ಚುನಾವಣೆ ಹಿನ್ನೆಲೆ 10 ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ: ಯಾವೆಲ್ಲಾ ರೈಲುಗಳು ಇಲ್ಲಿದೆ ಮಾಹಿತಿ!
ಬೆಂಗಳೂರು,ಮೇ 09: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಮತದಾರರು ತಮ್ಮ ತಮ್ಮ ಊರುಗಳಿಗೆ ಹೋಗಲು ಅನುಕೂಲಕ್ಕಾಗಿ ರಾಜ್ಯದ ಹಲವು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ.
2023 ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಮೇ 10 ರಂದು ರಾಜ್ಯಾದ್ಯಂತ ನಡೆಯುವ ಚುನಾವಣೆ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ 10 ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿದೆ.

ಇನ್ನೂ ಈ ಬಾರೀ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಹಲವು ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದ ಜನರು ತಮ್ಮ ಊರುಗಳಿಗೆ ತೆರಳಿ ಮತದಾನ ಮಾಡಲು ಸಜ್ಜಾಗಿದ್ದಾರೆ. ಹೀಗಾಗಿ ಮತದಾನ ಮಾಡುವ ಪ್ರಯಾಣಿಕರಿಗಾಗಿಯೇ ಮೇ 9 ಹಾಗೂ 10 ರಂದು ಜನ್ ಶತಾಬ್ದಿ ಸೇರಿ ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನ ಅಳವಡಿಸಲಾಗಿದೆ.
ಯಾವ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ?:
ಮೈಸೂರು - ಬಾಗಲಕೋಟ ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17307)
ಈ ರೈಲಿನಲ್ಲಿ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಮಧ್ಯಾಹ್ನ 1.30ಕ್ಕೆ ಮೈಸೂರಿನಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರು ದಿನ ಬಾಗಲಕೋಟೆ ತಲುಪಲಿದೆ. ಮೇ 9 ರಂದು ಹೆಚ್ಚುವರಿ ಬೋಗಿ ಇರಲಿದೆ.
ಬಾಗಲಕೋಟ-ಮೈಸೂರು ಬಸವಾ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 17308)
ಇನ್ನೂ ಬಾಗಲಕೋಟೆ-ಮೈಸೈರು ಬಸವಾ ಎಕ್ಸ್ ಪ್ರೆಸ್ ರೈಲಿನಲ್ಲೂ ಒಂದು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಯನ್ನು ಅಳವಡಿಸಲಾಗಿದೆ. ಈ ರೈಲು ಮಧ್ಯಾಹ್ನ 2.35ಕ್ಕೆ ಬಾಗಲಕೋಟೆಯಿಂದ ಹೊರಟು ಬೆಂಗಳೂರು ಮಾರ್ಗವಾಗಿ ಮರು ದಿನ ಮೈಸೂರಿಗೆ ತಲುಪಲಿದೆ. ಮೇ 10 ರಂದು ಹೆಚ್ಚುವರಿ ಬೋಗಿ ಇರಲಿದೆ.

ಕೆಎಸ್‌ಆರ್ ಬೆಂಗಳೂರು - ನಾಂದೇಡ್ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16593)
ಇನ್ನೂ ಚುನಾವಣೆ ಹಿನ್ನೆಲೆ ಕೆ ಎಸ್ ಆರ್ ಬೆಂಗಳೂರು- ನಾಂದೇಡ್ ಎಕ್ಸ್ ಪ್ರೆಸ್ ರೈಲಿನಲ್ಲೂ ಸಹ ಒಂದು ಸ್ಪೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಮೇ 9 ರಂದು ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗಿದೆ.
ನಾಂದೇಡ್ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16594)
ನಾಂದೇಡ್- ಕೆ ಎಸ್ ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲೂ ಒಂದು ಸ್ಪೀಪರ್ ಬೋಗಿಯನ್ನು ಅಳವಡಿಸಲಾಗಿದೆ. ಮೇ 10 ರಂದು ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗಿದೆ.
ಶತಾಬ್ದಿ ರೈಲಿಗೂ ಹೆಚ್ಚುವರಿ ಬೋಗಿ ಅಳವಡಿಕೆ.
ಚುನಾವಣೆ ಹಿನ್ನೆಲೆ ಶತಾಬ್ದಿ ರೈಲಿಗೂ ಹೆಚ್ಚುವರಿ ಬೋಗಿಗಳನ್ನ ಅಳವಡಿಸಲಾಗಿದೆ. ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ ಜನ್‌ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 12079) ಒಂದು ಸಿಟ್ಟಿಂಗ್ ಬೋಗಿ ಹೆಚ್ಚುವರಿಯಾಗಿ ಅಳವಡಿಸಲಾಗಿದ್ದು, ಮೇ 9 ಹಾಗೂ 10 ರಂದು ಹೆಚ್ಚುವರಿ ಬೋಗಿ ಅಳಡಿಕೆಯಾಗಲಿದೆ.
ಇನ್ನೂ ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು ಜನ್‌ಶತಾಬ್ದಿ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 12080) ಒಂದು ಸಿಟ್ಟಿಂಗ್ ಬೋಗಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಮೇ 9 ಹಾಗೂ 10 ರಂದು ಹೆಚ್ಚುವರಿ ಬೋಗಿ ಅಳಡಿಕೆಯಾಗಲಿದೆ.
ಇತ್ತ ಕಾರವಾರ ಭಾಗದಲ್ಲೂ ಹೋಗುವ ಕೆಎಸ್ಆರ್ ಬೆಂಗಳೂರು - ಕಾರವಾರ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 16595) , ಕಾರವಾರ - ಕೆಎಸ್ಆರ್ ಬೆಂಗಳೂರು (ರೈಲು ಗಾಡಿ ಸಂಖ್ಯೆ 16596) ಈ ರೈಲುಗಳಿಗೆ ಸಂಚರಿಸುವ ದಿನಗಳಂದು ಒಂದು ದ್ವಿತೀಯ ದರ್ಜೆ ಸ್ಲೀಪರ್ ಬೋಗಿಯನ್ನು ಹೆಚ್ಚುವರಿಯಾಗಿ ಅಳಡಿಸಲಾಗಿದೆ.
ಕರ್ನಾಟಕ ಗೋವಾ ರೈಲು
ವಾಸ್ಕೋ-ಡ-ಗಾಮಾ - ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 17309) ಒಂದು ಎರಡನೇ ದರ್ಜೆಯ ಸ್ಲೀಪರ್ ಕೋಚ್ ಅನ್ನು ಸೇರಿಸಿದೆ. ಮೇ 9ರಂದು ಹೆಚ್ಚುವರಿ ಬೋಗಿಗಳ ಅಳವಡಿಕೆ.
ಯಶವಂತಪುರ - ವಾಸ್ಕೋ-ಡ-ಗಾಮಾ (ರೈಲು ಸಂಖ್ಯೆ. 17310) ಎರಡನೇ ದರ್ಜೆಯ ಸ್ಲೀಪರ್ ಕೋಚ್ ಸೇರಿಸಲಾಗಿದೆ. ಮೇ 10ರಂದು ಹೆಚ್ಚುವರಿ ಬೋಗಿಗಳ ಅಳವಡಿಕೆ.












Click it and Unblock the Notifications