ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾವದ್ ಚಂಡಮಾರುತ: 11 ರೈಲುಗಳ ಸಂಚಾರ ರದ್ದು

|
Google Oneindia Kannada News

ಬೆಂಗಳೂರು, ಡಿ.3: ಜವಾದ್ ಚಂಡಮಾರುತ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ 11 ರೈಲುಗಳ ಸಂಚಾರ ರದ್ದು ಮಾಡಿದೆ.

ಮುಂದಿನ 24 ಗಂಟೆಯಲ್ಲಿ ಜಾವದ್ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜವಾದ್ ಚಂಡಮಾರುತದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳು ಹಾಗೂ ಸಂಬಂಧಿಸಿದ ಸಂಸ್ಥೆಗಳು ಕೈಗೊಂಡಿರುವ ಸಿದ್ಧತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಚಂಡಮಾರುತದ ಪ್ರಭಾವದ ಕರ್ನಾಟಕದ ಮೇಲೆ ಅಷ್ಟಾಗಿ ಇಲ್ಲದಿದ್ದರೂ ಸಹ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಡಿಸೆಂಬರ್ 7ರವರೆಗೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Jawad Cyclone: South western Railway has canceled 11 trains service

11 ರೈಲುಗಳ ಸಂಚಾರ ರದ್ದು:

ಡಿ. 3 ಶುಕ್ರವಾರ: ರೈಲು ಸಂಖ್ಯೆ 22883 ಪುರಿ - ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12245 ಹೌರಾ - ಯಶವಂತಪುರ ದುರೊಂತೋ ಎಕ್ಸ್‌ಪ್ರೆಸ್

ಡಿ. 3 ಶುಕ್ರವಾರ : ರೈಲು ಸಂಖ್ಯೆ 22817 ಹೌರಾ - ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12863 ಹೌರಾ - ಯಶವಂತಪುರ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12889 ಟಾಟಾನಗರ - ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 12246 ಯಶವಂತಪುರ - ಹೌರಾ ದುರಾಂಟೊ ಎಕ್ಸ್ ಪ್ರೆಸ್ ಸೇವೆ

ಡಿ. 3 ಶುಕ್ರವಾರ: ರೈಲು ಸಂಖ್ಯೆ 12246 ಯಶವಂತಪುರ - ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್

ಡಿ. 3 ಶುಕ್ರವಾರ: ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ - ಹೌರಾ ಅಮರಾವತಿ ಎಕ್ಸ್ ಪ್ರೆಸ್‌

ಡಿ. 3 ಶುಕ್ರವಾರ: ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು - ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್

ಡಿ. 4 ಶನಿವಾರ: ರೈಲು ಸಂಖ್ಯೆ 18463 ಭುವನೇಶ್ವರ - ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್

ಡಿ. 4 ಶನಿವಾರ: ರೈಲು ಸಂಖ್ಯೆ 18637 ಹಟಿಯಾ - ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್

ಸರಕು ಸಾಗಣೆಯಲ್ಲಿ ನೈರುತ್ಯ ರೈಲ್ವೆ ದಾಖಲೆ ಆದಾಯ ಗಳಿಕೆ:
ನೈರುತ್ಯ ರೈಲ್ವೆ ನವೆಂಬರ್ ತಿಂಗಳಲ್ಲಿ ಸರಕು ಮತ್ತು ಸಾಗಣೆಯಲ್ಲಿ ದಾಖಲೆಯ ಆದಾಯ ಗಳಿಕೆ ಮಾಡಿದೆ.

ನವೆಂಬರ್ ತಿಂಗಳಲ್ಲಿ 10.42 ಕೋಟಿ ರೂ. ಆದಾಯ ಗಳಿಸಲಾಗಿದೆ. ಕಳೆದ ವರ್ಷದ ಅಂದರೆ 2020 ನವೆಂಬರ್‌ನಲ್ಲಿ 6.53 ಕೋಟಿ ಆದಾಯ ಗಳಿಸಿತ್ತು.

ಕೋವಿಡ್- 19 ಪ್ರತಿಕೂಲ ಪರಿಸ್ಥಿತಿ ಇತ್ತು. ಇದಲ್ಲದೆ, ನಿರಂತರ ಮಳೆಯಿಂಧ ಹಲವೆಡೆ ರೈಲು ಸಂಚಾರಕ್ಕೆ ತೊಂದರೆ ಆಗಿತ್ತು ಇಂತಹ ಸವಾಲುಗಳ ಮಧ್ಯೆಯೂ ನೈರುತ್ಯ ರೈಲ್ವೆ ಸರಕು ಸಾಗಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಉದ್ಯಮಗಳಿಗೆ ಕಚ್ಚಾವಸ್ತು ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಎಡೆಬಿಡದೆ ಶ್ರಮಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಹೇಳಿದ್ದಾರೆ.

ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ಕಲ್ಲಿದ್ದಲು ಲೋಡಿಂಗ್‌ನಲ್ಲಿ ಶೇ.2.1ರಷ್ಟು ಏರಿಕೆಯಾಗಿದೆ. ಅದೇ ರೀತಿ ಐರನ್ ಹಾಗೂ ಸ್ಟೀಲ್ ಸಾಗಣಿಕೆಯಲ್ಲಿ ಶೇ 12.9ರಷ್ಟು ಏರಿಕೆ ಕಂಡಿದೆ. ಏಪ್ರಿಲ್‌ನಿಂದ ನವೆಂಬರ್‌ರೆಗೆ 68 ಕೋಟಿ ರೂ .ಆದಾಯ ಗಳಿಸಿದೆ. ಇದು ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ ಶೇ.39.26ರಷ್ಟು ಏರಕೆಯಾಗಿದೆ ಎಂದು ಸಂಜೀವ್ ಕಿಶೋರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recommended Video

ಮೋದಿ ಗೆ ವೋಟು ಹಾಕಿದ್ರೆ ಬೀದಿಗೆ ಬರ್ತಿರ ! | Oneindia Kannada

English summary
In view of Jawad Cyclone Southwestern Railway has canceled 11 trains service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X