Jaggery Unsafe: ಇಡ್ಲಿ, ಬಟಾಣಿ, ಕಲ್ಲಂಗಡಿ ಬಳಿಕ ಸಿಹಿ ಸಿಹಿ ಬೆಲ್ಲವೂ ಕೂಡ ಕಹಿ- ಆಹಾರ ಇಲಾಖೆ ಎಚ್ಚರಿಕೆ

ಬೆಂಗಳೂರು ಮಾರ್ಚ್ 4: ಇಡ್ಲಿ, ಬಟಾಣಿ, ಕಲ್ಲಂಗಡಿ ಬಳಿಕ ಬೆಲ್ಲ ಹಾಗೂ ಟೊಮ್ಯಾಟೊ ಸಾಸ್ ಕೂಡ ಸೇವನೆಗೆ ಅಸುರಕ್ಷಿತ ಎಂದು ಆಹಾರ ಇಲಾಖೆ ಪರಿಶೀಲನೆಯಿಂದ ತಿಳಿದು ಬಂದಿದೆ. ಜನವರಿ ತಿಂಗಳಿನಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಲವೆಡೆ ಆಹಾರ ಮಳಿಗೆಗಳ ಮೇಲೆ ದಾಳಿ ಮಾಡಿತ್ತು. ಆಹಾರದ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿತ್ತು. ಇದೀಗ ಬಂದ ವರದಿಯಿಂದ ಬೆಲ್ಲ ಹಾಗೂ ಟೊಮ್ಯಾಟೊ ಸಾಸ್ ಸೇವನೆಗೆ ಯೋಗ್ಯವಲ್ಲ ಎನ್ನುವುದು ತಿಳಿದು ಬಂದಿದೆ. ಹೀಗಾಗಿ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ಹೌದು... ಸಾಮಾನ್ಯವಾಗಿ ಬೆಲ್ಲ ಗೋಲ್ಡ್‌ ಕಲರ್ ಇರುವುದಿಲ್ಲ. ಅದು ಕಬ್ಬಿನ ಬಣ್ಣವನ್ನು ಹೊಂದಿರುತ್ತದೆ. ಆದರೆ ಅದು ಗೋಲ್ಡ್‌ ಬಣ್ಣಕ್ಕೆ ತಿರುಗಲು ಅದರಲ್ಲಿ ರಾಸಾಯನಿಕವನ್ನು ಬಳಕೆ ಮಾಡಲಾಗುತ್ತದೆ. ಇದರಿಂದ ಬೆಲ್ಲ ಆಕರ್ಷಕವಾಗಿ ಕಾಣಿಸುತ್ತದೆ. ಇದು ಸೇವನೆಗೆ ಯೋಗ್ಯವಲ್ಲ ಎಂದು ಪರಿಶೀಲನಾ ವರದಿಯಿಂದ ದೃಢಪಟ್ಟಿದೆ.

Jaggery unsafe food department warns

ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಎಚ್ಚರಿಕೆ ನೀಡಲಾಗಿದೆ. ಬೆಲ್ಲದಲ್ಲಿ ಇರುವ ರಾಸಾಯನಿಕಗಳಿಂದ ಬೆನ್ನು ನೋವು, ಮೂಳೆಗಳ ಸವೆತದಂತಹ ಸಮಸ್ಯೆಗಳು ಉಂಟಾಗಲಿವೆ ಎಂದು ತಿಳಿದು ಬಂದಿದೆ.

ಇನ್ನೂ ಟೊಮ್ಯಾಟೊ ಸಾಸ್ ನಲ್ಲೂ ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತಿದೆ. ಟೊಮ್ಯಾಟೊ ಸಾಸ್ ಬಣ್ಣ ಆಕರ್ಷಕವಾಗಿ ಕಾಣಲು ಅದಕ್ಕೆ ಸೋಡಿಯಂ ಬೆಂಜೋಯಟ್ ಎನ್ನುವ ರಾಸಾಯನಿಕವನ್ನು ಬಳಕೆ ಮಾಡಲಾಗುತ್ತದೆ. ಆದರೆ ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದನ್ನು ನಿರಂತರವಾಗಿ ಸೇವಿಸುವುದರಿಂದ ಬೆನ್ನು, ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ ಎಂದು ಆಹಾರ ತಜ್ಞರು ಎಚ್ಚರಿಸಿದ್ದಾರೆ.

ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, 'ಪ್ರತಿ ತಿಂಗಳು ಒಂದೊಂದು ಆಹಾರ ಪದಾರ್ಥ ಪರಿಶೀಲನೆ ಮಾಡಲಾಗುತ್ತದೆ. ಆ ವರದಿಯನ್ನು ಸಾರ್ವಜನಿಕರಿಗೆ ತಿಳಿಸುವುದು, ಕಲಬೆರೆಕೆ ಕಂಡು ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದು ನಿರಂತರ ಪ್ರಕ್ರಿಯೆ. ಆಹಾರ ಪರಿಶೀಲನೆ ಮಾಡಿ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇವೆ. ವರದಿ ಬಂದ ಬಳಿಕ ಸಾರ್ವಜನಿಕವಾಗಿ ಬಹಿರಂಗಗೊಳಿಸಿ, ನ್ಯೂನ್ಯತೆ ಕಂಡು ಬಂದ ಆಹಾರ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

ಈ ಹಿಂದೆ ಶೇಖರಿಸಿದ ಬಣ್ಣ ಬಣ್ಣಗಳ ಬಟಾಣಿ ಅಸುರಕ್ಷಿತ ಎಂದು ಹೇಳಲಾಗಿತ್ತು. ಇದರೊಂದಿಗೆ ಇಡ್ಲಿ ತಯಾರಿಸಲು ಬಳಸುವ ಪ್ಲ್ಯಾಸ್ಟಿಕ್ ನಿಂದಲೂ ಕ್ಯಾನ್ಸರ್ ಹಾಗೂ ಇನ್ನಿತರ ಕಾಯಿಲೆಗಳು ಬರುತ್ತವೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ ಬೇಸಿಗೆಗೆ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಆಕರ್ಷಕವಾಗಿ ಕಾಣಲು ಕಲರ್ ಇಂಜೆಕ್ಟ್ ಮಾಡಲಾಗುತ್ತಿದೆ ಎನ್ನುವ ಅಂಶ ಬಯಲಾಗಿತ್ತು.

ಜೊತೆಗೆ ಹೋಳಿಗೆ ತಯಾರಿಸುವಾಗ ಪ್ಲ್ಯಾಸ್ಟಿಕ್ ಬಳಕೆ ಮಾಡುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಬೆಲ್ಲದ ಬಣ್ಣ ಬದಲಾಗಲು ಹಾಗೂ ಟೊಮ್ಯಾಟೊ ಸಾಸ್ ಬಣ್ಣ ಆಕರ್ಷಕವಾಗಿ ಕಾಣಲು ಕೂಡ ರಾಸಾಯನಿಕಗಳನ್ನು ಬಳಸಿರುವುದು ಪರಿಶೀಲನೆಯಿಂದ ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+