ಉಕ್ಕಿನಮಹಿಳೆ 'ಇಂದಿರಾ' ಎಂದು ನೆನಪಿಸಿಕೊಂಡ ಸಿಎಂಗೆ ಟ್ವಿಟ್ಟಿಗರು ಏನಂದ್ರು?

Posted By:
Subscribe to Oneindia Kannada
   ಇಂದಿರಾ ಗಾಂಧಿಯವರ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ | ಕಾಲೆಳೆದ ಟ್ವಿಟ್ಟಿಗರು | Oneindia Kannada

   ದೇಶದ ಇದುವರೆಗಿನ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಗಾಂಧಿಯವರ ನೂರನೇ ಜನ್ಮದಿನಾಚರಣೆಯನ್ನು ಭಾನುವಾರ (ನ 19) ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ಸರಕಾರ ದಿನಪತ್ರಿಕೆಗಳಲ್ಲಿ ಒಂದು ಪುಟದ ಜಾಹೀರಾತನ್ನೂ ನೀಡಿತು.

   'ಪ್ರತಿಬಾರಿ ನಾವು ಒಬ್ಬರ ಹಸಿವು ತಣಿಸಿದಾಗಲೂ, ಇಂದಿರಾ ಗಾಂಧಿಯವರ ಹೃದಯ ಬೀಗುತ್ತದೆ ಹೆಮ್ಮೆಯಿಂದ' ಎಂದು ಕರ್ನಾಟಕ ಸರಕಾರ ತನ್ನ ಜಾಹೀರಾತಿನಲ್ಲಿ ಇಂದಿರಾ ಅವರನ್ನು ಸ್ಮರಿಸಿಕೊಂಡಿದೆ.

   'ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ'ಗೆ ಮನಮೋಹನ್ ಸಿಂಗ್‌ ಆಯ್ಕೆ

   ದೇಶ ಮತ್ತು ಕೇಂದ್ರ ಸರಕಾರ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯನ್ನು ಆಚರಿಸದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಬೇಸರಿಸಿಕೊಂಡಿದ್ದಾರೆ.

   ಇಂದಿರಾ ಗಾಂಧಿ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಟ್ರೆಂಡಿಂಗ್ ನಲ್ಲಿತ್ತು. ಇಂದಿರಾ ಪರ ವಿರೋಧ ಟ್ವೀಟುಗಳು, ಚರ್ಚೆಗಳ ನಡೆಯುತ್ತಲೇ ಇದ್ದವು. ಭಾರತವನ್ನು ಇಬ್ಭಾಗ ಮಾಡಲು ಹೊರಟಿದ್ದ ಸೆಕ್ಯೂಲರ್ ಶಕ್ತಿಯ ವಿರುದ್ದ ಹೋರಾಡಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತನ್ನ ಅತ್ತೆಯನ್ನು ಸ್ಮರಿಸಿಕೊಂಡಿದ್ದಾರೆ.

   ಇಂದಿರಾ ಗಾಂಧಿ ವಿರುದ್ಧ ಅಪಪ್ರಚಾರ, 'ಪೋಸ್ಟ್‌ಕಾರ್ಡ್‌' ವಿರುದ್ಧ ಕಾಂಗ್ರೆಸ್ ದೂರು

   ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು 'ಉಕ್ಕಿನ ಮಹಿಳೆ' ಎಂದು ಟ್ವೀಟ್ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದ್ದಾರೆ. ಮುಖ್ಯಮಂತ್ರಿಗಳ ಟ್ವೀಟಿಗೆ, ಟ್ವಿಟ್ಟಿಗರು ಎಂದಿನಂತೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ..

   ಸಿದ್ದರಾಮಯ್ಯ, ಇಂದಿರಾ ಗಾಂಧಿ ಸ್ಮರಿಸಿಕೊಂಡಿದ್ದು ಹೀಗೆ..

   ಸಿದ್ದರಾಮಯ್ಯ, ಇಂದಿರಾ ಗಾಂಧಿ ಸ್ಮರಿಸಿಕೊಂಡಿದ್ದು ಹೀಗೆ..

   ತಮ್ಮ ದಿಟ್ಟ ನಿರ್ಧಾರಗಳ ಮೂಲಕ ರಾಷ್ಟ್ರದ ಪ್ರಗತಿಗೆ ಹೊಸ ಆಯಾಮ ನೀಡಿದ ಭಾರತದ ಉಕ್ಕಿನ ಮಹಿಳೆ ಹಾಗೂ ಪ್ರಧಾನಮಂತ್ರಿಯಾಗಿ ಸದಾ ಬಡವರು, ಶೋಷಿತರು, ದುರ್ಬಲ ವರ್ಗದವರ ಏಳಿಗೆಗೆ ಶ್ರಮಿಸಿದ ದಿ. ಇಂದಿರಾ ಗಾಂಧಿಯವರನ್ನು ನಾಡು ಸ್ಮರಿಸುತ್ತದೆ. #Indira100 - ಮುಖ್ಯಮಂತ್ರಿಗಳು ಮಾಡಿದ ಟ್ವೀಟ್.

   20 ಅಂಶಗಳ ಕಾರ್ಯಕ್ರಮ ದೇಶದ ಬಡಬಗ್ಗರು

   20 ಅಂಶಗಳ ಕಾರ್ಯಕ್ರಮ ದೇಶದ ಬಡಬಗ್ಗರು

   20 ಅಂಶಗಳ ಕಾರ್ಯಕ್ರಮ ದೇಶದ ಬಡಬಗ್ಗರು ಎಂದೂ ಮರೆಯದ ಬಡವರ ಬದುಕು ಬಂಗಾರ ಮಾಡುವ ಯೋಜನೆಗಳವು, ಬ್ಯಾಂಕ್ ರಾಷ್ಟ್ರೀಕರಣ, ಉಳುವವನಿಗೇ ಭೂಮಿ ಬಡವರ ನೊಂದವರ ವರಕೊಡುವ ತಾಯಿ - ಇಂದಿರಾ ಅವರನ್ನು ಸ್ಮರಿಸಿಕೊಂಡ ಟ್ವೀಟ್.

   Emergency ಹೆಸರಲ್ಲಿ ದೇಶಭಕ್ತರನ್ನು ಜೈಲಿಗೆ ಹಾಕಿದ ಉಕ್ಕಿನ ಮಹಿಳೆ

   Emergency ಹೆಸರಲ್ಲಿ ದೇಶಭಕ್ತರನ್ನು ಜೈಲಿಗೆ ಹಾಕಿದ ಉಕ್ಕಿನ ಮಹಿಳೆ

   ಕಾಮಿಡಿ ಮಾಡೋಕು ಒಂದು ಇತಿಮಿತಿ ಇರಲಿ, Emergency ಹೆಸರಲ್ಲಿ ದೇಶಭಕ್ತರನ್ನು ಜೈಲಿಗೆ ಹಾಕಿದ ಉಕ್ಕಿನ ಮಹಿಳೆ? ಎಂದು ಸಿಎಂ ಟ್ವೀಟಿಗೆ ವಿರೋಧ ವ್ಯಕ್ತವಾಗಿರುವ ಟ್ವೀಟ್.

   ಬಡತನ ನಿರ್ಮೂಲನ ಮಾಡಲು ಇಂದಿರಾ ಗಾಂಧಿಗೆ ಸಾಧ್ಯವಾಗಿಲ್ಲ

   ಬಡತನ ನಿರ್ಮೂಲನ ಮಾಡಲು ಇಂದಿರಾ ಗಾಂಧಿಗೆ ಸಾಧ್ಯವಾಗಿಲ್ಲ

   ನನಗೆ ಕಾಂಗ್ರೆಸ್ ಸರ್ಕಾರ ಎಂದರೆ ತುಂಬಾ ಅಭಿಮಾನ ಆದರೆ ಅದೇ ಕಾಂಗ್ರೆಸ್ ಸರ್ಕಾರ ನಮ್ಮನ್ನು ಗುರುತಿಸಿಲ್ಲ.... ಅವರ ತಂದೆಯಿಂದ ಇಂದಿರಾ ಅವಧಿಯವರೆಗೂ ಬಡತನ ನಿರ್ಮೂಲನ ಮಾಡಲು ಇಂದಿರಾ ಗಾಂಧಿಗೆ ಸಾಧ್ಯವಾಗಿಲ್ಲ. ಎಪ್ಪತ್ತು ವರ್ಷದಿಂದ ಜನರನ್ನು ಮೂರ್ಖರನ್ನಾಗಿ ಮಾಡಿಕೊಂಡು ಬರುತ್ತಿದ್ದಾರೆ ಕಾಂಗ್ರೆಸ್ಸಿಗರು ಎನ್ನುವ ಟ್ವೀಟ್.

   ರಾಷ್ಟ್ರಪತಿಗಳು ಯಾರು ಅಂತ ಚೀಟಿ ಬರೆದು ಇಟ್ಕೊಳ್ಳಿ

   ರಾಷ್ಟ್ರಪತಿಗಳು ಯಾರು ಅಂತ ಚೀಟಿ ಬರೆದು ಇಟ್ಕೊಳ್ಳಿ

   ನೀವೇ jds ಅಲ್ಲಿ ಇರುವಾಗ ಇಂದಿರಮ್ಮ ಅವರಿಗೆ ಎನ್ ಎನ್ ಮಾತಾಡಿದಿರಾ ಅಂತ ಯೋಚಿಸಿ.. ಹಾಗೆ ಪ್ರಧಾನಿ ಯಾರು ರಾಷ್ಟ್ರಪತಿಗಳು ಯಾರು ಅಂತ ಚೀಟಿ ಬರೆದು ಇಟ್ಕೊಳ್ಳಿ.. ನೀವು ಬೇಕಿದ್ರೆ ನರಹಂತಕ ಅಂತ ಹೇಳ್ಬೋದು

   ಬೇರೆವರು ನಿಮ್ಗೆ ಅಂದ್ರೆ ಅದು ತಪ್ಪು - ಸಿಎಂ ಟ್ವೀಟಿಗೆ ಕಾಲೆಳೆಯುವ ರಿಪ್ಲೈ..

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Former Indian Prime Minister Indira Gandhi is a 'Iron Lady', Karnataka CM Siddaramaiah tweet. Twitterite reply for CM twitter post.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ