ಕೆಂಪೇಗೌಡರ ಪ್ರತಿಮೆ: ಅಶ್ವತ್ಥನಾರಾಯಣ ಕನಸಿನ ಯೋಜನೆ ಎಂದ ಎಸ್.ಆರ್.ವಿಶ್ವನಾಥ್
ಬೆಂಗಳೂರು, ನವೆಂವರ್ 5: ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಸ್ಥಾಪನೆಯು ಅಶ್ವತ್ಥನಾರಾಯಣ ಅವರ ಕನಸಿನ ಯೋಜನೆ ಆಗಿದೆ. ಇದರಿಂದ ಕೆಂಪೇಗೌಡರ ಭವ್ಯ ವ್ಯಕ್ತಿತ್ವವು ಪ್ರತಿಯೊಬ್ಬರಿಗೂ ಅನುಭವಕ್ಕೆ ಬರಲಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯ ಪಟ್ಟರು. ಈ ಯೋಜನೆಯ ಹಿಂದೆ ಸಚಿವರ ಯೋಗದಾನ ಅಮೂಲ್ಯವಾಗಿದೆ. ಇದರ ಪ್ರತಿಯೊಂದು ಹಂತದಲ್ಲೂ ಅವರು ಸಕ್ತಿಯರಾಗಿ ಹರಿಸಿದ್ದಾರೆ. ಈ ಪ್ರಗತಿಯ ಪ್ರತಿಮೆಯು ಬೆಂಗಳೂರಿನ ಯಶೋಗಾಥೆಯನ್ನು ಬಿಂಬಿಸಲಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪವಿತ್ರ ಮೃತ್ತಿಕಾ ಸಂಗ್ರಹವು ಶನಿವಾರ ಯಲಹಂಕದಲ್ಲಿ ಸಾವಿರಾರು ಜನರ ಉತ್ಸಾಹ ಮತ್ತು ಜಯಘೋಷಗಳ ನಡುವೆ ವಿಜೃಂಭಣೆಯಿಂದ ನಡೆಯಿತು.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಮತ್ತು ಪ್ರಾಧಿಕಾರದ ಸದಸ್ಯರೂ ಆದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಎಲ್ಲಾ ಪವಿತ್ರ ಕಲ್ಯಾಣಿ ಪುಷ್ಕರಣಿ ಮತ್ತು ಕೆರೆಕಟ್ಟೆಗಳ ಪವಿತ್ರ ಮೃತ್ತಿಕೆಯನ್ನು ಸಚಿವರು ಮತ್ತು ಶಾಸಕರಿಗೆ ಮೃತ್ತಿಕೆಯನ್ನು ಸ್ವೀಕರಿಸಿದರು

ಆರಂಭದಲ್ಲಿ ಸಚಿವರು ಮತ್ತು ಶಾಸಕರು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗೌರವಾರ್ಪಣೆ ಮಾಡಿದರು. ಬಳಿಕ ಹಳೆ ಆಸ್ಪತ್ರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಹಾದು ಹೋಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ ಅವರು, ಕೆಂಪೇಗೌಡರು ಕಟ್ಟಿದ ಬೆಂಗಳೂರು ಇವತ್ತು ಅಭಿವೃದ್ಧಿಯ ಸಂಕೇತವಾಗಿದೆ. ಹಿಂದೆ ಅಯೋಧ್ಯಾ ಆಂದೋಲನದಲ್ಲಿ ಜನರು ಇಟ್ಟಿಗೆಗಳನ್ನು ಕೊಟ್ಟಂತೆ, ಪಟೇಲರ ಪ್ರತಿಮೆಯ ಸ್ಥಾಪನೆಯ ಸಂದರ್ಭದಲ್ಲಿ ಲೋಹವನ್ನು ಕೊಟ್ಟಂತೆ ಈಗ ರಾಜ್ಯದಲ್ಲಿ ಕೆಂಪೇಗೌಡರ ಗೌರವಾರ್ಥ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಬೆಂಗಳೂರು ಇಂದು ಐಟಿ, ಬಿಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಂಬರ್ ಒನ್ ಎನಿಸಿಕೊಂಡಿದೆ. ಇದಕ್ಕೆ ಕೆಂಪೇಗೌಡರು ಹಾಕಿದ ಭದ್ರ ಬುನಾದಿಯೇ ಕಾರಣ. 2047ರ ಹೊತ್ತಿಗೆ ನಗರವು ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿ ರಾರಾಜಿಸಲಿದೆ. ಎಂದು ಅವರು ಬಣ್ಣಿಸಿದರು.












Click it and Unblock the Notifications