ನೆಮ್ಮದಿ ಬೇಕಂತೆ! ತಿಂಗಳಿಗೆ 2.5 ಲಕ್ಷ ರೂ. ಸಂಬಳದ ಏರ್‌ಲೈನ್ಸ್ ಉದ್ಯೋಗ ಬಿಟ್ಟು ಮೈಸೂರು ಸೇರಿದ ಯುವಕ: ವಿಡಿಯೋ ವೈರಲ್

ಬೆಂಗಳೂರು: ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಸಿಕ್ಕರೆ ಯಾರಾದರೂ ಸುಲಭವಾಗಿ ಬಿಡುತ್ತಾರೆಯೇ? ಅದರಲ್ಲೂ ವಿದೇಶದಲ್ಲಿ ಕೈತುಂಬಾ ಕಾಸು ತರುವ ಐಷಾರಾಮಿ ಉದ್ಯೋಗವನ್ನ ಬಿಟ್ಟು ತವರಿಗೆ ಮರಳುವ ಸಾಹಸಕ್ಕೆ ಬಹುತೇಕರು ಮುಂದಾಗುವುದಿಲ್ಲ.

ಆದರೆ, ಇಲ್ಲೊಬ್ಬ ಯುವಕ ತಿಂಗಳಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ಸಂಬಳ ಬರುತ್ತಿದ್ದ ಖತಾರ್‌ನ ಪ್ರತಿಷ್ಠಿತ ಏರ್‌ಲೈನ್ಸ್ ಉದ್ಯೋಗವನ್ನ ಬಿಟ್ಟು, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಂದು ನೆಲೆಸಿದ್ದಾರೆ. ಈ ಮೂಲಕ ತಮ್ಮದೇ ಷರತ್ತುಗಳ ಮೇಲೆ ನೆಮ್ಮದಿಯ ಜೀವನ ಕಟ್ಟಿಕೊಂಡಿರುವ ಇವರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

Indian Man Quits Rs 2 5 Lakh Qatar Airline Job to Settle in Mysuru Shares Inspiring Life Story

ಟ್ರಾನ್ಸ್‌ಫಾರ್ಮೇಶನ್ ಕೋಚ್ ಆಗಿರುವ ಆದಿತ್ಯ ಸಿಂಗ್ ಎಂಬುವವರೇ ಈ ದಿಟ್ಟ ನಿರ್ಧಾರ ತೆಗೆದುಕೊಂಡವರು. ಮೂರು ವರ್ಷಗಳ ಹಿಂದೆ ಅವರು ಖತಾರ್‌ನ ಏರ್‌ಲೈನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೈತುಂಬಾ ಸಂಬಳ, ಐಷಾರಾಮಿ ಜೀವನ ಎಲ್ಲವೂ ಇತ್ತು.

ಆದರೆ, ಆ ಕೆಲಸವನ್ನು ಬಿಟ್ಟು ಭಾರತಕ್ಕೆ ಮರಳುವ ಅವರ ನಿರ್ಧಾರ ಕುಟುಂಬಸ್ಥರಿಗೆ ಖುಷಿ ನೀಡಿರಲಿಲ್ಲ. ಆದರೂ ರಿಸ್ಕ್ ತೆಗೆದುಕೊಂಡ ಆದಿತ್ಯ, ಇಂದು ತಮ್ಮ ನಿರ್ಧಾರದ ಬಗ್ಗೆ ಹೆಮ್ಮೆಪಡುತ್ತಿದ್ದಾರೆ. ತಮ್ಮ ಈ ಪಯಣದ ಬಗ್ಗೆ ಅವರು ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಖತಾರ್ ಉದ್ಯೋಗ ತ್ಯಜಿಸಿ ಮೈಸೂರಿನಲ್ಲಿ ಜೀವನ

"ಮೂರು ವರ್ಷಗಳ ಹಿಂದೆ ನಾನು ಖತಾರ್‌ನಲ್ಲಿ ತಿಂಗಳಿಗೆ 2.5 ಲಕ್ಷ ರೂ. ಸಂಪಾದಿಸುತ್ತಿದ್ದೆ. ಕೆಲಸಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಮರಳುವ ನನ್ನ ನಿರ್ಧಾರದಿಂದ ಮನೆಯವರಿಗೆ ಅಷ್ಟಾಗಿ ಖುಷಿಯಿರಲಿಲ್ಲ. ಆದರೆ, ಆ ರಿಸ್ಕ್ ತೆಗೆದುಕೊಂಡಿದ್ದು ಇಂದು ಸಾರ್ಥಕವಾಗಿದೆ. ಈಗ ನಾನು ಮದುವೆಯಾಗಿ ಭಾರತದ ಉತ್ತಮ ಹಾಗೂ ಸ್ವಚ್ಛ ನಗರಗಳಲ್ಲಿ ಒಂದಾದ ಮೈಸೂರಿನಲ್ಲಿ ನೆಲೆಸಿದ್ದೇನೆ. ಇಲ್ಲಿನ ಜೀವನದ ಗುಣಮಟ್ಟ ಅತ್ಯಂತ ಅದ್ಭುತವಾಗಿದೆ," ಎಂದು ಆದಿತ್ಯ ಸಿಂಗ್ ಹಂಚಿಕೊಂಡಿದ್ದಾರೆ.

ಹಣಕ್ಕಿಂತ ನೆಮ್ಮದಿಗೆ ಪ್ರಾಮುಖ್ಯತೆ ನೀಡಿದ ಅವರು, ಮೈಸೂರಿನ ಪ್ರಶಾಂತ ವಾತಾವರಣದಲ್ಲಿ ತಮ್ಮ ಹೊಸ ಬದುಕನ್ನ ಕಂಡುಕೊಂಡಿದ್ದಾರೆ.

ಸವಾಲುಗಳ ನಡುವೆಯೂ ಸ್ವಾತಂತ್ರ್ಯದ ಬದುಕು

ಕೆಲಸ ಬಿಟ್ಟ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಬೆಂಬಲಕ್ಕೆ ನಿಂತಿರಲಿಲ್ಲ ಎಂಬುದನ್ನ ಆದಿತ್ಯ ಈಗ ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ತಾವು ನಡೆಸುತ್ತಿರುವ ಜೀವನ ಸಂಪೂರ್ಣವಾಗಿ ಸುಲಭ ಅಥವಾ ಅತ್ಯಂತ ಆರಾಮದಾಯಕ ಎಂದು ಅವರು ಹೇಳಿಕೊಳ್ಳುವುದಿಲ್ಲ. ವೃತ್ತಿಪರ ಜೀವನದಲ್ಲಿ ಹಲವು ಸವಾಲುಗಳಿವೆ. ಆದರೆ, ತಮ್ಮದೇ ನಿಯಮಗಳ ಮೇಲೆ ಜೀವನ ನಡೆಸುತ್ತಿರುವ ತೃಪ್ತಿ ಅವರಿಗಿದೆ.

"ಕೆಲವೊಮ್ಮೆ ರಾತ್ರಿ ತಡವಾಗಿ ಮಲಗಬೇಕಾದ ದಿನಗಳೂ ಇವೆ, ಆದರೆ ನಿಮ್ಮಿಷ್ಟದಂತೆ ನೀವು ಕೆಲಸ ಮಾಡುವಾಗ ಸಿಗುವ ಸ್ವಾತಂತ್ರ್ಯವೇ ಬೇರೆ. ಈ ಸ್ವಾತಂತ್ರ್ಯದ ಬದುಕಿಗೆ ನಾನು ಸದಾ ಆಭಾರಿಯಾಗಿದ್ದೇನೆ," ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಬೆಂಬಲ

ಆದಿತ್ಯ ಸಿಂಗ್ ಅವರ ಈ ಕಥೆಗೆ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಖತಾರ್ ಏರ್‌ವೇಸ್‌ನಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿ ಬಿಟ್ಟಿದ್ದ ಬಳಕೆದಾರರೊಬ್ಬರು, "ನಾನು ಕೂಡ ಕೆಲಸ ಬಿಟ್ಟಾಗ ಎಲ್ಲರೂ ತಪ್ಪು ನಿರ್ಧಾರ ಎಂದಿದ್ದರು, ಆದರೆ ಇಂದು ನನ್ನದೇ ಆದ ಬದುಕನ್ನ ಕಟ್ಟಿಕೊಳ್ಳುತ್ತಿದ್ದೇನೆ" ಎಂದು ಕಮೆಂಟ್ ಮಾಡಿದ್ದಾರೆ.

ಹಡಗಿನಲ್ಲಿ ಕೆಲಸ ಮಾಡುವ ಮತ್ತೊಬ್ಬರು, "ನಮ್ಮಿಷ್ಟದ ಜನರೊಂದಿಗೆ ಇರುವುದು ಮತ್ತು ನಮಗೆ ಬೇಕಾದ ಕೆಲಸವನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವೇ ನಿಜವಾದ ನೆಮ್ಮದಿ" ಎಂದಿದ್ದಾರೆ. ಬಾಹ್ಯ ನಿರೀಕ್ಷೆಗಳಿಗಿಂತ ವೈಯಕ್ತಿಕ ನೆಮ್ಮದಿಗೆ ಆದ್ಯತೆ ನೀಡುವುದೇ ನಿಜವಾದ ಯಶಸ್ಸು ಎಂದು ನೆಟ್ಟಿಗರು ಆದಿತ್ಯ ಅವರ ನಡೆಯನ್ನ ಶ್ಲಾಘಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+