ಜನತಾ ದರ್ಶನ: ಮೊದಲ ದಿನವೇ ಭಾರೀ ಸ್ಪಂದನೆ, 6700 ಅರ್ಜಿ ಸ್ವೀಕಾರ, ಪರಿಹಾರ ಸಿಕ್ಕಿದೆಷ್ಟು?, ಪೂರ್ಣ ವಿವರ
ಬೆಂಗಳೂರು, ಸೆಪ್ಟಂಬರ್ 26: ಕರ್ನಾಟಕ ರಾಜ್ಯ ಸರ್ಕಾರದ ನಿರ್ದೇಶನ ಮೇರೆಗೆ ಸೋಮವಾರ ಎರಡು ಜಿಲ್ಲೆಗಳನ್ನು ಬಿಟ್ಟು ಉಳಿದ ಅಷ್ಟು ಜಿಲ್ಲೆಗಳಲ್ಲಿ 'ಜನತಾ ದರ್ಶನ' ನಡೆಸಲಾಯಿತು. ಸರ್ಕಾರದ ಈ ಮಹತ್ವದ ಕಾರ್ಯಕ್ರಮಕ್ಕೆ ಜನರು ಭರಪೂರ ಸ್ಪಂದಿಸಿದ್ದಾರೆ. ಅಹವಾಲುಗಳ ಸಾವಿರಾರು ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಈ ಪೈಕಿ ಹಾವೇರಿ ಜಿಲ್ಲೆಯಿಂದ ಅತೀ ಹೆಚ್ಚು ಅಹವಾಲುಗಳು ಸಲ್ಲಿಕೆಯಾಗಿವೆ. 21 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಗದಗ ಜಿಲ್ಲೆಗಳನ್ನು ಬಿಟ್ಟು ಉಳಿದ 29 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಜನರ ಕುಂದುಕೊರತೆ ಆಲಿಸುವ, ಅಹವಾಲು ಸ್ವೀಕರಿಸುವ 'ಜನತಾ ದರ್ಶನ' ಕಾರ್ಯಕ್ರಮ ನಡೆದಿದೆ. ಇದರಲ್ಲಿ ಮೊದಲ ದಿನವೇ 6700 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಹಾವೇರಿ ಜಿಲ್ಲೆ ಒಂದರಿಂದ 774 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು 'ಕನ್ನಡಪ್ರಭ' ವರದಿ ಮಾಡಿದೆ.

ಒಟ್ಟು ಅರ್ಜಿಗಳ ಪೈಕಿ 6,684 ಅರ್ಜಿಗಳನ್ನು ಜನತಾ ದರ್ಶನ ನಡೆಸಿದ ಮಂತ್ರಿಗಳು ಅಧಿಕಾರಿಗಳಿಗೆ ಸಲ್ಲಿಕೆ ಆಗಿವೆ. ಜನತಾ ದರ್ಶನದಲ್ಲಿ 21 ಅರ್ಜಿಗಳಿಗೆ ಸ್ಥಳದಲ್ಲಿಯೇ ಸರ್ಕಾರದ ಪ್ರತಿನಿಧಿಗಳ ಪರಿಹಾರ ಒದಗಿಸಿದ್ದಾರೆ. ಉಳಿದಂತೆ ಎಲ್ಲ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದ ಸುಮಾರು 2000 ಕ್ಕೂ ಅಧಿಕ ಅಹವಾಲುಗಳು ಸಲ್ಲಿಕೆ ಆಗಿದ್ದು, ಕೆಲವುಗಳು ಮೌಖಿಕವಾಗಿ ಕುಂದು ಕೊರತೆ, ಸಮಸ್ಯೆ ತಿಳಿಸಿ ಪರಿಹಾರ ಕಂಡು ಕೊಳ್ಳಲಾಗಿದೆ.
ಮದುವೆ ಆಗಿಲ್ಲ: ದಯಾಮರಣ ಕೋರಿದ ಚಾಮರಾಜನಗರದ ವ್ಯಕ್ತಿ
ಸರ್ ನನಗಿನ್ನು ಮದುವೆ ಆಗಿಲ್ಲ. ನಮಗೆ ಮನೆ ಇಲ್ಲದ ಕಾರಣಕ್ಕಾಗಿ ಇನ್ನೂ ಮದುವೆ ಆಗಿಲ್ಲ. ಮದುವೆ ಆದರೆ ಹೆಂಡತಿಯನ್ನು ಎಲ್ಲಿ ಕರೆದುಕೊಂಡು ಹೋಗುತ್ತಿಯಾ ಎಂದು ಅನ್ನುತ್ತಾರೆ. ನನಗೆ ದಯಾಮಾಡಿ ಮನೆ ಕಟ್ಟಿಸಿಕೊಡಿ ಇಲ್ಲವೇ ದಯಾಮರಣ ಕೊಡಿ ಸರ್ ಎಂದು ಚಾಮರಾಜನಗರ ಜಿಲ್ಲೆಯ ವ್ಯಕ್ತಿ ಜನತಾ ದರ್ಶನದಲ್ಲಿ ಸರ್ಕಾರಕ್ಕೆ ಮನವಿ ಇಟ್ಟ ಘಟನೆ ಮೊದಲ ದಿನವೇ ನಡೆದಿದೆ.

ಇನ್ನೂ ಗದಗ ಮತ್ತು ಬೆಳಗಾವಿಯಲ್ಲಿ ಸರ್ಕಾರದ ಜನತಾ ದರ್ಶನ ಕೆಲವು ಕಾರಣಗಳಿಂದ ಮುಂದಿನ ದಿನಗಳಲ್ಲಿ ಇಲ್ಲಿ ಸಹ ಸಭೆ ನಡೆಸಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.












Click it and Unblock the Notifications