ಚಿತ್ರಗಳು : ಕುಮಾರಸ್ವಾಮಿ ರಾಜ್ಯ ಪ್ರವಾಸದ ಬಸ್ ವಿಶೇಷತೆಗಳು

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 4 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ರಾಜ್ಯ ಪ್ರವಾಸಕ್ಕೆ ಬಸ್ ಸಿದ್ಧವಾಗಿದೆ. ನವೆಂಬರ್ 7ರಂದು ಮೈಸೂರಿನಿಂದ ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಗ್ರಾಮ ವಾಸ್ತವ್ಯವನ್ನು ನಡೆಸಲಿದ್ದಾರೆ.

ನ.7ರಿಂದ ಎಚ್‌ಡಿಕೆ ರಾಜ್ಯ ಪ್ರವಾಸ, ಗ್ರಾಮ ವಾಸ್ತವ್ಯ ಆರಂಭ

ಪ್ರವಾಸಕ್ಕೆ ಸಿದ್ಧವಾಗಿರುವ ಬಸ್‌ ಅನ್ನು ಶುಕ್ರವಾರ ಕುಮಾರಸ್ವಾಮಿ ಅವರು ವೀಕ್ಷಣೆ ಮಾಡಿ, ಪೂಜೆ ಸಲ್ಲಿಸಿದರು. 'ಕರ್ನಾಟಕ ವಿಕಾಸ ವಾಹಿನಿ' ಎಂಬ ಹೆಸರಿನಲ್ಲಿ ಬಸ್ ಸಿದ್ಧಗೊಳಿಸಲಾಗಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಬಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ವಾಟ್ಸಪ್ ಮೂಲಕವೂ ಜನರನ್ನು ತಲುಪಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರಿನಿಂದ ಕುಮಾರಸ್ವಾಮಿ ರಾಜ್ಯ ಪ್ರವಾಸ ಆರಂಭವಾಗಲಿದೆ. ನವೆಂಬರ್ 7ರಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾವೇಶ ನಡೆಸುವ ಮೂಲಕ ರಾಜ್ಯ ಪ್ರವಾಸ, ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಾಗುತ್ತದೆ.

ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?

ಈಗಾಗಲೇ ಕರ್ನಾಟಕ ಬಿಜೆಪಿ 'ನವ ಕರ್ನಾಟಕ ಪರಿವರ್ತನಾ ಯಾತ್ರೆ' ಹೆಸರಿನಲ್ಲಿ 2018ರ ಚುನಾವಣೆಯ ಪ್ರಚಾರವನ್ನು ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 15ರಿಂದ ಕರ್ನಾಟಕ ಪ್ರವಾಸ ಆರಂಭಿಸಲಿದ್ದಾರೆ. ಬಸ್ಸಿನ ಮಾಹಿತಿ ಚಿತ್ರಗಳಲ್ಲಿ ನೋಡಿ...

ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ, ಮುಂದೇನು?

ಕರ್ನಾಟಕ ವಿಕಾಸ ವಾಹಿನಿ

ಕರ್ನಾಟಕ ವಿಕಾಸ ವಾಹಿನಿ

ಕರ್ನಾಟಕ ವಿಕಾಸ ವಾಹಿನಿ ಎಂಬ ಹೆಸರಿನ ಬಸ್‌ನಲ್ಲಿ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಅಶೋಕ್ ಲೇಲ್ಯಾಂಡ್ ಕಂಪನಿಗೆ ಸೇರಿದ ಬಸ್ ಇದಾಗಿದೆ. ಸ್ಪೇಸ್ ಟೆಕ್ ಎನ್ನುವ ಕಂಪನಿ ಬಸ್ಸನ್ನು ವಿನ್ಯಾಸಗೊಳಿಸಿದೆ. ಪ್ರಕಾಶ್ ಬಸ್ ಕವಚ ನಿರ್ಮಾಣ ಸಂಸ್ಥೆಯಲ್ಲಿ ಬಸ್ ಸಿದ್ಧಪಡಿಸಲಾಗಿದೆ.

ಹಸಿರು, ಬಿಳಿ ಬಣ್ಣ

ಹಸಿರು, ಬಿಳಿ ಬಣ್ಣ

ಹಸಿರು ಮತ್ತು ಬಿಳಿ ಬಣ್ಣಗಳಲ್ಲಿ ಬಸ್ಸನ್ನು ವಿನ್ಯಾಸಗೊಳಿಸಲಾಗಿದೆ. ಮೂರು ತಿಂಗಳ ಕಾಲ ಬಸ್ ವಿನ್ಯಾಸ ಕೆಲಸ ನಡೆದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಬಸ್ ವಿನ್ಯಾಸಗೊಳಿಸಲಾಗಿದೆ.

ಬಸ್ಸಿನಲ್ಲಿಯೇ ವೇದಿಕೆ

ಬಸ್ಸಿನಲ್ಲಿಯೇ ವೇದಿಕೆ

ಮೂರು ಜನರು ಬಸ್ಸಿನ ಮೇಲೆ ನಿಂತು ಭಾಷಣ ಮಾಡುವಂತಹ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಬೆಡ್ ರೂಂ, ಬಾತ್ ರೂಂ, ಅಡುಗೆ ಕೋಣೆಯನ್ನು ಬಸ್ ಹೊಂದಿದೆ. ಸುದ್ದಿ ವಾಹಿನಿಗಳನ್ನು ನೋಡಲು ಅನುಕೂಲವಾಗುವಂತೆ ಟಿವಿ ಆಳವಡಿಸಲಾಗಿದೆ.

ಸಭೆ ಮಾಡಲು ವ್ಯವಸ್ಥೆ

ಸಭೆ ಮಾಡಲು ವ್ಯವಸ್ಥೆ

ಮೂರು-ನಾಲ್ಕು ಜನರು ಬಸ್ಸಿನಲ್ಲಿಯೇ ಕುಳಿತು ಸಭೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಚಲಿಸುವ ವ್ಯವಸ್ಥೆ ಹೊಂದಿರುವ ಆಸನದ ವ್ಯವಸ್ಥೆಯನ್ನು ಬಸ್ಸಿನಲ್ಲಿ ಕುಮಾರಸ್ವಾಮಿ ಅವರಿಗಾಗಿ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The specially designed air-conditioned mini bus, being used by the Karnataka JDS president H.D.Kumaraswamy during state tour for 2018 election campaign. Kumaraswamy will began state tour form November 7 from Mysuru district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ