ಎರಡು ದಿನಗಳಲ್ಲಿ ನಿಗಮ ಮಂಡಳಿ ನೇಮಕ ಆದೇಶ ಪ್ರಕಟ
ಮಂಗಳೂರು, ಅಕ್ಟೋಬರ್ 30: ನಿಗಮ ಮಂಡಳಿಗಳ ನೇಮಕಾತಿ ಆದೇಶ ಆಯ್ಕೆ ಪಟ್ಟಿ ಅಂತಿಮಗೊಂಡಿದೆ, ಇನ್ನೆರೆಡು ದಿನದಲ್ಲಿ ಆದೇಶ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ (ಅ.30) ತಿಳಿಸಿದರು.
ಇಲ್ಲಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದರಿಗಾರರೊಂದಿಗೆ ಮಾತನಾಡಿದ ಅವರು "ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ನಿಗಮ ಮಂಡಳಿಗಳ ಆಯ್ಕೆ ಪಟ್ಟಿ ಪ್ರಕಟಿಸಲು ಸಾಧ್ಯವಾಗಿಲ್ಲ. ಇನ್ನೆರಡು ದಿನದಲ್ಲಿ ಪೂರ್ಣ ಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಲಾಗುವುದು" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಜಯಂತಿ ಆಚರಣೆ ಕುರಿತು ಮಾತನಾಡಿದ ಅವರು " ಕಳೆದ ವರ್ಷ ಟಿಪ್ಪು ಜಯಂತಿ ನಡೆದಿತ್ತು. ಈ ವರ್ಷವೂ ನಡೆಯುತ್ತದೆ. ಯಾವುದೇ ಸಂಶಯ ಬೇಡ" ಎಂದು ಹೇಳಿದರು.
" ಆರ್ ಎಸ್ ಎಸ್ ಮತ್ತು ಕೋಮುವಾದಿ ಮುಖಂಡರು ಇಂತಹ ವಿಚಾರದಲ್ಲಿ ಸುಮ್ಮನೆ ಇಲ್ಲಸಲ್ಲದ ಗದ್ದಲ ಸೃಷ್ಠಿಸುತ್ತಿದ್ದಾರೆ. ಸರ್ಕಾರ ಇದಕ್ಕೆ ಅವಕಾಶ ನೀಡುವುದಿಲ್ಲ ಸೂಕ್ತ ಕಾನುನು ಕ್ರಮ ಕೈಗೊಳ್ಳುತ್ತದೆ" ಎಂದು ಹೇಳಿದರು.












Click it and Unblock the Notifications