ಬಿಜೆಪಿ ರಿಪೇರಿ ಮಾಡದಷ್ಟು ಅಧೋಗತಿ ತಲುಪಿದೆ: ಜಗದೀಶ್ ಶೆಟ್ಟರ್ ಹೀಗೆ ಹೇಳಿದ್ದೇಕೆ?
ಹುಬ್ಬಳ್ಳಿ, ನವೆಂಬರ್ 26: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನ ಆಯ್ಕೆ ಬಳಿಕ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಬಿಜೆಪಿಯಲ್ಲಿ ಇನ್ನಷ್ಟು ಅಸಮಾಧಾನ ಬುಗಲೇಳುತ್ತದೆ ಬಿಜೆಪಿಯಲ್ಲಿ ಯಾವುದೇ ಶಿಸ್ತು ಉಳಿದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಶೆಟ್ಟರ್, ಬಿಜೆಪಿ ನಾಯಕರು ದೆಹಲಿ ತನಕ ದೂರು ನೀಡಲು ಸಜ್ಜಾಗಿದ್ದಾರೆ ಅಂದರೆ ಏನು ಅರ್ಥ. ರಾಜ್ಯ ಬಿಜೆಪಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡುವಾಗ ಇಷ್ಟೊಂದು ಅಪಸ್ವರ ಬರಬಾರದು, ಬಿಜೆಪಿ ಯಲ್ಲಿ ರಿಪೇರಿ ಮಾಡದಷ್ಡು ಅಧೋಗತಿಗೆ ಹೋಗಿದೆ ಎಂದು ವ್ಯಂಗ್ಯವಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ ಅವರ ಹೇಳಿಕೆ ಕೇಳಿದ್ದೇನೆ. ಈ ಹಿಂದೆ ನನಗೆ (ಶೆಟ್ಟರ್), ಲಕ್ಷ್ಮಣ್ ಸವದಿಗೆ ಅನ್ಯಾಯವಾದಾಗ ಪಕ್ಷದಿಂದ ಹೊರ ಬರಬೇಕಾಯಿತು. ಇನ್ನೂ ಅರವಿಂದ ಲಿಂಬಾವಳಿಗೆ ಟಿಕೆಟ್ ಕೊಡುವ ಬದಲು ಅವರ ಧರ್ಮಪತ್ನಿಗೆ ಟಿಕೆಟ್ ಕೊಟ್ಟರು. ಹೀಗೆ ಮಾಡಿದ್ದು ಯಾಕೆ? ಬಿಜೆಪಿಯೊಳಗೆ ಏನು ನಡೆಯುತ್ತಿದೆ ಎಂಬುದು ಗೊತ್ತಾಗಲಿಲ್ಲ ಎಂದು ಹೇಳಿದರು.
ಪಂಚ ಚುನಾವಣೆ ಬಳಿಕ ಸಿದ್ಧತೆ?
ಸದ್ಯ ಕಾಂಗ್ರೆಸ್ ಉತ್ತಮವಾದ ಆಡಳಿತ ನೀಡತ್ತಿದೆ. ಐದು ವರ್ಷಗಳ ಕಾಲ ಒಳ್ಳೆಯ ಕೆಲಸ ಮಾಡಲಿದೆ. ಇದೇ ಡಿಸೆಂಬರ್ 03ರಂದು ತೆಲಂಗಾಣ, ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ್ ಮತ್ತು ಮಧ್ಯಪ್ರದೇಶ ಸೇರಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬೀಳಲಿದೆ.
ಈ ಚುನಾವಣೆ ಫಲಿತಾಂಶ ಬಂದ ನಂತರ ಲೋಕಸಭಾ ಚುನಾವಣಾ ತಯಾರಿ ನಡೆಸುವ ಸಾಧ್ಯತೆ ಇದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ವಿಜೇಯಂದ್ರ ಮಠ ಮಾನ್ಯಗಳಿಗೆ ಭೇಟಿ ವಿಚಾರಕ್ಕೆ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು ಕಿಡಿ ಕಾರಿದರು.

ವಿಜಯೇಂದ್ರ ಮಠ ಭೇಟಿಗೆ ಶೆಟ್ಟರ್ ಲೇವಡಿ
ಇದೊಂದು ಪಧ್ಧತಿ ಬಂದು ಬಿಟ್ಟಿದೆ. ಯಾರು ಒಬ್ಬರು ಜವಾಬ್ದಾರಿ ತೆಗೆದುಕೊಂಡ ನಂತರ ಮಠ ಮಾನ್ಯಗಳಿಗೆ ಭೇಟಿ ಕೊಡುವುದು. ಭೇಟಿ ಕೊಟ್ಟ ಬಳಿಕ ಅವರು ಎಲ್ಲಿ ಇರುತ್ತಾರೆ? ಸ್ವಾಮಿಗಳು ಮಠಗಳು ಎಲ್ಲಿ ಇರುತ್ತವೆ?, ಮಠಗಳ ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂಬುದನ್ನು ತಿಳಿಸಲಿ. ಮಠಗಳಿಗೆ ಹೋಗಿ ಸ್ವಾಮೀಜಿಗೆ ಕಾಲು ಮುಗಿದು ಬಂದರೆ ಏನು ಆಗುವುದಿಲ್ಲ ಎಂದು ವಿಜಯೇಂದ್ರ ಮಠಗಳ ಭೇಟಿ ಕುರಿತು ಶೆಟ್ಟರ್ ಲೇವಡಿ ಮಾಡಿದರು.
ಇದೇ ವೇಳೆ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಚಿಕ್ಕನಗೌಡರ ವಿಜೇಯಂದ್ರ ಭೇಟಿ ಮಾಡಿದ್ದಾರೆ. ವೆಟ್ ಆಂಡ್ ಸೀ. ಸ್ವಲ್ಪ ಸ್ಟಾಫ್ ಗ್ಯಾಪ್ ಇರುತ್ತದೆ ಯಾವಾಗ ಏನು ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅವರು ಹೊಸದಾಗಿ ವಿಜೇಯಂದ್ರ ಅಧ್ಯಕ್ಷರು ಆಗಿದ್ದಾರೆ. ಏನೋ ಸರ್ಕಸ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನೇರ ಬೇರೆ ಪಕ್ಷದ ಶಾಸಕರು, ನಾಯಕರ ಸೇರ್ಪಡೆ ಮುಂದುವರೆಯಲಿದೆ ಎಂದು ತಿಳಿಸಿದರು
ಸ್ಥಳೀಯವಾಗಿ ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಒಪ್ಪಿಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಚಿಕ್ಕನಗೌಡರ ಕಾಂಗ್ರೆಸ್ ಸೇರ್ಪಡೆ ಕುರಿತು ನಾನೇ ಮಾತಾಡಿದ್ದೇನೆ. ಸ್ಥಳೀಯವಾಗಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಕಾಂಗ್ರೆಸ್ ಸೇರ್ಪಡೆ ಮಾಡಿಕೊಳ್ಳುವವರ ಕುರಿತು ನಾನೇ ಕೆಪಿಸಿಸಿ ಅಧ್ಯಕ್ಷರು, ಸಿಎಂ ಹಾಗೂ ಹೈಕಮಾಂಡ್ ನಾಯಕರ ಗಮನಕ್ಕೆ ತರುತ್ತಿದ್ದೇನೆ ಎಂದರು.












Click it and Unblock the Notifications