India TV Opinion Poll, Lok Sabha Election 2024 - Karnataka: ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ, ಇದೆಯಾ ಮೋದಿ ಹವಾ?
ಕೆಲವು ತಿಂಗಳ ಹಿಂದೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವನ್ನು ಸಾಧಿಸಿ ಅಧಿಕಾರಕ್ಕೇರಿತ್ತು. ಆಡಳಿತ ಪಕ್ಷವಾದ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷ ಜೆಡಿಎಸ್ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು.
ಇದೇ ರೀತಿಯ ಮತದಾರರ ಕಾಂಗ್ರೆಸ್ ಪರವಾದ ಗಾಳಿ, ಲೋಕಸಭಾ ಚುನಾವಣೆಯಲ್ಲೂ ಇರಲಿದೆಯೇ? ರಾಜ್ಯ ಮತ್ತು ಕೇಂದ್ರಕ್ಕೆ ನಡೆಯುವ ಚುನಾವಣೆಯಲ್ಲಿ ಮತದಾರರ ಆಯ್ಕೆ ಬೇರೆ ಬೇರೆ ಇರುತ್ತದೆ ಎನ್ನುವುದಕ್ಕೆ ಹಲವು ಚುನಾವಣೆಗಳು ಸಾಕ್ಷಿಯಾಗಿವೆ.

ಒಂದು ವೇಳೆ ಈಗ ಲೋಕಸಭಾ ಚುನಾವಣೆ ನಡೆದರೆ ಯಾರ ಪಕ್ಷದ ಪರವಾಗಿ ಜನರು ವಾಲಿದ್ದಾರೆ ಎನ್ನುವ ವಿಚಾರದ ಬಗ್ಗೆ ಇಂಡಿಯಾ ಟಿವಿ - ಸಿಎನ್ಎಕ್ಸ್ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿದೆ. ಒಟ್ಟಾರೆಯಾಗಿ, ಕೇಂದ್ರದಲ್ಲಿ ಮತ್ತೆ ಎನ್ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಲಲಿದೆಯೇ ಎನ್ನುವುದರ ಬಗ್ಗೆಯೂ ಸಮೀಕ್ಷಾ ವರದಿಯನ್ನು ಬಹಿರಂಗ ಪಡಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಕಳೆದ ಬಾರಿ ಲೋಕಸಭಾ ಚುನಾವಣೆ ಎದುರಿಸಿದ್ದಕ್ಕೂ ಈಗಿನ ಚುನಾವಣೆ ಎದುರಿಸುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಬಿಜೆಪಿ ಈಗ ಅಧಿಕಾರದಲ್ಲಿಲ್ಲ ಮತ್ತು ಕಾಂಗ್ರೆಸ್ಸಿನಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾಗಿದೆ.
ರಾಜ್ಯದ ಒಟ್ಟು 28 ಲೋಕಸಭಾ ಸ್ಥಾನ
ರಾಜ್ಯದ ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 25ಸ್ಥಾನವನ್ನು ಗೆದ್ದಿತ್ತು. ಕಾಂಗ್ರೆಸ್ಸಿನಿಂದ ಡಿ.ಕೆ.ಸುರೇಶ್, ಜೆಡಿಎಸ್ಸಿನಿಂದ ಪ್ರಜ್ವಲ್ ರೇವಣ್ಣ ಮತ್ತು ಪಕ್ಷೇತರರಾಗಿ ಸುಮಲತಾ ಅಂಬರೀಶ್ ಗೆದ್ದಿದ್ದನ್ನು ಬಿಟ್ಟರೆ ಮಿಕ್ಕವರೆಲ್ಲರೂ ಪರಾಭವಗೊಂಡಿದ್ದರು.
ಮುಂಬರುವ ಲೋಕಸಭಾ ಚುನಾವಣೆಗೆ ಪೂರ್ವಭಾಗಿಯಾಗಿ ನಡೆದ ಈ ಸಮೀಕ್ಷೆಯಲ್ಲಿ ಕಳೆದ ಬಾರಿ ಇದ್ದಷ್ಟು ಉತ್ತಮ ಪರಿಸ್ಥಿತಿ ಬಿಜೆಪಿಗೆ ಇಲ್ಲ. ಬದಲಿಗೆ, ಕಾಂಗ್ರೆಸ್ ಹೆಚ್ಚು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎನ್ನುವುದು ಸಮೀಕ್ಷೆಯಲ್ಲಿ ಬಂದ ವರದಿ.
ಒಂದು ವೇಳೆ ಈಗ ಚುನಾವಣೆ ನಡೆದರೆ, ಯಾರಿಗೆ ಎಷ್ಟು ಸ್ಥಾನ?
ಬಿಜೆಪಿ : 20
ಕಾಂಗ್ರೆಸ್ : 07
ಜೆಡಿಎಸ್ : 01
ಇತರರು: 00
ಒಂದು ವೇಳೆ ಈಗ ಚುನಾವಣೆ ನಡೆದರೆ, ಯಾರಿಗೆ ಎಷ್ಟು ಶೇಕಡಾವಾರು ಮತ?
ಬಿಜೆಪಿ : 47%
ಕಾಂಗ್ರೆಸ್ : 40%
ಜೆಡಿಎಸ್ : 9%
ಇತರರು: 4%












Click it and Unblock the Notifications