ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಹೇಗಿತ್ತು?

|
Google Oneindia Kannada News

ಬೆಂಗಳೂರು, ಜನವರಿ, 03: ಕರ್ನಾಟಕದಲ್ಲಿ ಭಾನುವಾರ ಮೋದಿ ಹವಾ. ಮೈಸೂರಿನ ವಿಜ್ಞಾನ ಸಮಾವೇಶ ಉದ್ಘಾಟನೆ, ತುಮಕೂರಿನ ಹೆಲಿಕಾಪ್ಟರ್ ಘಟಕಕ್ಕೆ ಶಿಲಾನ್ಯಾಸ, ಆನೆಕಲ್ ತಾಲೂಕಿನ ಜಿಗಣಿಯ ಯೋಗ ಸಮಾವೇಶ ಮೋದಿಯ ಪ್ರಮುಖ ಮೂರು ಕಾರ್ಯಕ್ರಮಗಳು.

ಬೆಳಗ್ಗೆ ಮೈಸೂರಿನಲ್ಲಿ ಸಮಾವೇಶಕ್ಕೆ ಚಾಲನೆ ನೀಡಿದ ಮೋದಿ ನೇರವಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದಿರೆಹಳ್ಳಿ ಕಾವಲ್ ಗೆ ತೆರಳಿ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದರು. ನಂತರ ಜಿಗಣಿಯ ಯೋಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.[ನರೇಂದ್ರ ಮೋದಿ ಭಾಷಣ, ಸಿಎಂ ಸಿದ್ದುಗೆ ನಿದ್ದೆಯೇ ಭೂಷಣ!]

ರೈತರ ಅಭಿವೃದ್ಧಿಗೆ ವಿಜ್ಞಾನ ತಂತ್ರಜ್ಞಾನ ನೆರವಾಗಬೇಕು, ಭಾರತ ಸೇನಾ ಕ್ಷೇತ್ರದಲ್ಲೂ ಸ್ವಾಯುತ್ತತೆ ಸಾಧಿಸಬೇಕು. ಆರೋಗ್ಯ ಕಾಪಾಡಿಕೊಳ್ಳಲು ಯೋಗಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ ಇದು ಮೋದಿ ಭಾಷಣದ ಹೈಲೈಟ್ಸ್. ಹಾಗಾದರೆ ಕರ್ನಾಟಕದಲ್ಲಿ ಮೋದಿ ತಿರುಗಾಟ ಹೇಗಿತ್ತು? ನೋಡಿಕೊಂಡು ಬರೋಣ...

ಡಾ. ಮಂಜುನಾಥ ಅವರಿಗೆ ಅಭಿನಂದನೆ

ಡಾ. ಮಂಜುನಾಥ ಅವರಿಗೆ ಅಭಿನಂದನೆ

ಜಯದೇವ ಆಸ್ಪತ್ರೆಯ ಡಾ. ಸಿ ಎನ್ ಮಂಜುನಾಥ ಅವರಿಗೆ ಮೈಸೂರಿನಲ್ಲಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.

ಸಮಾವೇಶದ ಧ್ಯೇಯ

ಸಮಾವೇಶದ ಧ್ಯೇಯ

ಇಂಡಿಯನ್ ಸೈನ್ಸ್ ಕಾಂಗ್ರೆಸ್ ನ ಧ್ಯೇಯ, ಉದ್ದೇಶಗಳನ್ನೊಳಗೊಂಡ ಕರಪತ್ರಗಳ ಬಿಡುಗಡೆ.

ಸಿಎಂ ಸಿದ್ದರಾಮಯ್ಯ ಭಾಷಣ

ಸಿಎಂ ಸಿದ್ದರಾಮಯ್ಯ ಭಾಷಣ

ಮೈಸೂರಿನ ವಿಜ್ಞಾನ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡರು.

ಜಿಗಣಿ ಯೋಗ ಸಮಾವೇಶ

ಜಿಗಣಿ ಯೋಗ ಸಮಾವೇಶ

ಜಿಗಣಿಯಲ್ಲಿ ಭಾನುವಾರ ನಡೆದ ಯೋಗ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಯೋಗ ಸಮಾವೇಶಕ್ಕೆ ಸಾಕ್ಷಿಯಾದ ಬೃಹತ್ ಜನಸಮೂಹ.

English summary
Prime Minister Narendra Modi visit Karnataka and inaugurate the Indian Science Congress at Mysuru. Lay the foundation stone of Hindustan Aeronautics Limited's (HAL) new helicopter facility on Sunday at Tumakuru District Bidarehallikaval village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X