ಜಯಾ ಸಾವು ಕನ್ನಡಿಗರಿಗೂ ದುಃಖ ತಂದಿದೆ : ಸಿದ್ದು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 06 : "ಕರ್ನಾಟಕದಲ್ಲಿ ಹುಟ್ಟಿದ, ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿ ಜನಾಭಿಮಾನ ಗಳಿಸಿ, ಕೊನೆಗೆ ತಮಿಳುನಾಡಿನ ಮುಖ್ಯಮಂತ್ರಿಯಾದ ಕುಮಾರಿ ಜಯಾಲಲಿತಾ ಸಾವು ಕನ್ನಡಿಗರಿಗೆ ಹೆಚ್ಚು ದುಃಖ ತಂದಿದೆ" ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ಉಭಯ ರಾಜ್ಯಗಳ ನಡುವಿನ ವಿವಾದ, ರಾಜಕೀಯ ಕಚ್ಚಾಟಗಳನ್ನು ಬದಿಗಿಟ್ಟು ಸಿದ್ದರಾಮಯ್ಯ ಅವರು ಜಯಲಲಿತಾ ಅವರ ನಾಯಕತ್ವವನ್ನು ಹೊಗಳಿದ್ದು, ಈ ಸಮಯದಲ್ಲಿ ಕನ್ನಡಿಗರು ತಮಿಳರ ದುಃಖದಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿ ರಾಜಕೀಯ ಮುತ್ಸದ್ದಿತನ ಮೆರೆದಿದ್ದಾರೆ. ['ಅಮ್ಮ'ನ ಸಾವು ಮತ್ತು ಕನ್ನಡ ದಿನಪತ್ರಿಕೆಗಳ ಶೀರ್ಷಿಕೆಗಳು]

Jayalalithaa death : Kannadigas are also in grief - Siddaramaiah

ಜನಪರ ಮತ್ತು ಜನಪ್ರಿಯ ಯೋಜನೆಗಳ ಮೂಲಕ ಜನಮನ ಗೆದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವು ಆಘಾತವನ್ನುಂಟುಮಾಡಿದೆ. ತಮಿಳುನಾಡಿನ ಶೋಕದಲ್ಲಿ ಇಡೀ ಕರ್ನಾಟಕ ಭಾಗಿಯಾಗಿದೆ ಎಂದಿರುವ ಅವರು ಕರ್ನಾಟಕದಲ್ಲಿ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ.


ಡಾ. ಜೆ. ಜಯಲಲಿತಾ ಅವರು ಖಡಕ್ ಆಡಳಿತಗಾರ್ತಿಯಾಗಿದ್ದರು ಮತ್ತು ತಮಿಳುನಾಡಿನ ಜನರ ಒಳಿತಿದಾಗಿ ಹಲವಾರು ಜನಪರ ಯೋಜನೆಗಳನ್ನು, ಮಹಿಳಾಪರವಾದ ನೀತಿಗಳನ್ನು ರೂಪಿಸಿ ಜನಮನ್ನಣೆ ಗಳಿಸಿದ್ದರು ಎಂದು ಸಿದ್ದರಾಮಯ್ಯ ನುಡಿದರು. ಅವರು ಕೂಡ ಜಯಲಲಿತಾ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ. [ಸದನದಲ್ಲಿ ಜಯಲಲಿತಾ ಸೀರೆಯನ್ನು ಡಿಎಂಕೆ ಸದಸ್ಯ ಎಳೆದಾಗ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka chief minister has said that, Govt of Karnataka shares the grief of the people of Tamil Nadu & has declared one day mourning in honour of the departed leader Jayalalithaa. Siddaramaiah is also participating in the last rites of Jayalalithaa.
Please Wait while comments are loading...