಕಾರ ಪತನಕ್ಕಿಂತ ಕುದುರೆ ವ್ಯಾಪಾರ ನೋವು ಬಾಧಿಸಲಿದೆ"
ಬೆಂಗಳೂರು, ಜುಲೈ 24: ಎರಡು ಬಾರಿಯೂ ಸಮ್ಮಿಶ್ರ/ ಮೈತ್ರಿ ಸರ್ಕಾರದ ನೇತೃತ್ವವನ್ನು ವಹಿಸಿಕೊಂಡಿದ್ದ ಕುಮಾರಸ್ವಾಮಿ ಅವರು 14 ತಿಂಗಳ ಆಡಳಿತ ನಡೆಸಿ, ವಿಶ್ವಾಸ ಮತ ಕಳೆದುಕೊಂಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್. ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ನಿಲುವಳಿ ಬಗ್ಗೆ ಸುದೀರ್ಘ ಚರ್ಚೆ, ಸಾಂವಿಧಾನಿಕ ಹುದ್ದೆಗಳ ಅಧಿಕಾರ, ಜನಪ್ರತಿನಿಧಿ ಕಾಯ್ದೆ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್ ಬಗ್ಗೆ ಸುದೀರ್ಘ ಚರ್ಚೆಯನ್ನು ನಾಡಿನ ಜನತೆ ಕಾಣುವ ಯೋಗ ಸಿಕ್ಕಿತ್ತು.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ನೇತೃತ್ವದ ವಹಿಸಿಕೊಂಡಿದ್ದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ನಿರ್ಣಯವನ್ನು ಅಂಗೀಕರಿಸಿದ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅವರು ವಿಶ್ವಾಸಮತ ವೋಟಿಂಗ್ ಡಿವಿಷನ್ ಗೆ ಹಾಕಿದರು. ಧ್ವನಿಮತದ ಮೂಲಕ ನಡೆಯಬೇಕಿದ್ದ ಬಲಾಬಲ ಪರೀಕ್ಷೆಯು ತಲೆ ಎಣಿಕೆ ಮೂಲಕ ನಡೆದಿ ಮೈತ್ರಿ ಸರ್ಕಾರಕ್ಕೆ ಸೋಲುಂಟಾಯಿತು.

ಈ ಎಲ್ಲಾ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ದೇವೇಗೌಡರು, "ಕರ್ನಾಟಕ ರಾಜಕೀಯ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳು ನನಗೆ ತೀವ್ರ ನೋವು, ಆಘಾತ ಉಂಟು ಮಾಡಿದೆ. ನನ್ನ ರಾಜಕೀಯ ವೃತ್ತಿಯಲ್ಲಿ ಇಂಥ ಘಟನಾವಳಿಗಳನ್ನು ಎಂದೂ ಕಂಡಿಲ್ಲ. ರಾಷ್ಟ್ರೀಯ ಪಕ್ಷ ಬಿಜೆಪಿ, ಆ ಪಕ್ಷದ ನಾಯಕರು, ಕುದುರೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟರು, ಇಂಥ ಅಕ್ರಮವನ್ನು ನಾನು ನನ್ನ ಜೀವಿತಾವಧಿಯಲ್ಲಿ ನೋಡಿಲ್ಲ, ಇದರಿಂದ ನನಗೆ ನೋವಾಗಿದೆ" ಎಂದರು.
ಅಂತಿಮ ಫಲಿತಾಂಶ:
ಒಟ್ಟು ಸದಸ್ಯರು : 204
ಮ್ಯಾಜಿಕ್ ನಂಬರ್ : 103
ಬಿಜೆಪಿ: 105
ಕಾಂಗ್ರೆಸ್ -ಜೆಡಿಎಸ್ ಮೈತ್ರಿ : 99
ಫಲಿತಾಂಶ : ಪ್ರಸ್ತಾಪದ ಪರ -ವಿರೋಧ ಸದಸ್ಯರ ತಲೆ ಎಣಿಕೆಯನ್ನು ಅಧಿಕಾರಿಗಳು ಪ್ರತ್ಯೇಕವಾಗಿ ಮಾಡಿದ್ದಾರೆ.
ಗೈರಾದವರು: 20












Click it and Unblock the Notifications