ದಿ. ಡಾ.ಕೆ.ಮಧುಕರಶೆಟ್ಟಿ ಸಾವಿಗೆ ನ್ಯಾಯಕೋರಿ ಅವರ ಪತ್ನಿ ಗ್ರಾಹಕ ನ್ಯಾಯಾಲಯದ ಮೊರೆ!
ಬೆಂಗಳೂರು ಡಿ. 21: ದಿವಂಗತ ಕೆ. ಮಧುಕರಶೆಟ್ಟಿ ಅವರ ಸಾವಿನ ಸತ್ಯವನ್ನು ಬಯಲಿಗೆ ಎಳೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ. ದಕ್ಷ ಐಪಿಎಸ್ ಅಧಿಕಾರಿ ಮಧುಕರಶೆಟ್ಟಿ ಅವರ ಸಾವಿನ ಸತ್ಯದ ಬಗ್ಗೆ ನ್ಯಾಯ ಕೋರಿ ಅವರ ಪತ್ನಿ ಸುವರ್ಣ ಅವರು ದೆಹಲಿಯಲ್ಲಿ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.
ದಿವಂಗತ ಡಾ. ಕೆ. ಮಧುಕರಶೆಟ್ಟಿ ಅವರ ಸಾವಿಗೆ ನ್ಯಾಯ ಕೊಡಿಸುವಲ್ಲಿ ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ಅಡ್ಡಗೋಡೆ ಮೇಲೆ ದೀಪ ಇಟ್ಟು ಕೈತೊಳೆದುಕೊಂಡಿತು. ನ್ಯಾಯಾಂಗ ತನಿಖೆ ಮಾತುಗಳನ್ನಾಡಿದ್ದ ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡಿತು. ಈ ಮೂಲಕ ಒಬ್ಬ ನಿಷ್ಠಾವಂತ ಅಧಿಕಾರಿಯ ಸಾವಿನ ಸತ್ಯವನ್ನು ಸಮಾಜದ ಮುಂದೆ ಇಡದೇ ಮಣ್ಣು ಮಾಡಿತು. ಆದರೆ, ತನ್ನ ಗಂಡನ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ. ಸುಮಾರು 30 ಗಂಟೆಗಳ ಕಾಲ ಎಚ್1 ಎನ್ 1 ಗೆ ಚಿಕಿತ್ಸೆ ನೀಡಿದ್ದಾರೆ. ನೈಜ ಕಾರಣ ಪತ್ತೆ ಮಾಡಿ ಹೈದರಾಬಾದ್ ನ ಕಾಂಟಿನೆಂಟಲ್ ಆಸ್ಪತ್ರೆ ವೈದ್ಯರು ವಿಫಲರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸಿ ಎಂದು ಕೋರಿ ಮಧುಕರಶೆಟ್ಟಿ ಅವರ ಪತ್ನಿ ಸುವರ್ಣ ಅವರು ಗ್ರಾಹಕ ವೇದಿಕೆ ನ್ಯಾಯಾಲಯದ ಮೊರೆ ಹೋಗಿರುವ ಸಂಗತಿ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು 'ಒನ್ ಇಂಡಿಯಾ ಕನ್ನಡ'ಕ್ಕೆ ಖಚಿತಪಡಿಸಿದ್ದಾರೆ.
ಕರ್ನಾಟಕ ಕಂಡ ನಿಷ್ಠಾವಂತ ಪೊಲೀಸ್ ಅಧಿಕಾರಿಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವರು ಡಾ. ಕೆ. ಮಧುಕರಶೆಟ್ಟಿ. ನಮ್ಮನ್ನು ಅಗಲಿ ಇದೇ ಡಿಸೆಂಬರ್ 28 ಕ್ಕೆ ಮೂರು ವರ್ಷಗಳು ಕಳೆಯುತ್ತವೆ. ಮೂರು ವರ್ಷವಾದರೂ ಮಧುಕರಶೆಟ್ಟಿಯಂತಹ ಅಧಿಕಾರಿ ಸಾವಿನ ಸತ್ಯವನ್ನು ಬಯಲಿಗೆ ಎಳೆದು ಸತ್ಯವನ್ನು ಸಮಾಜದ ಮುಂದಿಡುವ ಪ್ರಯತ್ನ ರಾಜ್ಯ ಸರ್ಕಾರ ಮಾಡಲಿಲ್ಲ. ಮಧುಕರಶೆಟ್ಟಿ ಅವರ ನಿಷ್ಠಾವಂತಿಕೆಯೇ ಇದಕ್ಕೆ ಅಡ್ಡಿ ಪಡಿಸಿತೇ? ಮಧುಕರಶೆಟ್ಟಿ ಅವರ ಹೆಸರನ್ನು ರಸ್ತೆಯೊಂದಕ್ಕೆ ನಾಮಕರಣ ಮಾಡುವ ಪ್ರಸ್ತಾಪವನ್ನೇ ಈ ಹಿಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ತಿರಸ್ಕರಿಸಿದ್ದರು. ಇನ್ನು ಸಾವಿನ ಸತ್ಯವನ್ನು ಬಯಲಿಗೆ ಎಳೆಯಲು ಹಾಲಿ ಸಿಎಂ ಮುಂದಾಗಲು ಸಾಧ್ಯವೇ ? ಒಬ್ಬ ಹಿರಿಯ ಐಪಿಎಸ್ ಅಧಿಕಾರಿಯ ಸಾವಿನ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ತನಿಖೆ ನಡೆಸುವ ಇಚ್ಛಾಶಕ್ತಿ ಪ್ರದರ್ಶಿಸದ ರಾಜ್ಯ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಸುತ್ತದೆ.

ಮಧುಕರ ಶೆಟ್ಟಿ ಲೋಕಾಯುಕ್ತ ಎಸ್ಪಿಯಾಗಿದ್ದ ವೇಳೆ ಕೆಐಎಡಿಬಿ ಭೂ ಹಗರಣವನ್ನು ಬಯಲಿಗೆ ಎಳೆದಿದ್ದರು. ಶಾಸಕರೊಬ್ಬರನ್ನು ವಿಧಾನಸೌಧ ಅಂಗಳದಲ್ಲಿ ಬಂಧಿಸಿ ಭ್ರಷ್ಟರ ವಿರುದ್ಧ ಸಮರ ಸಾರಿದ್ದರು. ಅಲ್ಲಿಂದ ಮೊದಲಗೊಂಡ ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಆರೋಪ ಹೊತ್ತ ಮುಖ್ಯಮಂತ್ರಿಯನ್ನು ಜೈಲಿಗೆ ಕಳುಹಿಸಿತ್ತು. ಬಳ್ಳಾರಿ ಗಣಿ ದಣಿಗಳ ಅಬ್ಬರಕ್ಕೆ ಕಡಿವಾಣ ಹಾಕಿತ್ತು. ಇದಕ್ಕೆ ಮೂಲ ನಾಂದಿ ಹಾಡಿದವರು ಮಧುಕರಶೆಟ್ಟಿ ಅವರು ಲೋಕಾಯುಕ್ತ ಸಂಸ್ಥೆಯಲ್ಲಿ ಇಟ್ಟ ದಿಟ್ಟ ಹೆಜ್ಜೆಗಳು. ಈ ಸಿಟ್ಟಿನಿಂದಲೇ ಮಧುಕರಶೆಟ್ಟಿ ಅವರ ಸಾವಿನ ಸತ್ಯದ ಬಗ್ಗೆ ಮೂಡಿರುವ ಅನುಮಾನದ ಬಗ್ಗೆ ತನಿಖೆ ನಡೆಸದೆ ಸರ್ಕಾರವೇ ಸಮಾಧಿ ಮಾಡಿಬಿಟ್ಟಿದೆ.
ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು:
ಹೈದರಾಬಾದ್‌ನಲ್ಲಿರುವ ಲಾಲ್ ಬಹುದೂರ್ ಶಾಸ್ತ್ರಿ ಪೊಲೀಸ್ ಅಕಾಡೆಮಿಗೆ ನಿಯೋಜನೆಗೊಂಡಿದ್ದ ಮಧುಕರಶೆಟ್ಟಿ ಅವರಿಗೆ ಉಸಿರಾಟದ ಸಮಸ್ಯೆ ಹಾಗೂ ಎದೆಯ ಭಾಗದಲ್ಲಿ ಅಸಹಜತೆ ಕಾಣಸಿಕೊಂಡಿತ್ತು. ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿದ್ದ ವೈದ್ಯರ ಬಳಿ ಪರೀಕ್ಷಿಸಿಕೊಂಡಿದ್ದರು. 2018 ಡಿಸೆಂಬರ್ 18 ರಂದು ಬೆಳಗ್ಗೆ 10.30 ರ ವೇಳೆಗೆ ಹೈದರಾಬಾದ್ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮಧುಕರಶೆಟ್ಟಿ ಅವರಿಗೆ ಎಚ್ 1 ಎನ್ 1 ಸೋಂಕು ತಗುಲಿರುವ ಶಂಕೆ ಮೇರೆಗೆ ಕಾಂಟನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು. ಇದೇ ವೇಳೆ ಮಧುಕರಶೆಟ್ಟಿ ಅವರನ್ನು ಐಸಿಯುಗೆ ವರ್ಗಾಯಿಸಿ ಸ್ವೈನ್ ಪ್ಲೂಗೆ ಚಿಕಿತ್ಸೆ ಕೊಟ್ಟಿದ್ದರು.

ಹೀಗೆ ಸುಮಾರು 30 ತಾಸು ಮಧಕರಶೆಟ್ಟಿಯನ್ನು ಐಸಿಯುನಲ್ಲಿಟ್ಟು, ಕಾಂಟಿನೆಂಟಲ್ ಆಸ್ಪತ್ರೆ ವೈದ್ಯರು H1N1 ಅಂತಲೇ ಭಾವಿಸಿ ಚಿಕಿತ್ಸೆ ನೀಡಿದ್ದರು. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಯನ್ನು ತ್ವರಿತವಾಗಿ ಪತ್ತೆ ಮಾಡದೇ ಇನ್ಯಾವುದೋ ಕಾಯಿಲೆಗೆ ಚಿಕಿತ್ಸೆ ಕೊಟ್ಟು ಜೀವ ಉಳಿಸಲು ಅಮೂಲ್ಯವಾಗಿದ್ದ ಆರಂಭದ ಸಮಯವನ್ನು ವ್ಯರ್ಥ ಮಾಡಿದ್ದರು. ಇದು ಮಧುಕರಶೆಟ್ಟಿ ಅಭಿಮಾನಿಗಳಿಗೆ ಮತ್ತು ಸಂಬಂಧಿಕರಲ್ಲಿ ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು.
ಮಧುಕರಶೆಟ್ಟಿ ಅವರ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿ ಬಂತು. ಅಂದು ಹೃದ್ರೋಗ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ರಚಿಸಿದ ಸಮಿತಿ ಒಂದು ವರ್ಷದ ಬಳಿಕ ವರದಿ ನೀಡಿದರು ಸತ್ಯವನ್ನು ಮಾತ್ರ ಬಯಲಿಗೆ ಎಳೆಯುವಲ್ಲಿ ವಿಫಲವಾಗಿತ್ತು. ನ್ಯಾಯಾಂಗ ತನಿಖೆ ಮಾಡಿಸುವ ಮಾತನ್ನಾಡಿದ್ದ ರಾಜ್ಯ ಸರ್ಕಾರ ಕೊನೆಗೂ ಸಾವಿನ ಸತ್ಯವನ್ನು ಹೊರಗೆ ಎಳೆಯಲು ಬಿಡದೇ ಅವರ ವಿರುದ್ಧದ ಸೇಡು ತೀರಿಸಿಕೊಂಡಂತೆ ವರ್ತಿಸುತ್ತಿದೆ. ಉನ್ನತ ಮಟ್ಟದ ತನಿಖೆಗೆ ಅವಕಾಶ ಮಾಡಿಕೊಡಲೇ ಇಲ್ಲ. ಎಲ್ಲಾ ನೋಡಿ ಅನಿವಾರ್ಯವಾಗಿ ಅವರ ಪತ್ನಿ ದೆಹಲಿಯಲ್ಲಿ ಗ್ರಾಹಕರ ವೇದಿಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
-
ಮಾರ್ಚ್ 20ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications