ಚುನಾವಣೆ ಟೂರ್ : ರಾಹುಲ್ -ಅಮಿತ್ ಶಾ ಹೊಸ ದಾಖಲೆ

ಬೆಂಗಳೂರು, ಏಪ್ರಿಲ್ 30 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಸಭೆ, ಸಮಾರಂಭ, ಮತಯಾಚನೆ ಪ್ರಕ್ರಿಯೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಜಿದ್ದಿಗೆ ಬಿದ್ದಂತೆ ಚುನಾವಣೆ ಪ್ರವಾಸ ಕೈಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡು ರಾಜ್ಯದ ಉದ್ದಗಲ ಸುತ್ತಾಡಿದ್ದಾರೆ.

ರಾಹುಲ್ ಗಾಂಧಿ ಅವರು ಎಲ್ಲಾ 30 ಜಿಲ್ಲೆಗಳಲ್ಲಿ ಒಂದು ಸುತ್ತಾಟ ಮುಗಿಸಿದ್ದಾರೆ. ಅಮಿತ್ ಶಾ ಅವರು ಈ ಸಂಖ್ಯೆಗೆ ಸಮೀಪದಲ್ಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದ ಇವರಿಬ್ಬರು ಈಗ ಮೇ ತಿಂಗಳಿನಲ್ಲಿ ಬಿಸಿಲು ಬಾಳೆಹಣ್ಣು ತಿನ್ನಲು ಮತ್ತೆ ಸಿದ್ಧರಾಗಿದ್ದಾರೆ.

In poll bound Karnataka, both Rahul and Shah create records

ರಾಹುಲ್ ಗಾಂಧಿ ಅವರು ಸರಿ ಸುಮಾರು 3,500 ಕಿಲೋಮೀಟರ್ ಸುತ್ತಾಡಿದ್ದಾರೆ. ಮೇ ಮೊದಲ ವಾರದಿಂದ ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ. ರಾಹುಲ್ ಅವರು ಸುತ್ತಾಡಿರುವ ದೂರ ದಾಖಲೆ ನಿರ್ಮಿಸಿದೆ. ಬಳ್ಳಾರಿಯಿಂದ ಕಲಬುರಗಿ ತನಕ 400 ಕಿ.ಮೀ ಕ್ರಮಿಸಿದ್ದಾರೆ. ರೋಡ್ ಶೋ, ಪ್ರಚಾರ ಸಮಾವೇಶಗಳ ವಿಷಯದಲ್ಲಿ ಇಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಸರಣಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+