Darshan Thoogudeepa: ಬಳ್ಳಾರಿ ಜೈಲಲ್ಲೇ ದರ್ಶನ್‌ಗೆ ಮತ್ತೆ ತಲೆಬಿಸಿ: ಐಟಿ ಅಧಿಕಾರಿಗಳ ಡ್ರಿಲ್‌ಗೆ 'ದಾಸ' ಸುಸ್ತೋ ಸುಸ್ತು
ಬೆಂಗಳೂರು, ಸೆಪ್ಟಂಬರ್ 26: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಸಂಕಷ್ಟಗಳು ಒಂದೊಂದಾಗೆ ಬೆನ್ನು ಬೀಳುತ್ತಿವೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ದಾಸನ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ಮತ್ತೊಂದು ತಲೆ ಬಿಸಿ ಶುರುವಾಗಿದೆ. ಆಪ್ತರ ಭೇಟಿಗೆ ನಗುಮೊಗದಲ್ಲೇ ಬರುವ ಮೂಲಕ ಯಾವುದೇ ಒತ್ತಡದಲ್ಲಿ ಇಲ್ಲ. ಆರಾಮಾಗಿ ಇದ್ದೇನೆ ಎಂಬಂತೆ ದರ್ಶನ್ ತೋರಿಸಿಕೊಳ್ಳುತ್ತಿದ್ದಾರೆ.
ಹೌದು, ಮುಖದಲ್ಲಿ ನಗು ಇದ್ದರೂ ಸಹಿತ ಜಾಮೀನು ಸಿಗದ ಆತಂಕ ನಟ ದರ್ಶನ್‌ಗೆ ಕಾಡುತ್ತಿದೆ. ಈ ಮಧ್ಯೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಜೈಲಿನಲ್ಲಿಯೇ ವಿಚಾರಣೆ ಆರಂಭಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಬಳಿಕ ಪತ್ತೆಯಾದ ಅಪಾರ ಪ್ರಮಾಣದ ನಗದು, ಚಿನ್ನಾಭರಣ ಕುರಿತು ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ಗುರುವಾರ ಐಟಿ ಅಧಿಕಾರಿಗಳು ಜೈಲಿನಲ್ಲೇ ದರ್ಶನ್ ವಿಚಾರಣೆ ನಡೆಸಿದ್ದಾರೆ. ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಐಡಿ ಡ್ರಿಲ್‌ಗೆ ದಾಸ ದರ್ಶನ್ ಸುಸ್ತಾಗಿದ್ದಾರೆ.
ಜಪ್ತಿಯಾದ 85 ಲಕ್ಷ ರೂ. ಎಲ್ಲಿಂದ ಬಂತು?
ರೇಣುಕಾಸ್ವಾಮಿ ಸಾವಿನ ಬಳಿಕ ಶವ ಸಾಗಿಸಲು, ಪೊಲೀಸರ ಮುಂದೆ ಸರೆಂಡರ್ ಆಗಲು ಹಣವನ್ನು ಸಜ್ಜುಗೊಳಿಸಲಾಗಿತ್ತು. ಇದು ಸಾಕ್ಷ್ಯ ನಾಶ ಎಂಬ ಅರಿವಿದ್ದರೂ ಡಿ.ಗ್ಯಾಂಗ್ ಪ್ಲಾನ್ ಮಾಡಿಕೊಂಡು 30 ಲಕ್ಷ ರೂಪಾಯಿ ಹಣ ಹೊಂದಿಸಿದ್ದರು. ಅದರಲ್ಲಿ ತಲಾ ಐದು ಲಕ್ಷ ಮೂವರಿಗೆ ನೀಡಿ ಸರೆಂಡರ್ ಆಗುವಂತೆ ಹೇಲಾಗಿತ್ತು. ಈ ಹಣದ ಮೂಲದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ದಾಸನ ವಿಚಾರಣೆಗೆ ಐಟಿ ಅಧಿಕಾರಿಗಳಿಗೆ ಅನುಮತಿ
ರೇನುಕಾಸ್ವಾಮಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಸ್ಥಳ ಮಹಜರು ನಡೆಸಿದರು. ಈ ವೇಳೆ ಕಂತೆ ಕಂತೆ ಲಕ್ಷಾಂತರ ರೂಪಾಯಿ ಹಣ ಜಪ್ತಿ ಮಾಡಿದ್ದರು. ಮೂಲಗಳ ಪ್ರಕಾರ ಒಟ್ಟು ಸುಮಾರು 85 ಲಕ್ಷ ರೂಪಾಯಿ ಹಣ ಪತ್ತೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆ ಅಧಿಕಾರಿಗಳು ದರ್ಶನ್ ಮೇಲೆ ಪ್ರಕರಣ ದಾಖಲಿಸಿ, ಜೈಲಿನಲ್ಲಿ ವಿಚಾರಣೆಗೆ ಕೋರ್ಟ್‌ನಿಂದ ಅನುಮತಿ ಪಡೆದುಕೊಂಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ ನಟ ದರ್ಶನ್ ಅನ್ನು ಬಳ್ಳಾರಿ ಜೈಲಿನಲ್ಲಿಯೇ ದೊರೆತ ಹಣ, ಚಿನ್ನಾಭರಣ ಎಲ್ಲಿಂದ ಬಂತು?, ಇಷ್ಟೊಂದು ಹಣ ಅಷ್ಟು ಕಡಿಮೆ ಸಮಯದಲ್ಲಿ ಕೊಟ್ಟವರು ಯಾರು?, ಹಣಕ್ಕೆ ಪೂರಕ ದಾಖಲೆ ಎಲ್ಲವನ್ನು ಕೇಳಿದ್ದಾರೆ. ಎಲ್ಲದ್ದನ್ನು ದರ್ಶನ್ ಸಮಾಧಾನದಿಂದ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ ಐಟಿ ವಿಚಾರಣೆ ನಿರಂತರ?
ಆದರೆ ಮೇಲ್ನೋಟಕ್ಕೆ ಈ ಐಟಿ ಪ್ರಕರಣ ಒಂದೇ ವಿಚಾರಣೆಗೆ ಮುಗಿಯುವಂತೆ ಕಾಣುತ್ತಿಲ್ಲ. ಬದಲಾಗಿ ಇನ್ನೂ ಕೆಲವು ದಿನಗಳ ಕಾಲ ಐಟಿ ಅಧಿಕಾರಿಗಳು ನಿರಂತರವಾಗಿ ಜೈಲಿನಲ್ಲೇ ನಟ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸೆ.27ರಂದು ಜಾಮೀನು ಅರ್ಜಿ ವಿಚಾರಣೆ
ಸದ್ಯ ನಟ ದರ್ಶನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಪ್ರಕರಣದ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನಟಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದೆ. ಸರ್ಕಾರಿ ವಕೀಲರು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೇಳಿದ್ದಾರೆ.
ನಾಳೆ ಶುಕ್ರವಾರ ಸೆಪ್ಟಂಬರ್ 27ರಂದು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಬಾರಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇದರ ಬೆನ್ನಲ್ಲೆ ಐವರು ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications