• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳು : ವಿಧಾನಸೌಧದಿಂದ ಮೈಸೂರಿಗೆ ಹೊರಟ ವಿಂಟೇಜ್ ಕಾರುಗಳು

|

ಬೆಂಗಳೂರು, ಸೆಪ್ಟೆಂಬರ್ 30 : ರಾಯಲ್ ಕ್ಲಾಸಿಕಲ್ ಕಾರ್ ಡ್ರೈವ್ ಟು ಮೈಸೂರು ಕಾರುಗಳ ಜಾಥಾಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಮೈಸೂರು ದಸರಾ 2018ರ ಅಂಗವಾಗಿ ಕಾರುಗಳ ಜಾಥಾ ಆಯೋಜನೆ ಮಾಡಲಾಗಿತ್ತು.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಭಾನುವಾರ ಬೆಂಗಳೂರಿನ ವಿಧಾನಸೌಧದ ಮುಂದೆ ಎಚ್.ಡಿ.ಕುಮಾರಸ್ವಾಮಿ ಅವರು ವಿಂಟೇಜ್ ಕಾರುಗಳ ಜಾಥಾಕ್ಕೆ ಚಾಲನೆ ನೀಡಿದರು. ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಈ ಜಾಥಾವನ್ನು ಆಯೋಜನೆ ಮಾಡಿತ್ತು.

ದಸರೆ ದೀಪಾಲಂಕಾರಕ್ಕೆ ಹೊಸ ಮೆರುಗು: ಝಗಮಗಿಸಲಿವೆ 23 ವೃತ್ತಗಳು

50 ಕ್ಕೂ ಹೆಚ್ಚು ಅತ್ಯಂತ ಹಳೆಯ ಮತ್ತು ಐತಿಹಾಸಿಕ ವಿಂಟೇಜ್ ಮತ್ತು ರಾಯಲ್ ಕ್ಲಾಸಿಕಲ್ ಕಾರುಗಳು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದವು. 19ನೇ ಶತಮಾನದ ಕಾರುಗಳನ್ನು ಅದರ ಮಾಲೀಕರು ಕುಟುಂಬ ಸಮೇತವಾಗಿ ಡ್ರೈವ್ ಮಾಡಿಕೊಂಡು ಮೈಸೂರಿನತ್ತ ತೆರಳಿದರು.

ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

ದಸರಾಕ್ಕೆ ಭರದ ಸಿದ್ಧತೆ: ಬರಲಿವೆ 10 ರಾಜ್ಯಗಳ ಸಾಂಸ್ಕೃತಿಕ ತಂಡ

ಎಚ್.ಡಿ.ಕುಮಾರಸ್ವಾಮಿ ಅವರು ಸಹ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ವಿಧಾನಸೌಧದಿಂದ ಕಬ್ಬನ್ ಪಾರ್ಕ್ ತನಕ ವಿಂಟೇಜ್ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಬಗೆ ಬಗೆಯ ಕಾರುಗಳು ಹೇಗಿದ್ದವು ಚಿತ್ರಗಳಲ್ಲಿ ನೋಡಿ....

50ಕ್ಕೂ ಹೆಚ್ಚು ಕಾರುಗಳು

50ಕ್ಕೂ ಹೆಚ್ಚು ಕಾರುಗಳು

ಗಣ್ಯರು ಬಳಸಿದ್ದ ಕಾರು, ರಾಜರು ಓಡಾಡಿದ್ದ ಕಾರು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಮಾದರಿಯ ಅತ್ಯಂತ ಹಳೆಯ ಕಾರುಗಳು ಇಂದು ಬೆಂಗಳೂರಿನ ರಸ್ತೆಗೆ ಇಳಿದಿದ್ದವು. ಹಳೆಯ ಕಾರುಗಳನ್ನು ಬೆಂಗಳೂರಿನಿಂದ ಮೈಸೂರಿಗೆ ತೆಗೆದುಕೊಂಡು ಹೋಗುವ ಮೂಲಕ 2018ರ ಮೈಸೂರು ದಸರಾಕ್ಕೆ ಚಾಲನೆ ನೀಡಲಾಯಿತು.

ಬೇರೆ ದೇಶದ ಕಾರುಗಳು

ಬೇರೆ ದೇಶದ ಕಾರುಗಳು

ಬೆಂಗಳೂರಿನ ವಿಧಾನಸೌಧದಿಂದ ಮೈಸೂರಿನ ತನಕ ವಿಂಟೇಜ್ ಕಾರುಗಳ ಜಾಥಾ ಆಯೋಜನೆ ಮಾಡಲಾಗಿತ್ತು. ಕರ್ನಾಟಕ 16, ಫ್ರಾನ್ಸ್‌ನ 1, ಶ್ರೀಲಂಕಾದ 9, ಇಂಗ್ಲೆಡ್‌ನ 1 ಸೇರಿದಂತೆ ದೇಶದ ವಿವಿಧ ಭಾಗಗಳಿಂದ 22 ಕಾರುಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು.

ಮೈಸೂರಿನ ನೀಲಿಯ ಬಾನಂಗಳದಲ್ಲಿ ಹಾರಾಡಿದ ಹಾವು, ರೈಲು, ಹುಲಿ... !

ನೆಹರು ಬಳಸಿದ್ದ ಕಾರು

ನೆಹರು ಬಳಸಿದ್ದ ಕಾರು

ವಿಂಟೇಜ್ ಕಾರುಗಳು ಅತ್ಯಂತ ಹಳೆಯದಾಗಿದ್ದು ಗಮನ ಸೆಳೆದವು. 1928ರಲ್ಲಿ ಮೋತಿಲಾಲ್ ನೆಹರು ಬಳಸಿದ್ದ ಕಾರು ಜಾಥಾದಲ್ಲಿ ಎಲ್ಲರ ಗಮನ ಸೆಳೆಯಿತು. 1922ಕ್ಕೆ ಸೇರಿದ್ದ ವಿಂಟೇಜ್ ಕಾರನ್ನು ಲಂಡನ್‌ನ ಪ್ಯಾಂಟ್ರಿಕ್ ರೋಲೇ ದಂಪತಿಗಳು ಜಾಥಾಕ್ಕಾಗಿ ಬೆಂಗಳೂರಿಗೆ ತಂದಿದ್ದರು.

ವಿಧಾನಸೌಧ ರೌಂಡ್ಸ್

ವಿಧಾನಸೌಧ ರೌಂಡ್ಸ್

ಮೋತಿಲಾಲ್ ನೆಹರು ಬಳಸಿದ್ದ ವಿಂಟೇಜ್ ಕಾರಿನಲ್ಲಿ ಕುಳಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸೌಧಕ್ಕೆ ಒಂದು ಸುತ್ತು ಹಾಕಿದರು. ಕಾರಿನ ಮಾಲೀಕ ರವಿಶಂಕರ್ ಡ್ರೈವ್ ಮಾಡಿದರು. ಕುಮಾರಸ್ವಾಮಿ ಅವರು ಕುತೂಹಲದಿಂದ ಕಾರನ್ನು ವೀಕ್ಷಣೆ ಮಾಡಿದರು.

English summary
Karnataka Chief Minister H.D.Kumaraswamy on Sunday, September 30, 2018 flagged off for the The Royal Classic Car Drive to Mysuru. Federation of Historic Vehicles of India (FHVI) organised the event to kick start the Mysuru Dasara 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X