Jagadish Shettar First Reaction: ಕೈ ಹಿಡಿದ ಶೆಟ್ಟರ್; ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿ ರಾಜ್ಯ ಬಿಜೆಪಿ ಇದೆ: ಶೆಟ್ಟರ್
ಬೆಂಗಳೂರು,ಏಪ್ರಿಲ್ 17: ಚುನಾವಣೆ ಟಿಕಟ್ ಘೋಷಣೆಯ ಬೆನ್ನಲ್ಲೇ ಬಿಜೆಪಿ ವಿರುದ್ದ ಹಲವು ನಾಯಕರು ರಾಜೀನಾಮೆ ಸಲ್ಲಿಸಿದ್ದಾರೆ. ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇನ್ನೂ ಕಾಂಗ್ರೆಸ್ ಸೇರ್ಪಡೆಯ ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ನನಗೆ ಅನ್ಯಾಯವಾಗಿದೆ. ಹೀಗಾಗಿ ಭಾರತೀಯ ಜನಾತ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಬಿಜೆಪಿ ನನಗೆ ಟಿಕೆಟ್ ನೀಡದಿರುವುದು ಬಹಳಷ್ಟು ಆಶ್ಚರ್ಯವಾಗಿದೆ. ನನಗೆ ಹಾಗೂ ನನ್ನ ಮತಕ್ಷೇತ್ರ ಜನರ ಸ್ವಾಭಿಮಾನ ಪ್ರಶ್ನೆ ಇದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಒಬ್ಬ ಮಾಜಿ ಮುಖ್ಯಮಂತ್ರಿಗೆ ಟಿಕೆಟ್ ಇಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದ ಅವರು, ಕಳೆದ ಹಲವು ವರ್ಷಗಳ ಹಿಂದೆಯಿಂದಲೂ ಬಿಜೆಪಿ ಪಕ್ಷವನ್ನ ಕಟ್ಟಿ ಬೆಳೆಸಿದ್ದೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಹೆಗ್ಡೆ ಅವರ ಜೊತೆಗೆ ರಾಜ್ಯದಲ್ಲಿ ಪಕ್ಷವನ್ನ ಕಟ್ಟಿ, ಪಕ್ಷ ಸಂಘಟನೆಯನ್ನ ಮಾಡಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನ ಸಂಘಟನೆ ಮಾಡಿದ್ದೇನೆ ಆದರೂ ನನಗೆ ಟಿಕೆಟ್ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನನಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ, ಅದಕ್ಕೆ ಪ್ರತಿಯಾಗಿ ಕಾರ್ಯಕರ್ತರನ್ನಾಗಿ ನಾನು ಪಕ್ಷವನ್ನ ಕಟ್ಟಿ ಬೆಳೆಸಿದ್ದೇನೆ. 1994 ರಿಂದ 6 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ನಿರಂತರವಾಗಿ 20 ರಿಂದ 25 ಸಾವಿರ ಮತಗಳಲ್ಲಿ ಗೆಲುವು ಸಾಧಿಸಿದ್ದೇನೆ. ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿದ್ದೇನೆ ಟಿಕೆಟ್ ಇಲ್ಲ ಎಂದಾಗ ಆಘಾತ ಆಯ್ತು ಒಬ್ಬ ಹಿರಿಯ ನಾಯಕರಿಗೆ ನೋವಾಗಿದೆ. ಬೇರೆ ಸ್ಥಾನ ಕೊಡ್ತಿವಿ ಅಂತ 15 ದಿನ ಮುಂಚೆ ಹೇಳ ಬೇಕಿತ್ತು. ನಾನು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬರ್ಲಿಲ್ಲ. ಸಂಘ ಪರಿವಾರದಿಂದ ಬಂದ ವ್ಯಕ್ತಿ ನಾನು. ಕಳೆದ ಆರು ತಿಂಗಳಿನಿಂದ ಪಕ್ಷದಲ್ಲಿ ನನ್ನನ್ನ ಕಡಗಣನೆ ಮಾಡುತ್ತಿದ್ದಾರೆ. ಇದು ನನಗೆ ದೊಡ್ಡ ಅಘಾತ ಉಂಟು ಮಾಡಿದ್ದೇ ಎಂದು ಬೇಸ ವ್ಯಕ್ತ ಪಡಿಸಿದರು.
ಕೆಲ ದಿನಗಳ ಹಿಂದೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳ್ತಾರೆ. ನಿಮಗೆ ಹಾಗೂ ಈಶ್ವರಪ್ಪ ನಿಗೆ ಟಿಕಟ್ ಇಲ್ಲ, ಸುದ್ದಿಗೋಷ್ಟಿ ಮಾಡಿ ಅನೌನ್ಸ್ ಮಾಡಿ ಅಂತ. ಒಬ್ಬ ಚಿಕ್ಕ ಬಾಲಕನಿಗೆ ಹೇಳಿದ ರೀತಿ ಹೇಳ್ತಾರೆ, ಒಬ್ಬ ಹಿರಿಯನಿಗೆ ಬಳಿ ನಡೆದುಕೊಳ್ಳುವ ರೀತಿನಾ ಇದು ? ಎಂದು ಪ್ರಶ್ನಿಸಿದ ಅವರು. ನಾನು ಒಬ್ಬ ಮಾಜಿ ಮುಖ್ಯಮಂತ್ರಿ ನನಗೂ ಗೌರವ ಬೇಡ್ವಾ? ಅಭಿಮಾನಿಗಳು ನಿಮಗೆ ಟಿಕಟ್ ಇಲ್ಲ ಎಂಬ ಸುದ್ದಿ ಕೇಳಿ ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿಗೆ ಟಿಕೆಟ್ ನೀಡದೇ ಇರುವುದು ನನ್ನ ಜನತೆಯ ಸ್ವಾಭಿಮಾನಕ್ಕೆ ಹಾಗೂ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಂತರ ಜನರ ಅಭಿಪ್ರಾಯ ತೆಗೆದುಕೊಂಡು ನಿರ್ಧಾರಕ್ಕೆ ಬಂದೆ ಕಾಂಗ್ರೆಸ್ ನಾಯಕರು ನನನ್ನ ಸಂಪರ್ಕ ಮಾಡಿದ್ರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇಡಿದಂತೆ ಹಲವು ನಾಯಕರು ನನ್ನನ್ನ ಸಂಪರ್ಕ ಮಾಡಿದರು. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಬಿಜೆಪಿಯಿಂದ ನನ್ನನ್ನು ಹೊರ ಹಾಕಿದ್ದಾರೆ ಎಂದು ಹೇಳಿದರು.
ಬಿಜೆಪಿಯಲ್ಲಿ ಪಕ್ಷ ಮುಖ್ಯ ವ್ಯಕ್ತಿ ಮುಖ್ಯ ಅಲ್ಲ ಅಂತ ಹೇಳಿಕೊಂಡು ಪಕ್ಷ ಕಟ್ಟಿದ್ಧೇವೆ. ಆದರೆ, ಈಗ ಬಿಜೆಪಿಯಲ್ಲಿ ಪಕ್ಷ ಮುಖ್ಯ ಅಲ್ಲ, ಕೆಲ ವ್ಯಕ್ತಿಗಳು ಮುಖ್ಯವಾಗಿದ್ದಾರೆ. ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿ ಬಿಜೆಪಿ ಇದೆ.
ನಾನು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ನಡ್ಡಾ ರನ್ನ ಟೀಕೆ ಮಾಡಲ್ಲ, ರಾಜ್ಯ ಬಿಜೆಪಿಯಲ್ಲಿ ತಮ್ಮ ಹಿತಸಾಕ್ತಿಗಾಗಿ ಪಕ್ಷಕ್ಕೆ ಕುಂದು ತರ್ತಿದ್ದಾರೆ. ಇದು ಹೈಕಮಾಂಡ್ ನಾಯಕರ ಗಮನಕ್ಕೆ ಬಂದಿಲ್ಲ. ನನಗೆ ಟಿಕೆಟ್ ನೀಡಲ್ಲ ಅಂತ ಮೊದಲೇ ಹೇಳಬೇಕಿತ್ತು ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಲ್ಲ ಅಂತ ಹೇಳಿದ್ದೆ. ಕಳೆದ ಆರು ತಿಂಗಳಿನಿಂದ ಪಕ್ಷದಲ್ಲಿ ನನ್ನನ್ನ ಕಡೆಗಣಿಸುತ್ತಿದ್ದಾರೆ. ಇದೆಲ್ಲವನ್ನ ಗಮನಿಸಿದೇ ನಾನು ಬಿಜೆಪಿಯಲ್ಲಿ ಇರುವುದು ಬೇಡವಾಗಿದೆ. ಯಡಿಯೂರಪ್ಪ ಜೊತೆ ನಾನು ಪಕ್ಷವನ್ನ ಕಟ್ಟಿದ್ದೇನೆ. ಯಡಿಯೂರಪ್ಪ ನಂತರ ನಾನೇ ಹಿರಿಯ. ನಾನು ಹಿರಿಯ ಅದಕ್ಕಾಗಿ ನನ್ನನ್ನ ಪಕ್ಷದಿಂದ ಹೊರ ಹಾಕಿದ್ರು. ಪಕ್ಷದಿಂದ ಹೊರ ಹಾಕಲು ಷಡ್ಯಂತ್ರ ನಡೆಸಿದರು ಎಂದು ಆರೋಪಿಸಿದರು.
ನನ್ನ ಕುಟುಂಬದವರಿಗೆ ಯಾವುದೇ ಅಧಿಕಾರ ಬೇಡ. ನಾನು ಜನರ ಸೇವೆಯನ್ನ ಮಾಡಬೇಕು, ನನಗೆ ಯಾವುದೇ ಅಧಿಕಾರ ಬೇಡ 6 ತಿಂಗಳು ಶಾಸಕನಾದ ನಂತರ ನಾನು ರಾಜೀನಾಮೆ ನೀಡುತ್ತೇನೆ. ಯಡಿಯೂರಪ್ಪ ಬಗ್ಗೆ ನನಗೆ ಗೌರವ ಇದೆ. ಸಮಾಜದ ಹಿರಿಯ ನಾಯಕರಾಗಿ ಕೆಲಸ ಮಾಡಿದ್ದಾರೆ. ನಮ್ಮ ಸಮಾಜದ ಹಿರಿಯ ನಾಯಕರಿಗೂ ಬೇಸರವಾಗಿದೆ ಎಂದರು.












Click it and Unblock the Notifications