ಆದಾಯ ತೆರಿಗೆ ಕಟ್ಟಲು ನೂಕುನುಗ್ಗಲು; ವೆಬ್ ಸೈಟ್ ಬಾಗಿಲು ತೆರೆಯೇ ಸೇಸಮ್ಮ!

ಬೆಂಗಳೂರು, ಜುಲೈ 31 : ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವ ದಿನಾಂಕವನ್ನು ಜುಲೈ 31ರ ನಂತರ ಮುಂದೂಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಘೋಷಿಸುತ್ತಿದ್ದಂತೆ, ಆನ್ ಲೈನ್ ಮೂಲಕ ರಿಟರ್ನ್ ಫೈಲ್ ಮಾಡಲು ಪ್ರವಾಹೋಪಾದಿಯಲ್ಲಿ ಅಧಿಕೃತ ತಾಣಕ್ಕೆ ನುಗ್ಗಿದ್ದರಿಂದ ವೆಬ್ ತಾಣವೇ ಕೆಲಸ ಮಾಡುತ್ತಿಲ್ಲ.

ಇದು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ಮಾತ್ರವಲ್ಲ, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಯತ್ನಿಸುತ್ತಿರುವ ಕೋಟ್ಯಂತರ ಜನರಿಗೆ ಭಾರೀ ಆಘಾತ ತಂದಿದೆ. ರಿಟರ್ನ್ ಫೈಲ್ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇಂಟರ್ನೆಟ್ ಸ್ಪೀಡ್ ಅತ್ಯಧಿಕವಾಗಿರುವ ಕಚೇರಿಗಳಲ್ಲಿಯೂ ತೆರಿಗೆದಾರರಿಗೆ ವೆಬ್ ತಾಣ ನಿಲುಕುತ್ತಿಲ್ಲ.

Income tax assessees not able to open official website

ಒಂದೊಂದು ಬಾರಿ ಕನೆಕ್ಷನ್ ಟೈಮ್ಡ್ ಔಟ್ ಅಂತ ಸಂದೇಶ ಬರುತ್ತಿದ್ದರೆ, ಮತ್ತೊಮ್ಮೆ ಸರ್ವರ್ ನಾಟ್ ಫೌಂಡ್ ಎಂಬ ಸಂದೇಶಗಳು ಬಂದು ಕಿರಿಕಿರಿ ಮಾಡುತ್ತಿವೆ. ಕೆಲಬಾರಿ ಹಾಗೂಹೀಗೂ ವೆಬ್ ತಾಣ ತೆರೆದುಕೊಂಡು, ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿದ ನಂತರವೂ ಮುಂದಿನ ಪುಟಗಳು ತೆರೆದುಕೊಳ್ಳುತ್ತಿಲ್ಲ.

ಹೀಗಾದರೆ, ತೆರಿಗೆದಾರರು ರಿಟರ್ನ್ ಫೈಲ್ ಮಾಡುವುದು ಹೇಗೆ? ಕಡೆಯ ದಿನದ ವರೆಗೆ ರಿಟರ್ನ್ ಫೈಲಿಂಗ್ ಮಾಡುವುದನ್ನು ವಿಸ್ತರಿಸಬಾರದು ನಿಜ. ರಿಟರ್ನ್ ಫೈಲ್ ಮಾಡಲು ಸಾಕಷ್ಟು ಕಾಲಾವಕಾಶವೂ ಇರುತ್ತದೆ. ಆದರೆ, ಕಡೆಯ ಘಳಿಗೆಯಲ್ಲಿ ರಿಟರ್ನ್ ಫೈಲಿಂಗ್ ಮಾಡುವವರಿಗೂ ಅನುಕೂಲ ಮಾಡಿಕೊಡಬೇಕಲ್ಲವೆ?

ಇದೊಂದೇ ಕಾರಣವಲ್ಲ, ಇನ್ನೂ ಹಲವಾರು ಕಾರಣಗಳಿಂದಾಗಿ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ದಿನಾಂಕವನ್ನು ಇನ್ನೊಂದು ತಿಂಗಳು ವಿಸ್ತರಿಸಬೇಕೆಂದು ನಾಗರಿಕರು ಇಲಾಖೆಯನ್ನು ಮತ್ತು ಕೇಂದ್ರ ಸರಕಾರವನ್ನು ಕೇಳಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ, ಅನಗತ್ಯವಾಗಿ ಕೇಂದ್ರಕ್ಕೆ ದಂಡ ತೆರಬೇಕಾದಂಥ ಪರಿಸ್ಥಿತಿ ಬರಬಹುದು.

ಅರವತ್ತು ವರ್ಷದೊಳಗಿನ, ವರ್ಷಕ್ಕೆ 2.5 ಲಕ್ಷ ರುಪಾಯಿ ಆದಾಯ ಇರುವವರು ಮತ್ತು ಅವರತ್ತು ವರ್ಷದ ಮೇಲಿನ ಎಂಬತ್ತು ವರ್ಷದೊಳಗಿನ, ವರ್ಷಕ್ಕೆ 3 ಲಕ್ಷ ರುಪಾಯಿ ಆದಾಯ ಗಳಿಸುತ್ತಿರುವವರು ಹಾಗು ಎಂಬತ್ತು ವರ್ಷ ಮೇಲ್ಪಟ್ಟ, 5 ಲಕ್ಷ ರುಪಾಯಿಗಿಂತ ಕಡಿಮೆ ಆದಾಯ ಗಳಿಸುವವರು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬೇಕಿಲ್ಲ.

ಇವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲೇಬೇಕು. ನಿಗದಿತ ಸಮಯ ಮೀರಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿದರೆ ಇಲಾಖೆಗೆ 5 ಸಾವಿರ ರುಪಾಯಿ ದಂಡ ತೆರಬೇಕು, ರಿಟರ್ನ್ ಫೈಲ್ ಮಾಡದಿದ್ದರೆ 10 ಸಾವಿರ ರುಪಾಯಿ ದಂಡ ತೆತ್ತಬೇಕಾಗುತ್ತದೆ.

ಅಧಿಕೃತ ವೆಬ್ ತಾಣದ ಜೊತೆಗೆ ಮಾನ್ಯತೆ ಪಡೆದಿರುವ ಕ್ಲೀಯರ್ ಟ್ಯಾಕ್ಸ್ ಡಾಟ್ ಇನ್ ತಾಣದ ಮೂಲಕವೂ ಆದಾಯ ತೆರಿಗೆದಾರರು ರಿಟರ್ನ್ ಫೈಲ್ ಮಾಡಬಹುದಾಗಿದೆ. ಇದೀಗ ಬಂದಿರುವ ಸಂತಸದ ಮಾಹಿತಿ ಏನೆಂದರೆ, ರಿಟರ್ನ್ ಫೈಲ್ ಮಾಡಲು ಅಂತಿಮ ದಿನಾಂಕವನ್ನು ಆಗಸ್ಟ್ 5ರವರೆಗೆ ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+