ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ : ಜಗದೀಶ್‌ ಶೆಟ್ಟರ್‌ ರಿಯಾಕ್ಷನ್

ಹುಬ್ಬಳ್ಳಿ, ಮೇ 03: ‌ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ದುರ್ದೈವದ ಸಂಗತಿ ಆಗಿದ್ದು, ಸುಹಾಸ್ ಶೆಟ್ಟಿ ಕೊಲೆಯಾದ ನಂತರ ಸಹ ರಾಜ್ಯ ಸರ್ಕಾರದ ಗಂಭೀರವಾಗಿ ಪರಿಗಣಿಸಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಲೆ, ಕೋಮು ಗಲಿಭೆ ಆರಂಭವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ್‌ ಶೆಟ್ಟಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು , ಸುಹಾಸ್ ಶೆಟ್ಟಿ ಕೊಲೆಯೇ ಇದೊಂದು ಉದಾಹರಣೆ ಇಷ್ಟೊಂದು ಘಟನೆ ಆದ ಬಳಿಕ ಸಹ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೆಟ್ಟದ್ದು, ಆಡಳಿತ ವ್ಯವಸ್ಥೆ ಸಹ ಹಾಳಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರ ಸಂಪೂರ್ಣ ವಿಫಲ ಆಗಿದೆ. ಮುಖ್ಯಮಂತ್ರಿ ಸಿದ್ದರಾಮನವರ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಯಾವುದೇ ಮಟ್ಟಕ್ಕೆ ಹೋಗಲು‌ ತಯಾರಿದೆ ಎಂದುಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಸ್ವರೂಪದ ಆರೋಪ ಮಾಡಿದರು.

Jagadish Shettar Response on the Suhas Shetty murder case in Mangalore

ಮುಸ್ಲಿಂ ತುಷ್ಟೀಕರಣ ಹೆಚ್ಚಾದ ಕಾರಣ ಹಾಡುಹಗಲೇ‌ ಕೊಲೆ ಸುಲಿಗೆ ಆರಂಭ ಆಗಿವೆ ಇಂದು ರಾಜ್ಯದಲ್ಲಿ ನಾವು ಏನು ಮಾಡಿದರು ನಡೆಯುತ್ತದೆ ಎಂಬ ನಿರ್ಧಾರ ಮುಸ್ಲಿಂರು ಬಂದಿದ್ದಾರೆ. ಯಾವುದೇ ಭಯದ ವಾತಾವರಣ ರಾಜ್ಯದಲ್ಲಿ ಇಲ್ಲ .‌ಈಗಾಗಲೇ PFI, SFI ಮೇಲಿನ ಕೇಸ್ ವಾಪಸ್ ಪಡೆದುಕೊಂಡಿದ್ದು, ಮಂಗಳೂರು ಬೆಂಗಳೂರು ಶಿವಮೊಗ್ಗ‌ ಮುಂತಾದ ಕಡೆಗಳಲ್ಲಿ ಹಾಕಿದ ಕೇಸ್ ವಾಪಸು ಪಡೆದರು. ಇದರ ಜೊತೆಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಅಟ್ಯಾಕ್ ಪ್ರಕರಣ ಡಿಜೆ ಹಳ್ಳಿ ಕೆಜೆ ಹಳ್ಳಿ, ಮೈಸೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಆದ ಪ್ರಕರಣದ ಕೇಸ್ ವಾಪಸು ಪಡೆಯಲಾಯಿತು.

ಹಳೇ ಹುಬ್ಬಳ್ಳಿಯ ಅಂದಿನ ಪ್ರಕರಣವನ್ನ ಅಂದಿನ ಪೊಲೀಸ್ ಕಮೀಷನರ್ ಕಟ್ಟು ನಿಟ್ಟಿನ ಕ್ರಮ ಕೈಗೊಂಡರುಅಂದಿನ ಪ್ರಕರಣ ವಾಪಸು ಪಡೆಯಲು ಆಗಲ್ಲ. ಕಾನೂನು ಬಾಹಿರವಾಗಿ ವಾಪಾಸು ಪಡೆದರು ಇದನ್ನ‌ ಕ್ಯಾಬಿನೆಟ್ ಗೆ ತೆಗೆದುಕೊಂಡು ಹೋಗಿ ಪ್ರಕರಣ ವಾಪಾಸು ಪಡೆದರು ಇದನ್ನ ನೋಡಿದರೆ ಗೊತ್ತಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಾಚೀಕೆ ಇಲ್ಲ. ಇದೊಂದು ಮಾನ‌ಮಾರ್ಯದೆ ಇಲ್ಲದ ಸರಕಾರ ಆಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಯಾವುದೇ ಮಟ್ಟಕ್ಕೆ ಹೋಗಲು‌ ತಯಾರಿದೆ ಸಿಎಂ ಸಿದ್ಧರಾಮಯ್ಯ ಸರಕಾರ ಎಂದು ಜಗದೀಶ್‌ ಶೆಟ್ಟರ್‌ ಅವರು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ಪಾಕಿಸ್ತಾನ‌ ಮೇಲೆ ಯುದ್ಧ ಬೇಡಾ ಎಂಬ ಹೇಳಿಕೆ ಕೊಟ್ಟಿದ್ದು, ಇದರಿಂದ ಇನ್ನಷ್ಟು ಮುಸ್ಲಿಮರಿಗೆ ಸಪೂರ್ಟ್ ಮಾಡಿದ ಹಾಗೇ ಆಗಿದೆ. ರಾಜ್ಯ ಸರ್ಕಾರದ ನಡಾವಳಿಗಳು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇನ್ನು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ ಕೇಂದ್ರ ತನಿಖಾದಳಕ್ಕೆ ತನಿಖೆಗೆ ಕೊಡಬೇಕು. ಅಂದಾಗ ಮಾತ್ರ ಹಿಂದು ಕುಟುಂಬಕ್ಕೆ ಹಾಗೂ ಶೆಟ್ಟಿ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯ. ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್ ಇದ್ದಾನೆ ಅಂದರೆ ಕೊಲೆ ಮಾಡಬಹುದು. ಅಂತಹ ರೌಡಿ ಶೀಟರ್ ಗೆ ರಕ್ಷಣೆ ಬೇಡ್ವಾ? ಹಾಗಾದರೆ ರಾಜ್ಯದಲ್ಲಿ ಸಾಕಷ್ಟು ಜ‌ನ ರೌಡಿ ಶೀಟರ್ ಇದ್ದಾರೆ ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಿ ನರೇಂದ್ರ ಮೋದಿ ಅವರು ಪಿಎಂ ಆಗುವ ತನಕ 370 ಕಲಂ ತೆಗೆದು ಹಾಕಲಿಲ್ಲ ಈಗ ಇಂದಿರಾ ಗಾಂಧಿ, ಜವಾಹರಲಾಲ್ ನೆಹರು, ರಾಜೀವ ಗಾಂಧಿ ಕಾಲದಲ್ಲಿ ಯಾಕೆ ಆಗಲಿಲ್ಲ‌.ಈಗ ಏನು ಒಂದು ಅನಿರೀಕ್ಷಿತ ಘಟನೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದಕ್ಕೆ ನ್ಯಾಯ ಕೊಡಿಸಲಾಗುವುದು ಅಂತ ಪ್ರತಿಯೊಂದು ಹಂತದಲ್ಲಿ ಟೀಕೆ ಸರಿಯಲ್ಲ‌‌‌‌ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+