{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/isro-chairman-a-s-kiran-kumars-brief-profile-091019.html" }, "headline": "ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ ", "url":"http://kannada.oneindia.com/news/karnataka/isro-chairman-a-s-kiran-kumars-brief-profile-091019.html", "image": { "@type": "ImageObject", "url": "http://kannada.oneindia.com/img/1200x60x675/2015/01/20-1421742655-kirankumar.jpg", "width": "1200", "height":"675" }, "thumbnailUrl":"http://kannada.oneindia.com/img/128x50/2015/01/20-1421742655-kirankumar.jpg", "datePublished": "2015-01-20T13:57:40+05:30", "dateModified": "2015-01-20T14:01:23+05:30", "author": { "@type": "Person", "url": "https://kannada.oneindia.com/authors/madhusoodhan.html", "name": "Madhusoodhan" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Karnataka", "description": "Bengaluru: Space scientist Kiran Kumar, the current chairman of the Indian Space Research Organisation having assumed office on 12 January 2015.", "keywords": "ISRO chairman A.S.Kiran Kumar brief profile, ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ ", "articleBody":"ಬೆಂಗಳೂರು, ಜ. 20: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಹುದ್ದೆ ನಿಭಾಯಿಸುತ್ತಿರುವ ಡಾ. ಎ.ಎಸ್.ಕಿರಣ್& zwnj ಕುಮಾರ್& zwnj ಈ ಹುದ್ದೆ ನಿರ್ವಹಿಸುತ್ತಿರುವ ಎರಡನೇ ಕನ್ನಡಿಗ.ಅಲಹಾಬಾದ್ ನಲ್ಲಿ 1975 ರಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡ ಕಿರಣ್ ಕುಮಾರ್ ಜನವರಿ 12, 2015 ರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ. ಅವರ ನಿರಂತರ ಶ್ರಮ ಮತ್ತು ಸಂಸ್ಥೆಯ ವಿವಿಧ ವಿಭಾಗದಲ್ಲಿ ಮಾಡಿದ ಕೆಲಸ ಇಸ್ರೋ ಅಧ್ಯಕ್ಷ ಸ್ಥಾನದವರೆಗೆ ಬಂದು ನಿಲ್ಲಿಸಿದೆ.ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಇಸ್ರೋ ಅಧ್ಯಕ್ಷ1975ರಲ್ಲಿ ಇಸ್ರೋಗೆ ಸೇರಿದ ಕಿರಣ್ ಕುಮಾರ್, ಅಂದಿನಿಂದಲೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಮಂಗಳಯಾನ ಯೋಜನೆ ಯಶಸ್ಸಿನಲ್ಲೂ ಅವರ ಪಾತ್ರವಿದೆ.ಹುಟ್ಟು-ವಿದ್ಯಾಭ್ಯಾಸಎ.ಎಸ್. ಕಿರಣ್ ಕುಮಾರ್ ಹಾಸನ ಜಿಲ್ಲೆಯವರು. ಆಲೂರಿನಲ್ಲಿ 1952ರಲ್ಲಿ ಜನಿಸಿದ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್& zwnj ಸಿ ಪದವಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್& zwnj ಸಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.ಮಂಗಳನಿಗೆ ಮತ್ತೊಂದು ಮಾಮ್ ಸಿಗಲಿದ್ದಾಳೆವಿಜ್ಞಾನಕ್ಕೆ ಕೊಡುಗೆಭಾಸ್ಕರ ಟಿವಿ ಪೇಲೋಡ್ ನಿಂದ ತಮ್ಮ ಕೆಲಸ ಆರಂಭಿಸಿದ ಕಿರಣ್ ಕುಮಾರ್, ಭಾರತದ ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದಲ್ಲಿ ಭಾಗವಹಿಸಿದ್ದಾರೆ. ಭಾರತದ ಮೊಟ್ಟ ಮೊದಲ ದೂರ ಸಂವೇದಿ ಉಪಗ್ರಹ ಭಾಸ್ಕರ(1979)ದ ಯಶಸ್ಸಿನಲ್ಲೂ ಕುಮಾರ್ ಕೊಡುಗೆ ನೀಡಿದ್ದಾರೆ. ಭೂಮಿ ಮತ್ತು ಸಮದ್ರದ ನಡುವಿನ ನಕ್ಷೆ ಮತ್ತು ಇದನ್ನು ಬಣ್ಣಗಳ ಆಧಾರ ಇಟ್ಟುಕೊಂಡು ಗುರುತು ಹಾಕುವುದರಲ್ಲಿ ಕುಮಾರ್ ನೈಪುಣ್ಯ ಸಾಧಿಸಿದ್ದು ದೇಶದ ನೆರವಿಗೆ ಬಂದಿತು.ಇದಲ್ಲದೇ ಇನ್ಸಾಟ್ 3ಡಿ, ಮೈಕ್ರೋ ಸೆಟ್ ಲೈಟ್, ಭೂ ಪ್ರದೇಶ ಮಾಪನಾ ಕ್ಯಾಮರಾ ತಂತ್ರಜ್ಞಾನದಲ್ಲಿ ಕಿರಣ್ ಕುಮಾರ್ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಮಂಗಳಯಾನಕ್ಕೆ ಸಂಬಂಧಿಸಿದ ಐದು ಉಪಕರಣ ತಯಾರಿಕೆಯ ಮೇಲ್ವಿಚಾರಣೆಯನ್ನು ಕಿರಣ್ ಕುಮಾರ್ ಹೊತ್ತುಕೊಂಡಿದ್ದರು.ಕನ್ನಡದ ಆಚಾರ್ಯ ಅನಂತಮೂರ್ತಿ ವ್ಯಕ್ತಿಚಿತ್ರಪ್ರಶಸ್ತಿ-ಪುರಸ್ಕಾರಗಳುವಿಜ್ಞಾನ ವಿಭಾಗದಲ್ಲಿ ಸಲ್ಲಿಸಿದ ಸೇವೆಗೆ ಕಿರಣ್ ಕುಮಾರ್ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂಡಿಯನ್ ಸೊಸೈಟಿಯ ರಿಮೋಟ್ ಸೆಸ್ಸಿಂಗ್ ಪ್ರಶಸ್ತಿ(1994), ವಾಸ್ವಿಕ್ ಪ್ರಶಸ್ತಿ(1998), ಭಾಸ್ಕರ ಪ್ರಶಸ್ತಿ (2001), ಇಸ್ರೋದಿಂದ ಉತ್ತಮ ಸೇವಾ ಪ್ರಶಸ್ತಿ(2006), ಅಂತಾರಾಷ್ಟ್ರೀಯ ಗಗನ ಯಾನ ಸಂಸ್ಥೆಯಿಂದ ಉತ್ತಮ ಸಾಧಕ ಪ್ರಶಸ್ತಿ(2008) ಸೇರಿದಂತೆ ಅನೇಕ ಪುರಸ್ಕಾರಗಳನ್ನು ಕಿರಣ್ ಕುಮಾರ್ ಪಡೆದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋ ಅಧ್ಯಕ್ಷ ಕನ್ನಡಿಗ ಕಿರಣ್ ಕುಮಾರ್ ವ್ಯಕ್ತಿಚಿತ್ರ

|
Google Oneindia Kannada News

ಬೆಂಗಳೂರು, ಜ. 20: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಹುದ್ದೆ ನಿಭಾಯಿಸುತ್ತಿರುವ ಡಾ. ಎ.ಎಸ್.ಕಿರಣ್‌ ಕುಮಾರ್‌ ಈ ಹುದ್ದೆ ನಿರ್ವಹಿಸುತ್ತಿರುವ ಎರಡನೇ ಕನ್ನಡಿಗ.

ಅಲಹಾಬಾದ್ ನಲ್ಲಿ 1975 ರಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡ ಕಿರಣ್ ಕುಮಾರ್ ಜನವರಿ 12, 2015 ರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿದ್ದಾರೆ. ಅವರ ನಿರಂತರ ಶ್ರಮ ಮತ್ತು ಸಂಸ್ಥೆಯ ವಿವಿಧ ವಿಭಾಗದಲ್ಲಿ ಮಾಡಿದ ಕೆಲಸ ಇಸ್ರೋ ಅಧ್ಯಕ್ಷ ಸ್ಥಾನದವರೆಗೆ ಬಂದು ನಿಲ್ಲಿಸಿದೆ.[ಕನ್ನಡಿಗ ಎ.ಎಸ್.ಕಿರಣ್ ಕುಮಾರ್ ಇಸ್ರೋ ಅಧ್ಯಕ್ಷ]

isro

1975ರಲ್ಲಿ ಇಸ್ರೋಗೆ ಸೇರಿದ ಕಿರಣ್ ಕುಮಾರ್, ಅಂದಿನಿಂದಲೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿನ ಮಂಗಳಯಾನ ಯೋಜನೆ ಯಶಸ್ಸಿನಲ್ಲೂ ಅವರ ಪಾತ್ರವಿದೆ.

ಹುಟ್ಟು-ವಿದ್ಯಾಭ್ಯಾಸ
ಎ.ಎಸ್. ಕಿರಣ್ ಕುಮಾರ್ ಹಾಸನ ಜಿಲ್ಲೆಯವರು. ಆಲೂರಿನಲ್ಲಿ 1952ರಲ್ಲಿ ಜನಿಸಿದ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂಎಸ್‌ಸಿ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ಪದವಿ ಪಡೆದಿದ್ದಾರೆ.[ಮಂಗಳನಿಗೆ ಮತ್ತೊಂದು 'ಮಾಮ್ ' ಸಿಗಲಿದ್ದಾಳೆ]

ವಿಜ್ಞಾನಕ್ಕೆ ಕೊಡುಗೆ
ಭಾಸ್ಕರ ಟಿವಿ ಪೇಲೋಡ್ ನಿಂದ ತಮ್ಮ ಕೆಲಸ ಆರಂಭಿಸಿದ ಕಿರಣ್ ಕುಮಾರ್, ಭಾರತದ ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದಲ್ಲಿ ಭಾಗವಹಿಸಿದ್ದಾರೆ. ಭಾರತದ ಮೊಟ್ಟ ಮೊದಲ ದೂರ ಸಂವೇದಿ ಉಪಗ್ರಹ ಭಾಸ್ಕರ(1979)ದ ಯಶಸ್ಸಿನಲ್ಲೂ ಕುಮಾರ್ ಕೊಡುಗೆ ನೀಡಿದ್ದಾರೆ. ಭೂಮಿ ಮತ್ತು ಸಮದ್ರದ ನಡುವಿನ ನಕ್ಷೆ ಮತ್ತು ಇದನ್ನು ಬಣ್ಣಗಳ ಆಧಾರ ಇಟ್ಟುಕೊಂಡು ಗುರುತು ಹಾಕುವುದರಲ್ಲಿ ಕುಮಾರ್ ನೈಪುಣ್ಯ ಸಾಧಿಸಿದ್ದು ದೇಶದ ನೆರವಿಗೆ ಬಂದಿತು.

ಇದಲ್ಲದೇ ಇನ್ಸಾಟ್ 3ಡಿ, ಮೈಕ್ರೋ ಸೆಟ್ ಲೈಟ್, ಭೂ ಪ್ರದೇಶ ಮಾಪನಾ ಕ್ಯಾಮರಾ ತಂತ್ರಜ್ಞಾನದಲ್ಲಿ ಕಿರಣ್ ಕುಮಾರ್ ಅನೇಕ ಆವಿಷ್ಕಾರಗಳನ್ನು ಮಾಡಿದ್ದಾರೆ. ಮಂಗಳಯಾನಕ್ಕೆ ಸಂಬಂಧಿಸಿದ ಐದು ಉಪಕರಣ ತಯಾರಿಕೆಯ ಮೇಲ್ವಿಚಾರಣೆಯನ್ನು ಕಿರಣ್ ಕುಮಾರ್ ಹೊತ್ತುಕೊಂಡಿದ್ದರು.[ಕನ್ನಡದ 'ಆಚಾರ್ಯ' ಅನಂತಮೂರ್ತಿ ವ್ಯಕ್ತಿಚಿತ್ರ]

ಪ್ರಶಸ್ತಿ-ಪುರಸ್ಕಾರಗಳು
ವಿಜ್ಞಾನ ವಿಭಾಗದಲ್ಲಿ ಸಲ್ಲಿಸಿದ ಸೇವೆಗೆ ಕಿರಣ್ ಕುಮಾರ್ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಂಡಿಯನ್ ಸೊಸೈಟಿಯ ರಿಮೋಟ್ ಸೆಸ್ಸಿಂಗ್ ಪ್ರಶಸ್ತಿ(1994), ವಾಸ್ವಿಕ್ ಪ್ರಶಸ್ತಿ(1998), ಭಾಸ್ಕರ ಪ್ರಶಸ್ತಿ (2001), ಇಸ್ರೋದಿಂದ ಉತ್ತಮ ಸೇವಾ ಪ್ರಶಸ್ತಿ(2006), ಅಂತಾರಾಷ್ಟ್ರೀಯ ಗಗನ ಯಾನ ಸಂಸ್ಥೆಯಿಂದ ಉತ್ತಮ ಸಾಧಕ ಪ್ರಶಸ್ತಿ(2008) ಸೇರಿದಂತೆ ಅನೇಕ ಪುರಸ್ಕಾರಗಳನ್ನು ಕಿರಣ್ ಕುಮಾರ್ ಪಡೆದಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರವನ್ನು ನೀಡಿ ಗೌರವಿಸಿದೆ.

English summary
Bengaluru: Space scientist Kiran Kumar, the current chairman of the Indian Space Research Organisation having assumed office on 12 January 2015. He is credited with the development of key scientific instruments aboard the Chandrayaan-1 andMangalyaan space crafts. In 2014, he was awarded the Padma Shri, India's fourth highest civilian award. Here is ISRO chairman Kiran Kumar brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X