ಚಿತ್ರಗಳಲ್ಲಿ : ಉಡುಪಿಯಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ
ಉಡುಪಿ,
ನ.24: ಕಾರ್ತಿಕ ಮಾಸದ ಉತ್ಥಾನ ದ್ವಾದಶಿ ದಿನದಂದು ಆರಂಭಗೊಳ್ಳುವ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ಸಾವಿರಾರು ಜನ ಭಕ್ತಾದಿಗಳು ವೀಕ್ಷಿಸಿ ಪುನೀತರಾದರು. ಉಡುಪಿ ಶ್ರೀಕೃಷ್ಣಮಠ ದೀಪಗಳಿಂದ ಕಂಗೊಳಿಸುವ ಚಿತ್ರಗಳು ಇಲ್ಲಿವೆ. id="toptextpromo"> id='are-slot-1' class='oiad oi-axt oiadv'>ಕಾರ್ತಿಕ
ಮಾಸದಲ್ಲಿ ಅಂಧಕಾರವನ್ನು ಕಳೆದು ಎಲ್ಲೆಡೆ ಬೆಳಕು ಹರಿಸುವ ಮೂರು ದಿನಗಳ ದೀಪಾವಳಿ ಹಬ್ಬಕ್ಕೆ ಪೂರಕವಾಗಿ ಬರುವ ತುಳಸಿ ಹಬ್ಬ ಉತ್ಥಾನ ದ್ವಾದಶಿಯ ದಿನದಂದು ಆಚರಿಸಲ್ಪಡುತ್ತದೆ. id='are-slot-2' class='oiad oi-axt oiadv'>ಕಾರ್ತಿಕ
ದೀಪೋತ್ಸವ ನಾಡಿನ ಅನೇಕ ದೇಗುಲಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಉಡುಪಿಯಲ್ಲಿ ಈ ಬಾರಿ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಗಳು ಶ್ರೀಕೃಷ್ಣಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ಮೂರು ದಿನಗಳ ಕಾಲ ನಡೆಯುವ ದೀಪದ ಹಬ್ಬವನ್ನು ಕಣ್ತುಂಬಿಸಿಕೊಳ್ಳಲು ದೂರದ ಊರುಗಳಿಂದ ಭಕ್ತಾದಿಗಳು ಬರುತ್ತಾರೆ.
ಉಡುಪಿಯಲ್ಲಿ ಪಟಾಕಿಗಳ ಸಿಡಿತ, ದೀಪಗಳ ಅಲಂಕಾರ
ಉಡುಪಿಯ ರಥಬೀದಿಯಷ್ಟೇ ಅಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಪಟಾಕಿಗಳ ಸಿಡಿತ, ದೀಪಗಳ ಅಲಂಕಾರ ಕಂಡು ಬಂದಿತು. ಮೂರು ದಿನ ಗಳ ತನಕ ವಿಶೇಷ ಪೂಜೆ, ದೀಪಗಳ ಬೆಳಕಲ್ಲಿ ಉಡುಪಿ ಕಂಗೊಳಿಸಲಿದೆ.

ಗರುಢವಾಹನ (ಬ್ರಹ್ಮ ರಥ) ಸೇವೆ
ಉತ್ಸವ ಮೂರ್ತಿಗಳನ್ನು ಗರುಢವಾಹನ (ಬ್ರಹ್ಮ ರಥ) ಹಾಗೂ ಚಂದ್ರಮೌಲೇಶ್ವರ ರಥದಲ್ಲಿ ಕೂರಿಸಿಕೊಂಡು ರಥಬೀದಿಯಲ್ಲಿ ಸುತ್ತಿ ಬರಲಾಯಿತು. ಈ ಶುಭ ಸಂದರ್ಭವನ್ನು ಕಣ್ಣಾರೆ ಕಂಡು ಸಾವಿರಾರು ಬಂದರು ಪುನೀತರಾದರು

ಮಧ್ವ ಸರೋವರದಲ್ಲಿ ಕೃಷ್ಣ ಸ್ವಾಮಿಗೆ ಕ್ಷೀರಾಭಿಷೇಕ
ವಿದ್ಯಾವಲ್ಲಭತೀರ್ಥ ಸ್ವಾಮೀಜಿಗಳ ಜೊತೆಗೆ ಅದಮಾರು ಮಠ, ಕೃಷ್ಣಾಪುರ, ಫಲಿಮಾರು ಮಠದ ಸ್ವಾಮೀಜಿಗಳು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀಕೃಷ್ಣದೇಗುಲದ ಬಳಿ ಇರುವ ಶ್ರೀಮಧ್ವ ಸರೋವರದಲ್ಲಿ ಕೃಷ್ಣ ಸ್ವಾಮಿಗೆ ಕ್ಷೀರಾಭಿಷೇಕ ನೆರವೇರಿಸಲಾಯಿತು.

ತೆಪ್ಪೋತ್ಸವ ಕಾರ್ಯಕ್ರಮದಲ್ಲಿ
ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಹೂಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಕೃಷ್ಣ, ಮುಖ್ಯಪ್ರಾಣರ ಉತ್ಸವ ಮೂರ್ತಿಗಳನ್ನು ಕೂರಿಸಿಕೊಂಡು ಮಧ್ವ ಸರೋವರದಲ್ಲಿ ಸುತ್ತು ಬರಲಾಯಿತು. ಇದೇ ಸಂದರ್ಭದಲ್ಲಿ ವೇದ ಘೋಷಗಳು, ಭಗವಂತನನ್ನು ಸ್ತುತಿಸುವ ಶ್ಲೋಕಗಳು ಮುಗಿಲು ಮುಟ್ಟಿದವು.

ಶ್ರೀಕೃಷ್ಣಮೂರ್ತಿಗೆ ವಿಶೇಷ ಪೂಜೆ
ಕಾರ್ತಿಕ ಮಾಸದಲ್ಲಿ ಅಂಧಕಾರವನ್ನು ಕಳೆದು ಎಲ್ಲೆಡೆ ಬೆಳಕು ಹರಿಸುವ ಮೂರು ದಿನಗಳ ದೀಪಾವಳಿ ಹಬ್ಬಕ್ಕೆ ಪೂರಕವಾಗಿ ಬರುವ ತುಳಸಿ ಹಬ್ಬ ಉತ್ಥಾನ ದ್ವಾದಶಿಯ ದಿನದಂದು ಆಚರಿಸಲ್ಪಡುತ್ತದೆ.












Click it and Unblock the Notifications