Indian Railways: ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ವಿಶೇಷ ರೈಲು, ನಿಲುಗಡೆ ವಿವರ

Special Trains: ಈ ವರ್ಷದ ಕ್ರಿಸ್‌ಮಸ್ ಹಾಗೂ ವರ್ಷಾಂತ್ಯದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ವಿವಿಧ ಮಾರ್ಗದ ರೈಲುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಇದರೊಂದಿಗೆ ಭಾರತೀಯ ರೈಲ್ವೆಯು ವಿವಿಧ ರೂಟ್‌ನಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಬಿಡುಗಡೆ ಮಾಡಿದೆ. ಯಾವೆಲ್ಲ ರೈಲುಗಳು ಸಂಚರಿಸಲಿವೆ, ಸಮಯ, ವೇಳಾಪಟ್ಟಿ ವಿವರ ಇಲ್ಲಿದೆ.

ನೈಋತ್ಯ ರೈಲ್ವೆಯು (SWR) ಹೆಚ್ಚುವರಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿಶೇಷ ರೈಲು ಸೇವೆ ಘೋಷಿಸಿದೆ. SMVT ಬೆಂಗಳೂರು-ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗದಲ್ಲಿ ಒಂದು ಟ್ರಿಪ್‌ನ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಾಡಲಿದೆ. ಈ ರೈಲು ದಕ್ಷಿಣ ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Indian Railways Special Express Trains Bengaluru Kollam and Hubballi Fot Christmas Holidays 2025

ಡಿಸೆಂಬರ್ 27ರಂದು SMVT ಬೆಂಗಳೂರು-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು (06561) ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ಮರು ದಿನ ಡಿಸೆಂಬರ್ 28ರಂದು ಬೆಳಗ್ಗೆ ಕೊಲ್ಲಂ ತಲುಪಲಿದೆ. ಮರಳಿ ಡಿಸೆಂಬರ್ 28ರಂದು ಕೊಲ್ಲಂ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (06561) ಬೆಳಿಗ್ಗೆ ಕೊಲ್ಲಂನಿಂದ ಹೊರಡುತ್ತದೆ. ಮರಳಿ ರಾತ್ರಿ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣಕ್ಕೆ ಬಂದು ಸೇರುತ್ತದೆ.

ಈ ರೈಲು ಮಾರ್ಗಮಧ್ಯ ತುಮಕೂರು, ಅರಸಿಕೆರೆ, ದಾವಣಗೆರೆ, ರಾಣೇಬೆನ್ನೂರು, ಹಾವೇರಿ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಪ್ರಮುಖ ನಿಲ್ದಾಣಗಳ ಜೊತೆ ಸೇಲಂ, ಈರೋಡ್, ತಿರುವಪ್ಪೂರು, ಪಳಕ್ಕಾಡ್, ತ್ರಿಶೂರು, ಅಲುವಾ, ಕೊಚ್ಚಿ ಮೂಲಕ ಗಮ್ಯಸ್ಥಾನಗಳನ್ನು ತಲುಪುತ್ತದೆ.

ಈ ವಿಶೇಷ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿದೆ. ಹಬ್ಬದ ಸಮಯದಲ್ಲಿ ಸಂಚಾರದ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಕಾರಿಯಾಗಲಿವೆ. ಪ್ರಯಾಣಿಕರು ಈ ವಿಶೇಷ ರೈಲುಗಳ ವೇಳಾಪಟ್ಟಿ, ಸಮಯವನ್ನು ನೀವು ಇಂಡಿಯನ್ ರೈಲ್ವೆ ಅಧಿಕೃತ ವೆಬ್‌ಸೈಟ್ http://www.enquiry.indianrail.gov.in ಮೂಲಕ ಪರಿಶೀಲಿಸಬೇಕು.

ರೈಲುಗಳ ಆಗಮನ, ನಿರ್ಗಮನ ಹೆಚ್ಚುವರಿ ವಿವರ

ಎಸ್‌ಎಂವಿಟಿ ಬೆಂಗಳೂರು-ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗದ ರೈಲು (06561) ಡಿ.27 ಬೆಂಗಳೂರಿನಿಂದ ಹೊರಟು 3:10ಕ್ಕೆ ಕೃಷ್ಣರಾಜಪುರಂ ತಲುಪಿ 3:12ಕ್ಕೆ ಹೊರಡುತ್ತದೆ. ನಂತರ 4:00ಕ್ಕೆ ಬಂಗಾರಪೇಟೆ ತಲುಪಿ ಅಲ್ಲಿಂದ 4:02ಕ್ಕೆ ನಿರ್ಗಮಿಸುತ್ತದೆ. ಅದೇ ರೀತಿ ಕ್ರಮವಾಗಿ ಸೇಲಂಗೆ 8-8:03, ಈರೋಡ್ 9:15-9:25ಕ್ಕೆ ಅಲ್ಲಿಂದ ಹೊರಡುತ್ತದೆ. ತಿರುವಪ್ಪೂರು 10:03, ಪೊತಾನೂರ್ 11:14 ಗಂಟೆಗೆ, 12ಗಂಟೆಗೆ ಪಳಕ್ಕಾಡ್, 12:55ಕ್ಕೆ ತ್ರಿಶೂರು, 1:50ಕ್ಕೆ ಅಲುವಾ, 2:13ಕ್ಕೆ ಎರ್ನಾಕುಲಂ ಟೌನ್ ಹಾಗೂ ಮೂಲಕ ಸಾಗಿ ಮರುದಿನ ಬೆಳಗ್ಗೆ 7:25ಕ್ಕೆ ಕೊಲ್ಲಂ ತಲುಪುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+