ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯ ಕೇಸ್ : ಸುಪ್ರೀಂಗೆ ಹೋಗಲು ಸರ್ಕಾರಕ್ಕೆ ಆಚಾರ್ಯ ಶಿಫಾರಸು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 15 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ದೋಷಮುಕ್ತರಾಗಿರುವ ಜಯಲಲಿತಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಯಲಲಿತಾ ದೋಷಮುಕ್ತಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಎಸ್‌ಪಿಪಿ ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರತಿಯನ್ನು ಅಧ್ಯಯನ ಮಾಡಿದ ಬಳಿಕ ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ಅವರು ಹೈಕೋರ್ಟ್ ತೀರ್ಪಿನ ಕುರಿತು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ.[ಜಯಾ ಭವಿಷ್ಯ ಸಿದ್ದು ಕೈಯಲ್ಲಿ: ಪ್ರಮಾಣವಚನ ಮುಂದಕ್ಕೆ?]

B.V.Acharya

ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು 90 ದಿನಗಳ ಕಾಲಾವಕಾಶವಿದೆ. ಕರ್ನಾಟಕ ಸರ್ಕಾರ ಬಿ.ವಿ.ಆಚಾರ್ಯ ಅವರ ಶಿಫಾರಸನ್ನು ಪರಿಗಣಿಸಿ ಪ್ರಕರಣದ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಿದೆಯೇ? ಎಂದು ಕಾದು ನೋಡಬೇಕು. [ಜಯಲಲಿತಾ ಆರೋಪ ಮುಕ್ತ, ಬಿ.ವಿ.ಆಚಾರ್ಯ ಸಂದರ್ಶನ]

ತೀರ್ಪು ಬದಲಾವಣೆ ಇಲ್ಲ : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಬ್ಯಾಂಕ್‌ ಸಾಲದ ಲೆಕ್ಕದಲ್ಲಿ ತಪ್ಪಾಗಿದೆ ಎಂದು ಬಿ.ವಿ.ಆಚಾರ್ಯ ಅವರು ಹೇಳಿದ್ದರು. ಹೈಕೋರ್ಟ್ ಈ ಗಣಿತದ ತಪ್ಪುಗಳನ್ನು ಸರಿಪಡಿಸಬಹುದು. ಆದರೆ, ನೀಡಿರುವ ಅಂತಿಮ ತೀರ್ಪನ್ನು ಬದಲಾವಣೆ ಮಾಡುವಂತಿಲ್ಲ. ['ಅಕ್ರಮ ಆಸ್ತಿ ಪ್ರಕರಣ: ಜಯಲಲಿತಾ ನಿರ್ದೋಷಿ']

ಮುಂದೇನು? : ಜಯಲಲಿತಾ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರ ಬಿ.ವಿ.ಆಚಾರ್ಯ ಅವರ ಶಿಫಾರಸನ್ನು ಪರಿಗಣಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಕಾನೂನು ಇಲಾಖೆ ಮತ್ತು ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಬಹುದಾಗಿದೆ.

ಒಂದು ವೇಳೆ ಸರ್ಕಾರದ ಮೇಲ್ಮನವಿ ಪರಿಗಣಿಸಿ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ಕೊಟ್ಟರೆ, ಸಿಬಿಐ ವಿಶೇಷ ನ್ಯಾಯಾಲಯ ಜಯಲಿತಾ ಅವರಿಗೆ ನೀಡಿದ 4 ವರ್ಷದ ಜೈಲು ಶಿಕ್ಷೆ ಜಾರಿಗೆ ಬರಲಿದ್ದು, ಅವರು ಪುನಃ ತಮಿಳುನಾಡು ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಹೋಗಲಿದೆ.

English summary
Special Public Prosecutor B.V.Acharya has recommended to the Karnataka government to file an appeal in the J.Jayalalithaa case. Acharya informed the government that it is a fit case to file an appeal and seek reversal of the acquittal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X