ಬಿಜಾಪುರದ ಅಬ್ದುಲ್ ಐಎಸ್‌ಐಎಸ್ ಸೇರಿಲ್ಲ, ಸೌದಿಯಲ್ಲಿದ್ದಾನೆ
ಬಿಜಾಪುರ, ಡಿಸೆಂಬರ್ 02 : ಐಎಸ್‌ಐಎಸ್ ಉಗ್ರ ಸಂಘಟನೆ ಸೇರಿದ್ದ ಕರ್ನಾಟಕ ಮೂಲದ ಅಬ್ದುಲ್ ಖುದ್ದೂಸ್ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿತ್ತು. ಪೊಲೀಸರು ಖುದ್ದೂಸ್ ಮನೆಗೆ ಭೇಟಿ ನೀಡಿದಾಗ ಆತ ಬದುಕಿರುವ ಮತ್ತು ಸೌದಿ ಅರೆಬೀಯಾದಲ್ಲಿ ಕೆಲಸ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ.
ಕರ್ನಾಟಕ ಮೂಲದ ಫಯಾಜ್ ಮೊಹಮದ್, ಅಬ್ದುಲ್ ಖುದ್ದೂಸ್ ಮತ್ತು ಉಮರ್ ಸುಭಾನ್ ಎಂಬುವವರು ಐಎಸ್ಐಎಸ್ ಸೇರಿದ್ದಾರೆ. ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿತ್ತು. ಬಿಜಾಪುರದ ಖುದ್ದೂಸ್ ಹೆಸರನ್ನು ಮೃತಪಟ್ಟವರ ಪಟ್ಟಿಗೆ ಸೇರಿಸಲಾಗಿತ್ತು. [ISIS ಸೇರಿದ್ದ ಮೂವರ ಸಾವು?]

ಈ ಪಟ್ಟಿ ಹಿಡಿದು ಪೊಲೀಸರು ಅಬ್ದುಲ್ ಖುದ್ದೂಸ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡಲು ಮುಂದಾಗಿದ್ದಾರೆ. ಆಗ ಖುದ್ದೂಸ್ ಕುಟುಂಬದವರು ಆತ ಬದುಕಿದ್ದಾನೆ ಸೌದಿ ಅರೇಬಿಯಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. [ಐಸಿಸ್ ಸರ್ವನಾಶಕ್ಕೆ ಪಣತೊಟ್ಟ ವೀರ ಯೋಧ ಅಬು]
ಪೊಲೀಸರು ಖುದ್ದೂಸ್‌ಗೆ ಕರೆ ಮಾಡುವಂತೆ ಕುಟುಂಬದವರಿಗೆ ಸೂಚನೆ ನೀಡಿದ್ದಾರೆ. ಅವರು ಕರೆ ಮಾಡಿದಾಗ ವಿಡಿಯೋ ಚಾಟ್ ಮೂಲಕ ಆತ ಪೊಲೀಸರ ಸಮ್ಮುಖದಲ್ಲಿಯೇ ಕುಟುಂಬದವರ ಜೊತೆ ಮಾತುಕತೆ ನಡೆಸಿದ್ದಾನೆ. ಈ ಬೆಳವಣಿಗೆ ಬಗ್ಗೆ ತಕ್ಷಣ ಪೊಲೀಸರು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. [ಉಗ್ರರಿಗೆ ತಿರುಗೇಟು, ಕರ್ನಾಟಕ ಮಸೀದಿಗಳು ಗ್ರೇಟು]
ಭಾರತದಿಂದ ಸಿರಿಯಾಕ್ಕೆ ತೆರಳಿ ಐಎಸ್‌ಐಎಸ್ ಸೇರಿರಬಹುದು ಎಂದು ತಯಾರಿಸಿರುವ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಸಿದ್ಧಪಡಿಸಿರುವ ಪಟ್ಟಿಯ ಪ್ರಕಾರ ಕರ್ನಾಟಕ 6 ಜನರು ಐಎಸ್ಐಎಸ್ ಸಂಘಟನೆ ಸೇರಿದ್ದಾರೆ ಎಂದು ಶಂಕಿಸಲಾಗಿದೆ.
ಅಬ್ದುಲ್ ಖುದ್ದೂಸ್ ಸೇರಿದಂತೆ ಮೂವರು ಯುದ್ಧದ ಸಂದರ್ಭದಲ್ಲಿ ಸಿರಿಯಾದಲ್ಲಿ ಮೃತಪಟ್ಟಿದ್ದರು ಎಂದು ಪಟ್ಟಿ ಮಾಡಲಾಗಿತ್ತು. ಆದರೆ, ಈಗ ಖುದ್ದೂಸ್ ಜೀವಂತವಾಗಿರುವುದು ಖಚಿತವಾದ ಕಾರಣ, ಆತನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
-
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications