ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರಕಿಹೊಳಿ ಕಾಮಪುರಾಣದ ನಡುವೆ ಈ ಸೂಕ್ಷ್ಮ ವಿಚಾರ ಸತ್ತು ಹೋಗದಿರಲಿ!

|
Google Oneindia Kannada News

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುವ ಕಾಮಪುರಾಣ, ಅವರ ರಾಜೀನಾಮೆಯ ನಂತರ ಒಂದು ಹಂತಕ್ಕೆ ಬಂದು ನಿಂತಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕೆನ್ನುವ ಎಚ್ಚರಿಕೆಯೂ ಸಿಎಂ ಕಡೆಯಿಂದ ಹೋಗಿದೆ.

ಜಾರಕಿಹೊಳಿಯವರ ಸಿಡಿ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತುರ್ತಾಗಿ ಸಭೆ ಸೇರಿದ್ದರು.

ಜಾರಕಿಹೊಳಿ ಸಿಡಿ ಪ್ರಕರಣ: ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲುಜಾರಕಿಹೊಳಿ ಸಿಡಿ ಪ್ರಕರಣ: ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲು

ಪಕ್ಷಕ್ಕಾಗುತ್ತಿರುವ ಡ್ಯಾಮೇಜ್, ಐದು ರಾಜ್ಯಗಳ ಚುನಾವಣೆಯ ಹಿನ್ನಲೆಯಲ್ಲಿ ಕೂಡಲೇ ರಾಜೀನಾಮೆ ನೀಡಬೇಕೆಂದು ಜಾರಕಿಹೊಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದರು ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ಖಡಕ್ ಸೂಚನೆಯ ನಂತರವೇ ಜಾರಕಿಹೊಳಿ ಪದತ್ಯಾಗಕ್ಕೆ ಮುಂದಾಗಿದ್ದು ಎನ್ನುವ ಮಾತೂ ಓಡಾಡುತ್ತಿದೆ.

ಇವೆಲ್ಲದರ ನಡುವೆ, ಯುವತಿಯ ಜೊತೆ ಜಾರಕಿಹೊಳಿಯ ಸಂಭಾಷಣೆಯ ವೇಳೆ, ಕೇಳಿ ಬಂದ ಇನ್ನೊಂದು ಗಂಭೀರ ವಿಚಾರ ಏನಂದರೆ, ಯಡಿಯೂರಪ್ಪನವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎನ್ನುವುದು.

ನನ್ನ ಪರ್ಫಾರ್ಮೆನ್ಸ್ ನಿಮಗೆ ಇಷ್ಟವಾದಲ್ಲಿ JARAKI ಅಂತಾ ಟೈಪ್ ಮಾಡಿ 5757ಗೆ ಕಳುಹಿಸಿ...ನನ್ನ ಪರ್ಫಾರ್ಮೆನ್ಸ್ ನಿಮಗೆ ಇಷ್ಟವಾದಲ್ಲಿ JARAKI ಅಂತಾ ಟೈಪ್ ಮಾಡಿ 5757ಗೆ ಕಳುಹಿಸಿ...

ವಿರೋಧ ಪಕ್ಷಗಳು ಯಾವರೀತಿ ತೆಗೆದುಕೊಳ್ಳತ್ತವೆ ಎನ್ನುವುದು ಮುಂದಿರುವ ಪ್ರಶ್ನೆ

ವಿರೋಧ ಪಕ್ಷಗಳು ಯಾವರೀತಿ ತೆಗೆದುಕೊಳ್ಳತ್ತವೆ ಎನ್ನುವುದು ಮುಂದಿರುವ ಪ್ರಶ್ನೆ

ಜಾರಕಿಹೊಳಿಯದ್ದು ಎನ್ನಲಾಗುತ್ತಿರುವ ಸಿಡಿಯಲ್ಲಿ ಯುವತಿಯ ಜೊತೆ ಸರಸ-ಸಲ್ಲಾಪದಲ್ಲಿ ತೊಡಗಿದ್ದಾಗ ಅವರು ಸಿಎಂ ಬಿಎಸ್ವೈ ಬಗ್ಗೆ ಆಡಿದ ಮಾತು ಅತ್ಯಂತ ಗಂಭೀರವಾದದ್ದು. ಸರಕಾರದ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರೇ ನೇರವಾಗಿ ಈ ರೀತಿ ಹೇಳುತ್ತಾರೆ ಎಂದರೆ ಅದರ ಗಂಭೀರತೆಯನ್ನು ವಿರೋಧ ಪಕ್ಷಗಳು ಯಾವರೀತಿ ಮುಂದಕ್ಕೆ ತೆಗೆದುಕೊಂಡು ಹೋಗುತ್ತವೆ ಎನ್ನುವುದು ಇಲ್ಲಿರುವ ಪ್ರಶ್ನೆ.

ಯಡಿಯೂರಪ್ಪ ಬಹಳ ಕರಪ್ಷನ್ ಮಾಡ್ಯಾನಾ

ಯಡಿಯೂರಪ್ಪ ಬಹಳ ಕರಪ್ಷನ್ ಮಾಡ್ಯಾನಾ

"ಯಡಿಯೂರಪ್ಪ ಬಹಳ ಕರಪ್ಷನ್ ಮಾಡ್ಯಾನಾ" ಎಂದು ಯುವತಿಯ ಜೊತೆಗೆ ರಮೇಶ್ ಜಾರಕಿಹೊಳಿ ಹೇಳುತ್ತಾರೆ. ತಮ್ಮದೇ ಪಕ್ಷ ಅಧಿಕಾರದಲ್ಲಿ ಇರುವುದು ಮತ್ತು ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದು ಇಲ್ಲಿ ಗಮನಿಸಬೇಕಾದ ವಿಚಾರ. ಸಿಡಿ ವಿಚಾರವೇನೋ ಅವರ ರಾಜೀನಾಮೆಯಿಂದ ತಣ್ಣಗಾಗಬಹುದು. ಆದರೆ, ಅವರು ಆಡಿರುವ ಭ್ರಷ್ಟಾಚಾರದ ವಿಚಾರ ಯಾವರೀತಿ ಆದ್ಯತೆ ಪಡೆದುಕೊಳ್ಳಬಹುದು ಎನ್ನುವುದು ನೋಡಬೇಕಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಕರಪ್ಸನ್ ಬಗ್ಗೆ ಮಾತಾಡಿದ್ದರು

ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಕರಪ್ಸನ್ ಬಗ್ಗೆ ಮಾತಾಡಿದ್ದರು

ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳುತ್ತಿರುವುದು ರಮೇಶ್ ಜಾರಕಿಹೊಳಿ ಒಬ್ಬರು ಮಾತ್ರವಲ್ಲ, ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಇದನ್ನು ಹಲವು ಬಾರಿ ಸಾರ್ವಜನಿಕ ಸಭೆಯಲ್ಲೇ ಹೇಳಿದ್ದರು. ಸಿಎಂ ಮತ್ತು ಅವರ ಪುತ್ರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಅವರೂ ಆರೋಪಿಸಿದ್ದರು.

Recommended Video

ಅಬ್ಬಾ ಎಂಥಾ ಕೆಟ್ಟ ರಾಜಕಾರಣಿಗಳು ! ನಾಚಿಗೆಡ್ ಸರ್ಕಾರ ! | Oneindia Kannada
ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಚಾರವನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ?

ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಚಾರವನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ?

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಯಡಿಯೂರಪ್ಪ ಭ್ರಷ್ಟ ಎಂದು ಜಾರಕಿಹೊಳಿ ಮಾಡಿದ ಆರೋಪವನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಲಿದೆ ಎನ್ನುವುದು ಇಲ್ಲಿ ಮುಖ್ಯ. ರಾಜ್ಯದ ವಿಚಾರಗಳನ್ನು ಬಿಟ್ಟು ಕೇವಲ ಪ್ರಧಾನಿ ಮೋದಿ‌ ನಿಂದನೆಯನ್ನೇ ಈ ಎರಡು ಪಕ್ಷಗಳ ಕರ್ತವ್ಯ ಎಂದು ಭಾವಿಸುವುದಾದರೆ, ತಮಗೆ ಸಿಕ್ಕ ಬ್ರಹ್ಮಾಸ್ತ್ರವನ್ನು ಗುರಿತಪ್ಪಿಸಿ ಹೊಡೆದಂತೆಯೇ..

English summary
Ramesh Jarkiholi Discussion About BSY Government Corruption With Girl In CD, How Opposition Will Take Forward This,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X